ADVERTISEMENT

ಗಿಲ್ಲಿ ಆಗ್ತಾರಾ ಬಿಗ್‌ಬಾಸ್‌ ವಿನ್ನರ್‌: ಅಭಿಮಾನಿಗಳ ಪ್ರಾರ್ಥನೆ ಫಲಿಸುತ್ತಾ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 15:03 IST
Last Updated 18 ಜನವರಿ 2026, 15:03 IST
   

ಬಿಗ್‌ಬಾಸ್‌ ಸೀಸನ್ 12ರ ಆವೃತ್ತಿಯ ವಿನ್ನರ್‌ ಯಾರೆಂಬುದು ಕೆಲವೇ ಹೊತ್ತಿನಲ್ಲಿ ಹೊರ ಬೀಳಲಿದೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಗಿಲ್ಲಿ ನಟ ಹವಾ ಜೋರಾಗಿದೆ. ಹಾಗಾದರೆ ಈ ಸೀಸನ್‌ ವಿನ್ನರ್‌ ಗಿಲ್ಲಿ ಆಗ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಇಂದಿನ (ಭಾನುವಾರ) ಬಿಗ್‌ಬಾಸ್‌ ಶೋ ಸಂಜೆ 6ರಿಂದಲೇ ಶುರುವಾಗಿದೆ. ಬಿಗ್‌ಬಾಸ್‌ ಶೋ ನೋಡಲು ಅಭಿಮಾನಿಗಳು ಟಿ.ವಿ ಮುಂದೆ ಜಮಾಯಿಸಿ, ತಮ್ಮ ನೆಚ್ಚಿನ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಇನ್ನೊಂದೆಡೆ ಬಿಗ್‌ಬಾಸ್‌ ಶೋ ನಡೆಯುತ್ತಿರುವ ಬಿಡದಿಯ ಜಾಲಿವುಡ್‌ ಸ್ಟುಡಿಯೊ ಎದುರು ನೆಚ್ಚಿನ ಅಭ್ಯರ್ಥಿಗಳ ಫ್ಲೆಕ್ಸ್‌ಗಳು ಹಿಡಿದು ನಿಂತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಗಿಲ್ಲಿ ಹವಾ

ADVERTISEMENT

ಎಲ್ಲಿ ನೋಡಿದರೂ ಗಿಲ್ಲಿ ಬಗ್ಗೆಯೇ ಮಾತು.. ಎಲ್ಲಿ ನೋಡಿದರೂ ಗಿಲ್ಲಿ ಬಗ್ಗೆಯೇ ಮಾತು.. ಸಾಮಾಜಿಕ ಮಾಧ್ಯಮಗಳಲ್ಲಂತೂ ಗಿಲ್ಲಿಯೇ ಈ ಬಾರಿಯ ಬಿಗ್‌ಬಾಸ್‌ ವಿನ್ನರ್‌ ಎಂದು ಚರ್ಚೆಯಾಗುತ್ತಿದೆ. ಆತನ ನಡುವಿಕೆ, ಕಾಮಿಡಿ ಟೈಮಿಂಗ್‌, ಸ್ವಭಾವ, ಸರಳತನ ಎಲ್ಲರ ಮನ ಗೆದ್ದಿದೆ. ಇಷ್ಟಕ್ಕೂ ಇಷ್ಟೊಂದು ಕ್ರೇಜ್‌ಗೆ ಗಿಲ್ಲಿ ಕಾರಣನಾ? ಇಷ್ಟು ಸೀಸನ್‌ಗಳ ಪೈಕಿ ಈ ಬಾರಿಯ ವಿನ್ನರ್‌ಗೆ ಬಂದಿರುವ ವೋಟ್‌ಗಳು ಸುಮಾರು ₹37 ಕೋಟಿಗೂ ಅಧಿಕ ಎನ್ನಲಾಗುತ್ತಿದೆ. ಒಂದು ವೇಳೆ ಬಿಗ್‌ಬಾಸ್‌ ಟ್ರೋಫಿಯನ್ನು ಗಿಲ್ಲಿ ಗೆದ್ದುಕೊಂಡರೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.

16 ವಾರಗಳ ಕಾಯುವಿಕೆ ಇಂದು ಕೊನೆ ಆಗಲಿದ್ದು, ಕೆಲವೇ ಗಂಟೆಗಳಲ್ಲಿ ವಿನ್ನರ್‌ರನ್ನು ಘೋಷಿಸುತ್ತಾರೆ. ವ್ಯಕ್ತಿತ್ವದ ಆಟದ ಜತೆಗೆ ಮಾನಸಿಕ, ದೈಹಿಕ ಸಾಮರ್ಥ್ಯಗಳ ಅನಾವರಣಕ್ಕೆ ವೇದಿಕೆಯಾಗಿದ್ದ ಬಿಗ್‌ಬಾಸ್‌ 12 ಬಿಗ್‌ಬಾಸ್‌ ಇಂದು ಮುಕ್ತಾಯವಾಗಲಿದೆ.

ಬಿಗ್‌ಬಾಸ್‌ ಶೋ ಎಲ್ಲಾ ರಿಯಾಲಿಟಿ ಶೋಗಳಿಗಿಂತ ವಿಭಿನ್ನ. ಬಿಗ್‌ಬಾಸ್‌ ಮುಗಿದ ಬಳಿಕ ಎಲ್ಲರ ಭವಿಷ್ಯ ಬದಲಾಗುತ್ತದೆ, ಬದುಕಿಗೆ ದಾರಿಯಾಗುತ್ತದೆ ಎಂದು ಕಾರ್ಯಕ್ರಮದ ನಿರೂಪಕ, ನಟ ಕಿಚ್ಚ ಸುದೀಪ್‌ ಸೇರಿದಂತೆ ಬದುಕು ಕಟ್ಟಿಕೊಂಡ ಅನೇಕ ಅಭ್ಯರ್ಥಿಗಳು ಈ ಮಾತುಗಳನ್ನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.