ADVERTISEMENT

ಕರ್ಣ ಧಾರಾವಾಹಿಯಲ್ಲಿ ಟ್ವಿಸ್ಟ್‌: ರಿಯಾ ಪಾತ್ರದಲ್ಲಿ ಅಂಕಿತಾ ಜಯರಾಮ್ ಎಂಟ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2026, 7:23 IST
Last Updated 4 ಫೆಬ್ರುವರಿ 2026, 7:23 IST
<div class="paragraphs"><p>ನಟಿ&nbsp;ಅಂಕಿತಾ ಜಯರಾಮ್</p></div>

ನಟಿ ಅಂಕಿತಾ ಜಯರಾಮ್

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿ ಹೊಸ ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಕರ್ಣ ಧಾರಾವಾಹಿಗೆ ಹೊಸ ಪಾತ್ರಧಾರಿಯ ಆಗಮನಮವಾಗಿದೆ. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಪ್ರಣೀತಾ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದ ಅಂಕಿತಾ ಜಯರಾಮ್‌ ಈಗ ಕರ್ಣ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ADVERTISEMENT

ನಟಿ ಅಂಕಿತಾ ಜಯರಾಮ್

ನಟಿ ಅಂಕಿತಾ ಜಯರಾಮ್ ಅವರು ಈಗಾಗಲೇ ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಟ ವಿಜಯ್ ರಾಘವೇಂದ್ರ ಅಭಿನಯದ ‘ಹಕೂನ ಮಟಾಟ’ ಎಂಬ ಸೀರಿಸ್‌ನಲ್ಲೂ ಅಂಕಿತಾ ಬಣ್ಣ ಹಚ್ಚಿದ್ದರು. ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ನಟಿಸಿದ ಹಲವು ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟರ ಜೊತೆಗೆ ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಾರಾ ವಜ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕರ್ಣ ಧಾರಾವಾಹಿಯಲ್ಲಿ ರಿಯಾ ಪಾತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ನಟಿ ಅಂಕಿತಾ ಜಯರಾಮ್

ಈ ಕುರಿತು ನಟಿ ಅಂಕಿತಾ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಜೀ ಕನ್ನಡದಲ್ಲಿ ಪ್ರತಿದಿನ ರಾತ್ರಿ 8ಗಂಟೆಗೆ ಪ್ರಸಾರವಾಗುವ ಕರುನಾಡ ಜನತೆಯ ಮನೆ, ಮನ ಮೆಚ್ಚಿದ ಕರ್ಣ ಧಾರಾವಾಹಿಯಲ್ಲಿ ಹೊಸ ಲುಕ್‌ನೊಂದಿಗೆ ಅಭಿನಯಿಸುತ್ತಿರುವ ನಿಮ್ಮ ಪ್ರೀತಿಯ ಅಂಕಿತ. ಎಂದಿನಂತೆ ನಿಮ್ಮೆಲ್ಲರ ಪ್ರೀತಿಯ ಪ್ರೋತ್ಸಾಹ ಶುಭ ಹಾರೈಕೆ ಸದಾ ಕಾಲ ಇರಲಿ. ಈ ಧಾರಾವಾಹಿಯಲ್ಲಿ ನಟಿಸಲು ಆಯ್ಕೆ ಮಾಡಿದ ಜೀ ಕುಟುಂಬದ ರಾಘವೇಂದ್ರ ಹುಣಸೂರ್ ಸರ್, ರಮೇಶ್ ಇಂದಿರಾ ಸರ್ ಹಾಗೂ ಶೃತಿ ನಾಯ್ಡು ಮೇಡ೦ರವರಿಗೆ ತುಂಬು ಹೃದಯದ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಜೀ ಕನ್ನಡ ವಾಹಿನಿ ಪ್ರೋಮೊ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ನಟಿ ಅಂಕಿತಾ ‌ಕರ್ಣನ ಸಹೋದರ ಸಂಜಯ್‌ಗೆ ಬುದ್ಧಿ ಕಲಿಸಲು ರಿಯಾ ಆಗಿ ಬಂದಿದ್ದಾಳೆ. ಇಬ್ಬರೂ ಒಂದೇ ಆಟೊ ಏರುವ ಪರಿಸ್ಥಿತಿ ಎದುರಾಗುತ್ತದೆ. ಅಲ್ಲಿಂದ ಇವರ ನಡುವೆ ಮಾತುಕತೆ ನಡೆಯುವುದು ಪ್ರೋಮೊದಲ್ಲಿ ಕಾಣಿಸಿದೆ. ಹೀಗಾಗಿ ಸಂಜಯ್ ಹಾಗೂ ರಿಯಾ ಇಬ್ಬರ ಮಧ್ಯೆ ಪ್ರೀತಿ ಚಿಗುರುತ್ತಾ ಎಂದು ವೀಕ್ಷಕರು ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.