ADVERTISEMENT

'ನನ್ನ ಹೆಸರಿನ ದೇವಾಲಯ ಇದೆ' ಎಂದು ವಿವಾದ ಮೈಮೇಲೆಳೆದುಕೊಂಡ ನಟಿ ಊರ್ವಶಿ ರೌಟೆಲಾ

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2025, 7:31 IST
Last Updated 21 ಏಪ್ರಿಲ್ 2025, 7:31 IST
ಊರ್ವಶಿ ರೌಟೇಲಾ
ಊರ್ವಶಿ ರೌಟೇಲಾ   

ಬೆಂಗಳೂರು: ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಊರ್ವಶಿ, ‘ಉತ್ತರಾಖಂಡದ ಬದ್ರಿನಾಥ್ ಬಳಿ ನನ್ನ ಹೆಸರಿನ ದೇವಾಲಯ ಇದೆ’ ಎಂದು ಹೇಳಿದ್ದರು.

ಅವರು ಹೀಗೆ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹರಿದಾಡಿದೆ. ಇದು ಉತ್ತರಾಖಂಡದ ಕೆಲ ಜನರನ್ನು ಕೆರಳುವಂತೆ ಮಾಡಿದೆ.

ADVERTISEMENT

ಇದಕ್ಕೆ ಕಾರಣ ಬದ್ರಿನಾಥ್ ಬಳಿ ‘ಮಾತಾ ಊರ್ವಶಿ’ ದೇವಾಲಯವಿದೆ. ಹೀಗಾಗಿ ಕೋಪಗೊಂಡಿರುವ ಊರ್ವಶಿ ದೇವಾಲಯದ ಪುರೋಹಿತರು, ಸ್ಥಳೀಯರು ಕೆಲ ಉತ್ತರಾಖಂಡದ ಜನ ಊರ್ವಶಿ ವಿರುದ್ಧ ಕಿಡಿಕಾರಿದ್ದಾರೆ.

ಊರ್ವಶಿ ಅವರು ನಮ್ಮ ಭಾವನೆಗಳಿಗೆ ದಕ್ಕೆ ತಂದಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕಡೆಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಊರ್ವಶಿ ರೌಟೆಲಾ ತಂಡದವರು. ‘ನಮ್ಮ ಮೇಡಂ ಹೇಳಿದ್ದು ಉತ್ತರಾಖಂಡದಲ್ಲಿ ನನ್ನ ಹೆಸರಿನ (ಊರ್ವಶಿ) ದೇವಾಲಯವಿದೆ ಎಂದು, ಅವರು ಊರ್ವಶಿ ರೌಟೇಲಾ ದೇವಾಲಯವಿದೆ ಎಂದು ಹೇಳಿಲ್ಲ. ನೀವು ತಪ್ಪಾಗಿ ತಿಳಿದುಕೊಂಡರೇ ನಾವೇನು ಮಾಡುವುದಕ್ಕೆ ಆಗುತ್ತದೆ’ ಎಂದು ತೇಪೆ ಹಚ್ಚಿದ್ದಾರೆ.

ಪುರೋಹಿತರಿಂದ ದೂರು ಸ್ವೀಕರಿಸಿರುವ ಉತ್ತರಾಖಂಡ ಪೊಲೀಸರು ಊರ್ವಶಿ ಅವರ ಮೇಲೆ ಕೇಸ್ ದಾಖಲಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.