ADVERTISEMENT

ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬಂದ ಬಾಹುಬಲಿ ಬೆಡಗಿ ತಮನ್ನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2022, 12:14 IST
Last Updated 22 ಮಾರ್ಚ್ 2022, 12:14 IST
ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ   

ಬೆಂಗಳೂರು: ‘ಮಿಲ್ಕಿ ಬ್ಯೂಟಿ‘ ಹೆಸರಿನ ಖ್ಯಾತಿಯ ನಟಿ, ತಮನ್ನಾ ಭಾಟಿಯಾ ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬಂದಿದ್ದಾರೆ.

ಬಾಹುಬಲಿ ಸಿನಿಮಾದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ತಮನ್ನಾ ಜನಪ್ರಿಯತೆ ಗಳಿಸಿದ್ದರು.

ಮಾಲ್ಡೀವ್ಸ್‌ಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಅವರು, ಅಲ್ಲಿನ ಕಡಲ ತೀರದ ಸಂಜೆ, ಆಕರ್ಷಕ ತಾಣ ಮತ್ತು ಬೀಚ್‌ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್ ಮತ್ತು ಸ್ಟೋರೀಸ್‌ ಹಾಕಿದ್ದರು.

ADVERTISEMENT

ಅಭಿಮಾನಿಗಳು ತಮನ್ನಾ ಅವರ ಪೋಸ್ಟ್ ನೋಡಿ ಮೆಚ್ಚುಗೆ ಸೂಚಿಸಿದ್ದರು.

ಅಲ್ಲದೆ, ಐಸ್‌ ಕ್ರೀಮ್ ಮಾರಾಟ ಮಾಡುವ ಬೈಸಿಕಲ್‌ನಲ್ಲಿ ಕುಳಿತುಕೊಂಡು ಪೋಸ್ ಕೊಡುವ ಮೂಲಕ, ಯಾರಿಗೆ ಐಸ್‌ ಕ್ರೀಮ್‌ ಬೇಕು ಎಂದು ಕೇಳಿದ್ದರು.

ಮಧುರ್ ಭಂಡಾರ್ಕರ್ ಅವರ ಬಬ್ಲಿ ಬೌನ್ಸರ್ ಚಿತ್ರದಲ್ಲಿ ತಮನ್ನಾ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.