ADVERTISEMENT

ಬೀಚ್‌ನಲ್ಲಿ ಕುಳಿತು ಮಳೆಗೆ ಹೆದರುವುದಿಲ್ಲ ಎಂದ ಸೋಫಿ ಚೌಧರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2021, 10:16 IST
Last Updated 6 ಅಕ್ಟೋಬರ್ 2021, 10:16 IST
ಸೋಫಿ ಅವರ ಇನ್‌ಸ್ಟಾಗ್ರಾಂ ಪೋಸ್ಟ್
ಸೋಫಿ ಅವರ ಇನ್‌ಸ್ಟಾಗ್ರಾಂ ಪೋಸ್ಟ್    

ಬೆಂಗಳೂರು: ಸೋಫಿ ಚೌಧರಿ ನಟಿಯಾಗಿ, ಟಿವಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಹಾಗೂ ಗಾಯಕಿಯಾಗಿ ಎಲ್ಲರಿಗೂ ಚಿರಪರಿಚಿತ. ಆದರೆ ಅಷ್ಟು ಮಾತ್ರವಲ್ಲದೆ, ಸೋಫಿ ಫಿಟ್ನೆಸ್ ಕುರಿತು ಕೂಡ ಅಪಾರವಾದ ಒಲವು ಹೊಂದಿದ್ದಾರೆ.

ಸೋಫಿ ಅವರ ಫ್ಯಾಷನ್ ಪ್ರಜ್ಞೆ, ಪ್ರಾಣಿ ಪ್ರೇಮದ ಬಗ್ಗೆಯೂ ಆಗಾಗ ಅವರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಸೋಫಿ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೊ ಒಂದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ADVERTISEMENT

ನೀನು ಬಿರುಗಾಳಿಯೇ ಆಗಿರುವಾಗ ಮಳೆಗೆ ಏಕೆ ಹೆದರಬೇಕು ಎಂಬರ್ಥದ ಅಡಿಬರಹ ನೀಡಿ, ಬೀಚ್‌ನಲ್ಲಿ ಕುಳಿತಿರುವ ಫೋಟೊಗಳನ್ನು ಸೋಫಿ ಪೋಸ್ಟ್ ಮಾಡಿದ್ದಾರೆ.

ಒಂದೆಡೆ ನೀಲಾಕಾಶದ, ಮೋಡ ಕವಿದ ಹಿನ್ನೆಲೆಯಿದ್ದರೆ, ಮತ್ತೊಂದೆಡೆ ಸ್ವಚ್ಛ ಕಡಲ ತೀರ, ಸಮುದ್ರವಿದ್ದು, ಸೋಫಿ ಅದಕ್ಕೆ ಒಪ್ಪುವ ಬಣ್ಣದ ಉಡುಗೆ ಕೂಡ ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.