ADVERTISEMENT

ತಪ್ಪುಗಳಾದಾಗ ಕ್ಷಮಿಸಿದ್ದೀರಿ: ಬಿಗ್‌ಬಾಸ್ ಮನೆಯಿಂದ ಹೊರಬಂದ ರಿಷಾ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2025, 5:54 IST
Last Updated 24 ನವೆಂಬರ್ 2025, 5:54 IST
<div class="paragraphs"><p>ರಿಷಾ ಗೌಡ</p></div>

ರಿಷಾ ಗೌಡ

   

ಚಿತ್ರ: ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ ಮನೆಯಿಂದ ರಿಷಾ ಗೌಡ ಆಚೆ ಬಂದಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಬಂದಿದ್ದ ರಿಷಾ ಗೌಡ ಭಾನುವಾರ ಎಲಿಮಿನೇಟ್ ಆಗಿದ್ದಾರೆ.

ADVERTISEMENT

ಕಳೆದ ವಾರ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಲು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್‌, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್‌ ಸಿಂಗ್‌, ರಾಶಿಕಾ ಶೆಟ್ಟಿ, ಅಭಿಷೇಕ್‌ ಶ್ರೀಕಾಂತ್‌ 10 ಮಂದಿ ನಾಮಿನೇಟ್‌ ಆಗಿದ್ದರು. ಇವರ ಪೈಕಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಿಷಾ ಗೌಡ ಔಟ್ ಆಗಿದ್ದಾರೆ.

ಬಿಗ್‌ಬಾಸ್‌ ಮನೆಯಿಂದ ಹೊರ ನಡೆದ ರಿಷಾ ಗೌಡ ವೇದಿಕೆ ಮೇಲೆ ಭಾವುಕರಾಗಿ ಮಾತನಾಡಿದ್ದಾರೆ. ‘ಇಷ್ಟು ದಿನ ಮನೆ ಮಗಳ ರೀತಿಯಲ್ಲಿ ನನ್ನ ಸ್ವೀಕರಿಸಿದ್ದೀರಾ. ನಿಮ್ಮ ಮನೆಯಲ್ಲಿರುವ ಮಕ್ಕಳ ಹಾಗೆ ನನಗೂ ಕೋಪ ಇದೆ. ದಯವಿಟ್ಟು ಸಹಿಸಿಕೊಳ್ಳಿ. ನಿಮ್ಮ ಪ್ರೀತಿ ಗಳಿಸಬೇಕು ಅಂತಲೇ ನಾನು ಬಿಗ್‌ಬಾಸ್‌ಗೆ ಬಂದಿದ್ದು. ಪ್ರೀತಿ ಕೋಡೊದನ್ನು ಯಾವತ್ತು ನಿಲ್ಲಿಸಬೇಡಿ’ ಎಂದು ಹೇಳಿದ್ದಾರೆ.

ಇನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ‘ತಪ್ಪುಗಳಾದಾಗ ಕ್ಷಮಿಸಿದ್ದೀರಿ, ಪ್ರತಿ ಬಾರಿ ಬೆನ್ನು ತಟ್ಟಿದ್ದೀರಿ, ವೋಟ್ ನೀಡಿ ಆಶೀರ್ವದಿಸಿದ್ದೀರಿ, ಈ ಪ್ರೀತಿಗೆ ಸದಾ ಋಣಿ. ಮುಂದಿನ ದಿನಗಳಲ್ಲಿಯೂ ನಿಮ್ಮ ಪ್ರೀತಿ ಹೀಗೇ ಇರಲಿ. ಎಲ್ಲರಿಗೂ ತುಂಬು ಮನಸ್ಸಿನ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.