
ನಟಿ ನೀತಾ ಅಶೋಕ್
ಚಿತ್ರ: ಇನ್‌ಸ್ಟಾಗ್ರಾಂ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನೀತಾ ಅಶೋಕ್ ಅವರು ಅಂಬಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿ ಚಿತ್ರೀಕರಣದ ವೇಳೆ ನೀತಾ ಅಶೋಕ್ ಅವರ ಕಾಲಿಗೆ ಗಾಯ ಆಗಿದ್ದು, ಹೀಗಾಗಿ ಸರ್ಜರಿಗೆ ಒಳಗಾಗಿದ್ದಾರೆ. ಈ ಬಗ್ಗೆ ನಟಿಯೇ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ನೀತಾ ಅಶೋಕ್ ಇನ್‌ಸ್ಟಾಗ್ರಾಂ ಸ್ಟೋರಿ
ನೀತಾ ಅಶೋಕ್ ಹೇಳಿದ್ದೇನು?
‘ಧಾರಾವಾಹಿ ಚಿತ್ರೀಕರಣದ ವೇಳೆ ಆದ ಸಣ್ಣ ಪಾದದ ಉಳುಕು, ಕೊನೆಗೆ ಮೂಳೆ ಮುರಿತಕೆ ಕಾರಣವಾಯಿತು. ನಮ್ಮ ಇಡೀ ದೇಹದ ತೂಕವನ್ನು ಪಾದವೇ ಹೊರುತ್ತದೆ. ಹೀಗಾಗಿ ಪಾದಕ್ಕೆ ಸರ್ಜರಿ ಮಾಡಬೇಕಾಗಿ ಬಂತು. ಈಗ ಸರ್ಜರಿ ಯಶಸ್ವಿಯಾಗಿ ಮುಗಿದಿದೆ. ಸೂಕ್ತ ಕಾಳಜಿಯೊಂದಿಗೆ ನಾನು ಈಗ ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಕಾಳಜಿ, ಪ್ರಾರ್ಥನೆ ಮತ್ತು ಪ್ರೀತಿಗೆ ತುಂಬಾ ಧನ್ಯವಾದಗಳು. ಈಗ ವಿಶ್ರಾಂತಿ ಪಡೆಯುತ್ತಿದ್ದೇನೆ ಅಲ್ಲಿಯವರೆಗೆ, ನನ್ನನ್ನು ಸ್ವಲ್ಪ ಮಿಸ್ ಮಾಡಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.
ಸದ್ಯ ಧಾರಾವಾಹಿಯಲ್ಲಿ ಅಂಬಿಕಾ ಪತಿ ಶರತ್ ಕನಸಿನಲ್ಲಿ ಬಂದು ‘ನಮ್ಮ ಮಗಳು ಹಿತಾಗಾಗಿ ದುರ್ಗಾ ತನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾಳೆ. ನೀನು ನನ್ನಷ್ಟೇ ದುರ್ಗಾಳನ್ನು ಪ್ರೀತಿ ಮಾಡಬೇಕು. ಅವಳಿಗೂ ಹೆಂಡತಿ ಸ್ಥಾನ ಕೊಡ್ತೀನಿ ಅಂತ ಮಾತು ಕೊಡು’ ಎಂದು ಹೇಳಿದ್ದಳು. ಆಗ ಶರತ್ ಅಂಬಿಕಾಗೆ ಮಾತು ಕೊಡುತ್ತಾರೆ. ಆ ಕೂಡಲೇ ನಿದ್ದೆಯಿಂದ ಎದ್ದ ಶರತ್ ಇನ್ನು ಮುಂದೆ ದುರ್ಗಾಳನ್ನು ಹೆಂಡತಿಯಾಗಿ ಸ್ವೀಕರಿಸುತ್ತೇನೆ ಎಂದು ಹೇಳುತ್ತಾನೆ. ಈ ಮೂಲಕ ದುರ್ಗಾ ಹಾಗೂ ಶರತ್ ಪ್ರೀತಿ ಪಯಣದ ಸಂಚಿಕೆಗಳು ಪ್ರಸಾರವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.