
ನಟ ಅರುಣ್ ಕುಮಾರ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡ ಕಿರುತೆರೆ ನಟ ಅರುಣ್ ಕುಮಾರ್ ಅವರು ರೀತಿಕಾ ಅಶೋಕ್ ಜೊತೆಗೆ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
‘ನಾಗಿಣಿ’, ‘ನನ್ನರಸಿ ರಾಧೆ’, ‘ನೀನಾದೇನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟ ಅರುಣ್ ಕುಮಾರ್ ನವೆಂಬರ್ 30ರಂದು ಮದುವೆ ಆಗಿದ್ದಾರೆ.
ಮದುವೆ ಫೋಟೊಗಳನ್ನು ನಟ ಅರುಣ್ ಕುಮಾರ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಆ ಫೋಟೊಗಳ ಜೊತೆಗೆ ‘30-11-2025, ನನಗೆ ನೀನು, ನಿನಗೆ ನಾನು. ಹೊಸ ಬದುಕಿನ ಹೊಸ ಶುಭಾರಂಭ’ ಎಂದು ಬರೆದುಕೊಂಡಿದ್ದಾರೆ.
ನಟ ಅರುಣ್ ಕುಮಾರ್ ಅವರು ಧಾರಾವಾಹಿ ಅಷ್ಟೇ ಅಲ್ಲದೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಟೈಗರ್ ವಿನೋದ್ ಪ್ರಭಾಕರ್ ಹಾಗೂ ಪದ್ಮಾವತಿ ಫಿಲ್ಮ್ ಹೌಸ್ ಅಡಿಯಲ್ಲಿ ಬರುತ್ತಿರುವ ‘ಬಲರಾಮ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.