ಮುಂಬೈ: ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ಕಿರು ಚಿತ್ರ ‘ಅನುಜಾ’ ಫೆ.5 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣುತ್ತಿದೆ.
ಆ್ಯಡಂ ಜೆ. ಗ್ರೇವ್ಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಾಲಿವುಡ್‌ನ ಸ್ಟಾರ್ ಬರಹಗಾರ ಮಿಂಡಿ ಕಲಿಂಗ್ ನಿರ್ಮಿಸಿದ್ದು, ಎರಡು ಬಾರಿ ಆಸ್ಕರ್ ಗೆದ್ದ ಗುನೀತ್ ಮೊಂಗಾ ಹಾಗೂ ಪ್ರಿಯಾಂಕಾ ಚೋಪ್ರಾ ಸಹ ನಿರ್ಮಾಪಕರಾಗಿದ್ದಾರೆ.
'ಅನುಜಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣುವ ಮೂಲಕ ಕನಸೊಂದು ನನಸಾಗಿದೆ. ಈಗ ಚಿತ್ರವನ್ನು ಜಗತ್ತಿನಲ್ಲಿರುವ ಎಲ್ಲ ವೀಕ್ಷಕರು ನೋಡಬಹುದು" ಎಂದು ನಿರ್ಮಾಪಕರು ಖುಷಿ ಹಂಚಿಕೊಂಡಿದ್ದಾರೆ.
ಮುಂಬರುವ 97ನೇ ಆಸ್ಕರ್ ಪ್ರಶಸ್ತಿಗೆ ಲೈವ್ ಆಕ್ಷನ್ ಕಿರು ಚಿತ್ರ ವಿಭಾಗದಲ್ಲಿ ಅನುಜಾ ನಾಮನಿರ್ದೇಶನಗೊಂಡಿದೆ. ಈ ಚಿತ್ರ ‘A Lien’, ‘I’m Not a Robot, ‘The Last Ranger’ ಮತ್ತು ‘The Man Who Could Not Remain Silent’ ಚಿತ್ರಗಳೊಂದಿಗೆ ಸ್ಪರ್ಧಿಸಲಿದೆ.
ಭಾರತೀಯ– ಅಮೆರಿಕನ್ ಚಿತ್ರ ಇದಾಗಿದ್ದು, ವಸತಿ ಶಾಲೆಗೆ ಸೇರಿದ ಬಾಲಕಿಯೊಬ್ಬಳ ಜೀವನದಲ್ಲಿ ಎದುರಾಗುವ ಸವಾಲುಗಳ ಕಥಾಹಂದರವನ್ನು ಹೊಂದಿದೆ. 22 ನಿಮಿಷದ ಈ ಕಿರುಚಿತ್ರ ಹಿಂದಿ ಭಾಷೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.