ADVERTISEMENT

ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2026, 5:25 IST
Last Updated 28 ಫೆಬ್ರುವರಿ 2026, 5:25 IST
   

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿರುವ ರಾಣವ್ ಗೌಡ ಹಾಗೂ ರಾಧಾ ಭಗವತಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೊವನ್ನು ಹಂಚಿಕೊಂಡ ಈ ಜೋಡಿ ‘ಕೊನೆಗೂ’ ಎಂದು ಬರೆದುಕೊಂಡಿದೆ.

ಇದೇ ಫೋಟೊ ನೋಡಿದ ಅಭಿಮಾನಿಗಳು ‌ನವ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಜೊತೆಗೆ ನೀವಿಬ್ಬರು ಒಳ್ಳೆಯ ಜೋಡಿ ಎಂದು ಕಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ದಿವಾನ್‌ ಪಾತ್ರದಲ್ಲಿ ರಾಣವ್‌ ಗೌಡ ಅವರು ನಟಿಸುತ್ತಿದ್ದಾರೆ. ಮಲ್ಲಿ ಪಾತ್ರದಲ್ಲಿ ರಾಧಾ ಭಗವತಿ ಅವರು ನಟಿಸಿದ್ದರು.

ಬಳಿಕ ನಟಿ ರಾಧಾ ಅವರು ಧಾರಾವಾಹಿಯಿಂದ ಹೊರಗಡೆ ಬಂದು ಕಲರ್ಸ್ ಕನ್ನಕದಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ ಎಲ್‌ಎಲ್‌ಬಿಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಜೋಡಿ ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕವೇ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. ಸದ್ಯ ಈ ಇಬ್ಬರ ನಿಶ್ಚಿತಾರ್ಥದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.