ADVERTISEMENT

ತಮಿಳು ಸೂಪರ್‌ಸ್ಟಾರ್ ಸೂರ್ಯ ಜತೆ ನಟಿಸಲಿರುವ ಬಾಲಿವುಡ್‌ ನಟಿ ರವೀನಾ ಟಂಡನ್‌

ಪಿಟಿಐ
Published 27 ಅಕ್ಟೋಬರ್ 2025, 10:46 IST
Last Updated 27 ಅಕ್ಟೋಬರ್ 2025, 10:46 IST
   

ನವದೆಹಲಿ: ವೆಂಕಿ ಅಟ್ಲೂರಿ ನಿರ್ದೇಶನದ ಮುಂಬರುವ ಚಿತ್ರದಲ್ಲಿ ತಮಿಳು ಸೂಪರ್‌ಸ್ಟಾರ್ ಸೂರ್ಯ ಜತೆ ರವೀನಾ ಟಂಡನ್ ನಟಿಸಲಿದ್ದಾರೆ ಎಂದು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.

ರವೀನಾ ಟಂಡನ್ ಹುಟ್ಟು ಹಬ್ಬಕ್ಕೆ ಶುಭಕೋರಿದ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಿನಿ ನಿರ್ಮಾಣ ಸಂಸ್ಥೆ, ಸೂರ್ಯ ಅವರ 46ನೇ ಚಿತ್ರದಲ್ಲಿ ರವೀನಾ ಅವರು ನಟಿಸಲಿದ್ದಾರೆ. ಈ ಚಿತ್ರವು 2026 ರ ಬೇಸಿಗೆ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದೆ.

ರವೀನಾ ಟಂಡನ್ ಬಾಲಿವುಡ್ ಮಾತ್ರವಲ್ಲದೇ ಸ್ಯಾಂಡಲ್‍ವುಡ್‍ಗೂ ಚಿರಪರಿಚಿತರು. ಪ್ರಶಾಂತ್ ನೀಲ್ ನಿರ್ದೇಶಿಸಿರುವ, ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್2 ಸಿನಿಮಾದಲ್ಲಿ ಪ್ರಧಾನ ಮಂತ್ರಿ ‘ರಮೀಕಾ ಸೇನ್' ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.