
ಸೆಂಚುರಿಗೌಡ
ಮಂಡ್ಯ: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ‘ತಿಥಿ’ ಸಿನಿಮಾದ ‘ಸೆಂಚುರಿಗೌಡ’ ಪಾತ್ರದಿಂದ ಖ್ಯಾತಿ ಪಡೆದಿದ್ದ ಪಾಂಡವಪುರ ತಾಲ್ಲೂಕಿನ ಸಿಂಗ್ರೇಗೌಡನಕೊಪ್ಪಲು ಗ್ರಾಮದ ಸಿಂಗ್ರೀಗೌಡ (100) ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಸೆಂಚುರಿಗೌಡ
ಮಂಡ್ಯ ನೆಲದ ಸೊಗಡಿನ ಭಾಷೆ ಮತ್ತು ನಟನೆ ಮೂಲಕ ಚಿತ್ರರಸಿಕರನ್ನು ರಂಜಿಸಿದ್ದ ಸಿಂಗ್ರೀಗೌಡರನ್ನು ತಿಥಿ ಸಿನಿಮಾದ ನಂತರ ಎಲ್ಲರೂ ‘ಸೆಂಚುರಿಗೌಡ’ ಎಂದೇ ಕರೆಯುತ್ತಿದ್ದರು. ಕೆಲವು ತಿಂಗಳ ಹಿಂದೆ ಬಿದ್ದ ಪರಿಣಾಮ ಸೊಂಟದ ಮೂಳೆ ಮುರಿದಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ‘ತಿಥಿ‘ ಸಿನಿಮಾದಿಂದ ಗಡ್ಡಪ್ಪ ಎಂದೇ ಹೆಸರಾಗಿದ್ದ ಚನ್ನೇಗೌಡ ಅವರು ನವೆಂಬರ್ 12ರಂದು ಮೃತಪಟ್ಟಿದ್ದರು. ಸ್ನೇಹಿತ ತೀರಿಕೊಂಡ ಬೆನ್ನಲ್ಲೇ ಸೆಂಚುರಿಗೌಡರು ಮೃತರಾಗಿದ್ದಾರೆ ಎಂದು ಊರಿನ ಗ್ರಾಮಸ್ಥರು ತಿಳಿಸಿದರು.
ತಿಥಿ, ತರ್ಲೆ ವಿಲೇಜ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೋಮವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.