
ತಮಿಳು ನಟ ಸೂರ್ಯ ಅವರು ಸಮಾಜ ಸೇವೆ, ನಟನೆ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಭಿಮಾನಿಯೊಬ್ಬರ ಮಗುವಿಗೆ ಉಡುಗೊರೆಯಾಗಿ ಚಿನ್ನದ ಸರ ನೀಡಿದ್ದಾರೆ.
ಅಭಿಮಾನಿ ಒಬ್ಬರ ಮಗುವಿನ ಮೊದಲ ಹುಟ್ಟುಹಬ್ಬಕ್ಕೆ ನಟ ಸೂರ್ಯ ಅವರು ಚಿನ್ನದ ಸರ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನಟನ ಸರಳತೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ತಮಿಳು ಭಾಷೆಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ನಟ ಸೂರ್ಯ ಅವರು, ಜನ ಸಾಮಾನ್ಯ– ನ್ಯಾಯಾಂಗ ವ್ಯವಸ್ಥೆ ನಡುವಿನ ಕಥೆ ಹೊಂದಿರುವ ‘ಜೈ ಭೀಮ್’ ಸಿನಿಮಾದ ವಕೀಲರ ಪಾತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ಇವರ ನಟನೆಯ 'ಸೂರರೈ ಪೊಟ್ರು’ ಚಿತ್ರಕ್ಕಾಗಿ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಗಜನಿ, ಸಿಂಘಮ್, ವಾರಣಂ ಆಯಿರಂ, ಪಿತಾಮಗನ್, ನಂದಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ಸೂರ್ಯ ಅವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.