
ರಣವೀರ್ ಸಿಂಗ್
ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣದ ಬಾಲಿವುಡ್‌ನ ‘ಧುರಂಧರ್’ ಸಿನಿಮಾ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಸಾರಾ ಅರ್ಜುನ್ ನಟನೆಯ ಈ ಸಿನಿಮಾ 2025ರ ಡಿಸೆಂಬರ್ 25ರಂದು ಭಾರತ ಸೇರಿ ಜಗತ್ತಿನಾದ್ಯಂತ ತೆರೆಕಂಡಿತ್ತು. ಆದರೆ ಪಾಕಿಸ್ತಾನ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಈಗ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಸಿಗುತ್ತಿದೆ. ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡ ಧುರಂಧರ್ ನೋಡಿ ಪಾಕ್ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ.
ಈ ಚಿತ್ರವನ್ನು ವೀಕ್ಷಿಸಿದ ಪಾಕಿಸ್ತಾನಿ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರೆಡ್ಡಿಟ್ ಬಳಕೆದಾರರೊಬ್ಬರು, ‘ ಸಿನಿಮಾದಲ್ಲಿ ಉರ್ದು ಮತ್ತು ಕರಾಚಿ ಭಾಷೆ ಎಷ್ಟು ನಿಖರವಾಗಿದೆ ಎಂದು ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು, ನಾನು ಕರಾಚಿಯಲ್ಲಿ ಹುಟ್ಟಿ ಬೆಳೆದಿರುವೆ. ಈ ಚಿತ್ರವು ನನ್ನನ್ನು ನಿಜಕ್ಕೂ ಅಚ್ಚರಿಯುಂಟು ಮಾಡಿದೆ. ಚಿತ್ರದಲ್ಲಿ ಪಾಕಿಸ್ತಾನಿ ಭಾಷೆಯನ್ನೇ ಬಳಸಲಾಗಿದೆ ಎಂದು ಭಾಸವಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಧುರಂಧರ್ ಸಿನಿಮಾ ಪ್ರದರ್ಶನಕ್ಕೆ ನಿಷೇಧವಿದ್ದರೂ ಕೆಲ ಯುವತಿಯರು ಸಂಗೀತ ಕಾರ್ಯಕ್ರಮದಲ್ಲಿ ಈ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು, ಜತೆಗೆ ವಿಡಿಯೊಗಳೂ ಹರಿದಾಡಿದ್ದವು.
‘ಧುರಂಧರ್‘ ಮುಂದುವರಿದ ಭಾಗ 'ಧುರಂಧರ್ 2' ಚಿತ್ರದ ಟ್ರೇಲರ್ ಫೆ.3ರಂದು ಬಿಡುಗಡೆಯಾಗಿದೆ. ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.