ಬಿಗ್‌ಬಾಸ್ 11ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಉಗ್ರಂ ಮಂಜು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಚಿತ್ರ ಕೃಪೆ: ಇನ್ಸ್ಟಾಗ್ರಾಮ್
ಬಿಗ್ ಬಾಸ್ 12ನೇ ಆವೃತ್ತಿಯಲ್ಲೂ ಕೆಲ ದಿನಗಳ ಕಾಲ ಬಿಗ್ ಬಾಸ್ ಮನೆಗೆ ಉಗ್ರಂ ಮಂಜು ಹೋಗಿದ್ದರು.
ನಟ ಉಗ್ರಂ ಮಂಜು ಮನೆಯಲ್ಲಿ ಈಗಾಗಲೇ ಮದುವೆ ಕಾರ್ಯಕ್ರಮಗಳು ಆರಂಭಗೊಂಡಿದ್ದು, ನಿನ್ನೆ ಅರಶಿಣ ಹಾಗೂ ಮೆಹೆಂದಿ ಶಾಸ್ತ್ರಗಳು ನಡೆದಿವೆ.
ಅಪ್ಪ ಅಮ್ಮನ ಜೊತೆ ಮೆಹೆಂದಿ ಶಾಸ್ತ್ರ ಹಾಗೂ ಹಳದಿ ಶಾಸ್ತ್ರವನ್ನು ಮಂಜು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.
ಹಳದಿ ಶಾಸ್ತ್ರದ ವೇಳೆ ಉಗ್ರಂ ಮಂಜು ಅವರು ಕುಟುಂಬದವರ ಜೊತೆ ಹೆಜ್ಜೆ ಹಾಕಿದ್ದಾರೆ.
ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ಅವರು ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕುರಿತು ಮಂಜು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಸಾಯಿ ಸಂಧ್ಯಾ ಹಾಗೂ ಉಗ್ರಂ ಮಂಜು ಅವರು ಧರ್ಮಸ್ಥಳದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಮಂಜು ಕೈ ಹಿಡಿಯಲಿರುವ ಸಾಯಿ ಸಂಧ್ಯಾ ಅವರ ಮನೆಯಲ್ಲೂ ಹಳದಿ ಶಾಸ್ತ್ರ ರಂಗೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.