ADVERTISEMENT

ಜಿಮ್‌ನಲ್ಲಿ ವರ್ಕೌ‌ಟ್: ವಿಕ್ಕಿ ಕೌಶಲ್ ಫಿಟ್ನೆಸ್‌ಗೆ ಫಿದಾ ಆದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2021, 8:16 IST
Last Updated 2 ಆಗಸ್ಟ್ 2021, 8:16 IST
ನಟ ವಿಕ್ಕಿ ಕೌಶಲ್ ಇನ್‌ಸ್ಟಾಗ್ರಾಂ ಪೋಸ್ಟ್
ನಟ ವಿಕ್ಕಿ ಕೌಶಲ್ ಇನ್‌ಸ್ಟಾಗ್ರಾಂ ಪೋಸ್ಟ್   

ಬೆಂಗಳೂರು: ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಜಿಮ‌್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಕ್ಕಿ ಕೌಶಲ್ ಫೋಟೊಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಉಗ್ರದಾಳಿಯ ವಿರುದ್ಧದ ಹೋರಾಟದ ಕಥೆ ಹೊಂದಿದ್ದ ‘ಉರಿ’ ಚಿತ್ರ ವಿಕ್ಕಿ ಕೌಶಲ್‌ಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು.

ADVERTISEMENT

ಹೊಸ ಫೋಟೊಗೆ ವಿಕ್ಕಿ ಕೌಶಲ್, ‘WIP’ ಎಂದು ಅಡಿಬರಹ ನೀಡಿದ್ದಾರೆ. ಕೆಲಸ ಪ್ರಗತಿಯಲ್ಲಿದೆ ಎನ್ನುವ ಅರ್ಥದಲ್ಲಿ ವಿಕ್ಕಿ ಕೌಶಲ್‌ ಈ ಮಾತು ಹೇಳಿದ್ದಾರೆ.

ವಿಕ್ಕಿ ಫಿಟ್ನೆಸ್ ಕಂಡು ಬಾಲಿವುಡ್ ಮಂದಿ ಮತ್ತು ಅಭಿಮಾನಿಗಳು ಕಮೆಂಟ್ ಮೂಲಕ ಶಹಬ್ಬಾಸ್ ಹೇಳಿದ್ದಾರೆ.

ನಟ ಅಮೊಲ್ ಪರಾಶರ್, ಅಲಿಶಾ ಸಿಂಗ್, ಅಮೃತಾ ಖಾನ್ವಿಲ್ಕರ್ ಸಹಿತ ಹಲವು ಪ್ರಮುಖರು ವಿಕ್ಕಿ ಫಿಟ್ನೆಸ್‌ಗೆ ಫಿದಾ ಆಗಿದ್ದಾರೆ. ವಿಕ್ಕಿ ಫೋಟೊಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.