
ಚಿತ್ರಕೃಪೆ: colorskannadaofficial
ಬಿಗ್‌ಬಾಸ್ ಮನೆಯ ಸದಸ್ಯರ ನಡುವೆ ನಾಮಿನೇಷನ್ ಜಿದ್ದಾಜಿದ್ದಿ ಆರಂಭವಾಗಿದೆ. ಬಿಡುಗಡೆಯಾದ ಪ್ರೊಮೋದಲ್ಲಿ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ನಾಮಿನೇಟ್ ಮಾಡುವಂತೆ ಬಿಗ್‌ಬಾಸ್ ಆದೇಶಿಸುತ್ತಾರೆ.
ಬಿಗ್‌ಬಾಸ್ ಆದೇಶದಂತೆ, ಸ್ಪರ್ಧಿಗಳು ನಾಮಿನೇಟ್ ಮಾಡುವ ಸದಸ್ಯರ ಭಾವಚಿತ್ರಗಳನ್ನು ತೆಗೆದುಕೊಂಡು ಕಾರಣ ನೀಡಿ ‘ದೋಷಿ' ಬರೆದ ಡಬ್ಬಿಯೊಳಗೆ ಹಾಕಬೇಕು.
ಅದರಂತೆ ಧನುಷ್ ಅವರು ಮಾಳು ಬಿಗ್‌ಬಾಸ್ ನೀಡಿದ ಅವಕಾಶವನ್ನು ಉಪಯೋಗಿಸಿಕೊಂಡಿಲ್ಲ ಎಂದು ಕಾರಣ ನೀಡದರೆ, ಸ್ಪಂದನಾ ಅವರು ರಾಶಿಕಾಗೆ ಅಹಂಕಾರ ಇದೆ ಎಂದು ಕಾರಣ ನೀಡಿ ನಾಮಿನೇಟ್ ಮಾಡುತ್ತಾರೆ.
ಇತ್ತ ರಾಶಿಕಾ ಅವರು ಧ್ರುವಂತ್ ಅವರಿಗೆ ಎಲ್ಲಾ ಗೊತ್ತಿದೆ ಎಂದು ವರ್ತಿಸುತ್ತಾರೆ ಎಂದು ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ.
ಅತ್ತ, ಗಿಲ್ಲಿ ಬಳಿ ಕ್ಷಮೆ ಕೇಳುವ ವಿಚಾರದಲ್ಲಿ ಕೋಪಗೊಂಡಿರುವ ಅಶ್ವಿನಿ ಅವರ ಮುನಿಸು ಕಡಿಮೆ ಆಗಿ ಗಿಲ್ಲಿ ಜತೆ ಕ್ಷಮೆ ಕೇಳುತ್ತಾರಾ?
ಈ ವಾರದ ನಾಮಿನೇಷನ್ ಪಟ್ಟಿಯಿಂದ ಯಾರು ಸೇಫ್ ಆಗುತ್ತಾರೆ ಎಂದು ಇವತ್ತಿನ ಸಂಚಿಕೆಯಲ್ಲಿ ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.