ಚಿತ್ರ ಕೃಪೆ: colorskannadaofficial
ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ 12ನೇ ಆವೃತ್ತಿಯು ಸೆ. 28ರಿಂದ ಆರಂಭವಾಗುತ್ತಿದೆ. ಈ ಕುರಿತು ಒಂದೊಂದೇ ಅಪ್‌ಡೇಟ್‌ಗಳನ್ನು ತಂಡ ಬಿಡುಗಡೆ ಮಾಡುತ್ತಲಿದ್ದು, ನೋಡುಗರ ಕುತೂಹಲ ಹೆಚ್ಚಿಸಿದೆ.
ಇದರ ಮಧ್ಯೆ ಇಂದು ನಟ ಸುದೀಪ್ ಅವರ ಹುಟ್ಟುಹಬ್ಬ. ಸ್ಯಾಂಡಲ್‌ವುಡ್ ಬಾದ್ ಷಾ ಎಂದೇ ಖ್ಯಾತಿ ಪಡೆದುಕೊಂಡಿರೋ ನಟ ಸುದೀಪ್ ಅವರು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಗ್‌ಬಾಸ್ ತಂಡ ಇಂದು ಸಂಜೆ ಬಿಗ್ ಅಪ್‌ಡೇಟ್ ನೀಡಲಾಗುವುದು ಎಂದು ಕಲರ್ಸ್ ಕನ್ನಡ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಕಿಚ್ಚ ಸುದೀಪ್ ಅವರ ಪ್ರೋಮೊದೊಂದಿಗೆ ಮಾಹಿತಿ ಹಂಚಿಕೊಂಡಿರುವ ಕಲರ್ಸ್ ಕನ್ನಡ, ‘Bigg Announcement: ಕಿಚ್ಚನ ಹುಟ್ಟು ಹಬ್ಬಕ್ಕೆ ಕಲರ್ಸ್ ಕನ್ನಡದಿಂದ Bigg News. ಇಂದು ಸಂಜೆ ಬಿಗ್ ಅಪ್‌ಡೇಟ್! ನಿರೀಕ್ಷಿಸಿ’ ಎಂದಿದೆ. ಇನ್ನು, ಪ್ರೋಮೊದಲ್ಲಿ ಕಿಚ್ಚ ಸುದೀಪ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್‌ಬಾಸ್‌ನ 12ನೇ ಆವೃತ್ತಿ ಘೋಷಣೆಗಾಗಿ ಕಿಚ್ಚ ಸುದೀಪ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಸಂಜೆ ಕರ್ಲಿ ಹೇರ್‌ನಲ್ಲಿ ಬಿಗ್‌ಬಾಸ್ ವೀಕ್ಷಕರಿಗೆ ಬಿಗ್ ಅಪ್‌ಡೇಟ್ ನೀಡಲು ಸಜ್ಜಾಗಿದ್ದಾರೆ. ಈ ಬಾರಿಯ ವಿಶೇಷತೆ ಏನು ಎಂದು ಖುದ್ದು ಕಿಚ್ಚ ಅವರೇ ಬಹಿರಂಗಪಡಿಸಬೇಕಿದೆ. ಹೀಗಾಗಿ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.