
ನಟಿ ಮಾನಸಾ ಮನೋಹರ್ ದಂಪತಿ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಕಿರುರೆತೆ ನಟಿ ಮಾನಸಾ ಮನೋಹರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ನಟಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನಸ ಮನೋಹರ್ ಅವರು 'ಮೀರಾ' ಪಾತ್ರದಲ್ಲಿ ನಟಿಸಿದ್ದರು. ಬಳಿಕ ‘ಲಕ್ಷ್ಮೀ ನಿವಾಸ’ದಲ್ಲಿ ಖಳನಾಯಕಿಯಾಗಿ ನೀಲು ಪಾತ್ರದ ಮೂಲಕ ರಂಜಿಸಿದ್ದರು.
ನಟಿ ಮಾನಸಾ ಮನೋಹರ್ ದಂಪತಿ
2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಎಂಬುವವರ ಜೊತೆಗೆ ಎರಡನೇ ಮದುವೆಯಾಗಿದ್ದರು. ಇದೀಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
‘ಸುಮಾರು ಒಂದು ವರ್ಷದ ಹಿಂದೆ, ಅದೇ ಸ್ಥಳದಲ್ಲಿ ಅದೇ ಮರಗಳ ನಡುವೆ ನಾವಿಬ್ಬರೂ ಒಂದಾಗಿದ್ದೇವು. ಇಂದು ನಮ್ಮೊಂದಿಗೆ ಮತ್ತೊಬ್ಬರು ಸೇರಿಕೊಂಡಿದ್ದಾರೆ. ಇದೇ ಮೇ ತಿಂಗಳಲ್ಲಿ ನಮ್ಮ ಮನೆಗೆ ಪುಟಾಣಿಯ ಆಗಮನ ಆಗಲಿದೆ. ಅದಕ್ಕಾಗಿಯೇ ನಾವು 2026 ಅನ್ನು ನಮ್ಮ ಅತ್ಯಂತ ಸಂತೋಷ ಮತ್ತು ಕೃತಜ್ಞತೆಯೊಂದಿಗೆ ಪ್ರಾರಂಭಿಸುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.