ADVERTISEMENT

ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಚಿತ್ರದ ಹಾಡು ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2026, 10:46 IST
Last Updated 10 ಜನವರಿ 2026, 10:46 IST
   

ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ' ಚಿತ್ರದ  ‘ತೊಟ್ಟಿಮನೆ ಸುಣ್ಣುದ್ ಗೋಡೆ’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಸಂಪೂರ್ಣವಾಗಿ ಹಳ್ಳಿಚಿತ್ರಣ ಹೊಂದಿರುವ ‘ತೊಟ್ಟಿಮನೆ ಸುಣ್ಣುದ್ ಗೋಡೆ’  ಹಾಡಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ಗ್ರಾಮಾಯಣ' ಚಿತ್ರದ  ‘ತೊಟ್ಟಿಮನೆ ಸುಣ್ಣುದ್ ಗೋಡೆ’  ಹಾಡಿಗೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಸಾಹಿತ್ಯ ಬರೆದು ಹಾಡಿದ್ದಾರೆ. ದೇವನೂರು ಚಂದ್ರು ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್, ಯೋಗೇಶ್, ಮೇಘಾ ಶೆಟ್ಟಿ, ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ಅರುಣ್ ಸಾಗರ್, ಅಪರ್ಣಾ ವಸ್ತಾರೆ, ಜಹಂಗೀರ್, ಬಾಲರಾಜವಾಡಿ, ಅಶೋಕ್ ಜಂಬೆ, ಸೀತಾ ಕೋಟೆ, ಸರ್ದಾರ್ ಸತ್ಯ, ಪ್ರಶಾಂತ್ ಹೊನಲಿ, ಭರತ್, ಅವಿನಾಶ್ ಸೇರಿ ಅನೇಕರು ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT