ADVERTISEMENT

ಒಟಿಟಿಗೆ ಬರಲಿದೆ ಸೃಜನ್ ಲೋಕೇಶ್ ನಟನೆಯ ಹಾರರ್ ಸಿನಿಮಾ ‘ಜಿಎಸ್‌ಟಿ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2026, 8:20 IST
Last Updated 16 ಫೆಬ್ರುವರಿ 2026, 8:20 IST
   

ಸ್ಯಾಂಡಲ್‌ವುಡ್‌ ನಟ ಸೃಜನ್ ಲೋಕೇಶ್ ನಟನೆಯ ಹಾರರ್–ಕಾಮಿಡಿ ಸಿನಿಮಾ ‘ಜಿಎಸ್‌ಟಿ – ಗೋಸ್ಟ್ಸ್‌ ಇನ್‌ ಟ್ರಬಲ್’ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾವು ಸ್ಟ್ರೀಮಿಂಗ್ ಆಗುತ್ತಿದೆ.

2025ರ ನವೆಂಬರ್‌ 28ರಂದು ಚಿತ್ರವು ಬಿಡುಗಡೆಯಾಗಿತ್ತು. ನಟ ಸೃಜನ್ ಲೋಕೇಶ್ ಅವರೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.

ADVERTISEMENT

ಚಿತ್ರದಲ್ಲಿ ಸೃಜನ್ ಲೋಕೇಶ್, ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ತಬಲ ನಾಣಿ, ವಿನಯ ಪ್ರಸಾದ್, ರವಿಶಂಕರ್ ಗೌಡ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರಮಂದಿರದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಜಿಎಸ್‌ಟಿ ಚಿತ್ರವು, 132 ನಿಮಿಷಗಳ ಅವಧಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.