ADVERTISEMENT

ಸೂರ್ಯ ನಟನೆಯ ವಿಶ್ವಂತ್ & ಸನ್ಸ್ ಚಿತ್ರದ ಫಸ್ಟ್‌ಲುಕ್ ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 12:41 IST
Last Updated 2 ಮಾರ್ಚ್ 2026, 12:41 IST
   

ನಟ ಸೂರ್ಯ ಅವರ 46ನೇ ಚಿತ್ರಕ್ಕೆ 'ವಿಶ್ವಂತ್ & ಸನ್ಸ್‘ ಎಂಬ ಶೀರ್ಷಿಕೆ ನೀಡಿದ್ದು, ಈ ಸಿನಿಮಾದ ಫಸ್ಟ್‌ಲುಕ್ ಅನಾವರಣ ಮಾಡಲಾಗಿದೆ.

ಈ ಚಿತ್ರದ ಪೋಸ್ಟರ್‌ನಲ್ಲಿ ಸೂರ್ಯ ಅವರು ಮಗು ಒಂದನ್ನು ಹಿಡಿದುಕೊಂಡಿದ್ದಾರೆ. ಈ ಪೋಸ್ಟರ್ ಮೇಲ್ನೋಟಕ್ಕೆ ತಂದೆ–ಮಗುವಿನ ಕಥೆ ಹೇಳುವಂತಿದೆ.

ಈ ಸಿನಿಮಾ ಕುರಿತು ಪೋಸ್ಟರ್ ಹಂಚಿಕೊಂಡ ಸೂರ್ಯ ಅವರು, ‘ವಿಭಿನ್ನ ಪ್ರೀತಿ ಜೊತೆ, ಒಂದು ಪರಿಪೂರ್ಣ ಮನರಂಜನೆಯೊಂದಿಗೆ  ಜುಲೈನಲ್ಲಿ ಬರಲು ಸಜ್ಜಾಗಿದ್ದೆವೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಈ ಚಿತ್ರವನ್ನು ಸಿತಾರ ಎಂಟರ್ಟೈನ್‌ಮೆಂಟ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ‘ಲಕ್ಕಿ ಭಾಸ್ಕರ್‘  ಖ್ಯಾತಿಯ ನಿರ್ದೇಶಕ ವೆಂಕಿ ಅಟ್ಲೂರಿ ಅವರು ನಿರ್ದೇಶನ ಮಾಡಿದ್ದಾರೆ. 

‘ಪ್ರೇಮಲು‘ ಖ್ಯಾತಿಯ ಮಮಿತಾ ಬೈಜು ಈ ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ರವೀನಾ ಟಂಡನ್, ರಾಧಿಕಾ ಶರತ್‌ಕುಮಾರ್, ಭವಾನಿ ಶ್ರೀ ಮತ್ತು ಜಾರ್ನ್ ಸುರಾವೊ ಪ್ರಮುಖ ಪಾತ್ರಗಳಲ್ಲಿ ತಾರಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.