ADVERTISEMENT

ಧ್ರುವಂತ್‌ ಮೇಲೆ ಸಗಣಿ ನೀರು ಎರಚಿದ ಮಾಳು: ಗಿಲ್ಲಿಗೆ ಬೈದ ರಾಶಿಕ

ಪ್ರಜಾವಾಣಿ ವೆಬ್‌ ಡೆಸ್ಕ್‌
Published 11 ನವೆಂಬರ್ 2025, 6:48 IST
Last Updated 11 ನವೆಂಬರ್ 2025, 6:48 IST

ಚಿತ್ರ ಕೃಪೆ: colorskannadaofficial

ಚಿತ್ರ ಕೃಪೆ: colorskannadaofficial

ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಗಳ ನಡುವೆ ದಿನದಿಂದ ದಿನಕ್ಕೆ ಜಟಾಪಟಿ ಜೋರಾಗುತ್ತಿದೆ. ಕ್ಯಾಪ್ಟನ್‌ ಮಾಳು ಅವರು ಧ್ರುವಂತ್‌ ಹಾಗೂ ರಾಶಿಕಾ ಅವರನ್ನು ಕಳಪೆ ಪಟ್ಟಿಗೆ ಸೇರಿಸಿ ಸಗಣಿ ನೀರು ಮತ್ತು ಕಸ ಸುರಿದಿದ್ದಾರೆ. ಆ ಕಾರಣಕ್ಕೆ ಕ್ಯಾಪ್ಟನ್‌ ವಿರುದ್ಧ ಇಬ್ಬರೂ ಸ್ಪರ್ಧಿಗಳು ಸಿಟ್ಟಾಗಿದ್ದಾರೆ.

ADVERTISEMENT

ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮಾಳು, ಧ್ರುವಂತ್‌, ರಾಶಿಕಾ ಮತ್ತು ಗಿಲ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ.

ವೀಕ್ಷಕರ ಮೂಲಕ ಮನೆಯ ಕ್ಯಾಪ್ಟನ್‌ ಆಗಿ ಆ‌ಯ್ಕೆಯಾದ ಮಾಳು ಅವರಿಗೆ ಬಿಗ್‌ಬಾಸ್‌ ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರ ಪ್ರಕಾರ ಮನೆಯಲ್ಲಿ ಕಳಪೆ ಎನಿಸಿದ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಅವರ ಮೇಲೆ ಸಗಣಿ ನೀರು ಅಥವಾ ಕಸವನ್ನು ಹಾಕಬೇಕಿದೆ.

ಆದರಂತೆ ಮಾಳು, ಧ್ರುವಂತ್‌ ಅವರ ಮೇಲೆ ಸಗಣಿ ನೀರನ್ನು ಸುರಿಯುತ್ತಾರೆ. ಈ ನಿರ್ಧಾರಕ್ಕೆ ಮಾಳು ವಿರುದ್ಧ ಕ್ರಾಕೋಚ್‌ ಸುಧಿ ತಿರುಗಿ ಬೀಳುತ್ತಾರೆ.

ಕಳಪೆ ಪ್ರದರ್ಶನ ತೋರಿಸಿದವರಲ್ಲಿ ಇನ್ನೊಬ್ಬರ ಮೇಲೆ ಕಸದ ರಾಶಿ ಹಾಕುವ ಟಾಸ್ಕ್ ಇರುತ್ತದೆ. ಅದರಲ್ಲಿ ಮಾಳು ಅವರು ರಾಶಿಕ ಅವರನ್ನು ಆಯ್ಕೆ ಮಾಡಿ ಅವರ ಮೇಲೆ ಕಸದ ರಾಶಿಯನ್ನು ಹಾಕುತ್ತಾರೆ.

ಅದರ ಮಧ್ಯದಲ್ಲಿ ಮಾತನಾಡಿದ ಗಿಲ್ಲಿ ಅವರಿಗೆ ರಾಶಿಕ ಜೋರಾಗಿ ಬೈಯುತ್ತಾರೆ. ಇವರಿಬ್ಬರ ನಡುವಿನ ವಾದ ವಿವಾದ ಅಲ್ಲೆ ಕೊನೆಯಾಗುತ್ತಾ ಅಥವಾ ಮುಂದುವರಿಯುತ್ತಾ ಎಂದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.