ADVERTISEMENT

Kannada New Movie : ‘ಟಾಕ್ಸಿಕ್‌’ನಲ್ಲಿ ಮೆಲಿಸಾಳಾದ ರುಕ್ಮಿಣಿ ವಸಂತ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 1:00 IST
Last Updated 7 ಜನವರಿ 2026, 1:00 IST
ರುಕ್ಮಿಣಿ ವಸಂತ್‌
ರುಕ್ಮಿಣಿ ವಸಂತ್‌   

‘ಕಾಂತಾರ–1’ ಚಿತ್ರದಲ್ಲಿ ಕನಕವತಿಯಾಗಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರುಕ್ಮಿಣಿ ವಸಂತ್‌ ನಕಾರಾತ್ಮಕ ಪಾತ್ರದಲ್ಲಿಯೂ ಮೆಚ್ಚುಗೆ ಗಳಿಸಿದ್ದರು. ಯಶ್‌ ನಟನೆಯ ‘ಟಾಕ್ಸಿಕ್‌’ ಚಿತ್ರದಲ್ಲಿಯೂ ಇವರು ನಕಾರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ ಇತ್ತೀಚೆಗಷ್ಟೆ ಬಿಡುಗಡೆಗೊಂಡ ಅವರ ಪಾತ್ರ ಪರಿಚಯದ ಪೋಸ್ಟರ್‌. 

ಚಿತ್ರದಲ್ಲಿ ಮೆಲಿಸಾ ಆಗಿ ರುಕ್ಮಿಣಿ ಕಾಣಿಸಿಕೊಂಡಿದ್ದಾರೆ. ತುಸು ಗ್ಲಾಮರಸ್ ಧಿರಿಸು ಧರಿಸಿರುವ ಇವರು ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿಯೊಂದರ ನಡುವಿನಿಂದ ನಡೆದು ಬರುವ ಭಂಗಿಯಲ್ಲಿನ ಇವರ ಪೋಸ್ಟರ್‌ ಇಂಗ್ಲಿಷ್‌ ಸಿನಿಮಾ ನಾಯಕಿಯರನ್ನು ನೆನಪಿಸುತ್ತಿದೆ. ಚಿತ್ರದಲ್ಲಿ ಹಲವು ನಾಯಕಿಯರಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಅವರುಗಳ ಪೋಸ್ಟರ್​​ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಗೋವಾದಲ್ಲಿನ ಡ್ರಗ್ಸ್‌ ಮಾಫಿಯಾದ ಕಥೆಯನ್ನು ಚಿತ್ರ ಹೊಂದಿದೆ. ಚಿತ್ರಕ್ಕೆ ಗೀತು ಮೋಹನ್​​ದಾಸ್‌ ಆ್ಯಕ್ಷನ್‌ ಕಟ್‌ ಹೇಳಿದ್ದು, ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ. ಯಶ್ ಅವರು ತಮ್ಮ ಮಾನ್​​ಸ್ಟರ್ ಮೈಂಡ್​ ನಿರ್ಮಾಣ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ, ರಾಜೀವ್‌ ರವಿ ಛಾಯಾಚಿತ್ರಗ್ರಹಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.