ADVERTISEMENT

ಕರ್ಣ ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್: ಮಾಡದ ತಪ್ಪಿಗೆ ಜೈಲು ಪಾಲಾಗ್ತಾನಾ ನಾಯಕ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 12:12 IST
Last Updated 20 ಫೆಬ್ರುವರಿ 2026, 12:12 IST
<div class="paragraphs"><p>ನಟ ಕಿರಣ್ ರಾಜ್</p></div>

ನಟ ಕಿರಣ್ ರಾಜ್

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡ ಕಿರುತೆರೆಯ ಅಂಗಳದಲ್ಲಿ ಧಾರಾವಾಹಿಗಳ ಅಬ್ಬರ ಜೋರಾಗಿದೆ. ಒಂದೊಂದು ಧಾರಾವಾಹಿಗಳು ಒಂದೊಂದು ರೀತಿಯ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಆ ಮೂಲಕ ವೀಕ್ಷಕರನ್ನು ಎಲ್ಲೂ ಹೋಗದಂತೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಅದರಲ್ಲೂ ಕಳೆದ ವರ್ಷ ಪ್ರಸಾರ ಕಂಡಿದ್ದ ಕರ್ಣ ಧಾರಾವಾಹಿ ತಮ್ಮ ಕಥೆ ಹಾಗೂ ಉತ್ತಮ ಗುಣಮಟ್ಟದ ಮೂಲಕವೇ ವೀಕ್ಷಕರ ಗಮನ ಸೆಳೆಯುತ್ತಿದೆ.

ADVERTISEMENT

2025ರ ಜುಲೈ 3ರಂದು ಕರ್ಣ ಧಾರಾವಾಹಿ ಮೊದಲ ಸಂಚಿಕೆ ಪ್ರಸಾರ ಕಂಡಿತ್ತು. ಅಂದಿನಿಂದ ಇಂದಿನವರೆಗೂ ಈ ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಶೃತಿ ನಾಯ್ಡು ನಿರ್ಮಾಣ, ರಮೇಶ್​ ಇಂದಿರಾ ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ನಟ ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ, ಕನ್ನಡದ ಹಿರಿಯ ನಟ ಟಿ.ಎಸ್ ನಾಗಾಭರಣ, ನಟಿ ಆಶಾ ಲತಾ, ಗಾಯತ್ರಿ ಪ್ರಭಾಕರ್ ಸೇರಿದಂತೆ ಸಾಕಷ್ಟು ಜನಪ್ರಿಯ ಕಲಾವಿದರು ನಟಿಸುತ್ತಿದ್ದಾರೆ.

ವಿಶೇಷ ಏನೆಂದರೆ ಕರ್ಣ ಧಾರಾವಾಹಿಯ ಮೇಕಿಂಗ್, ಫೈಟಿಂಗ್ ದೃಶ್ಯಗಳು, ಹಾಡು, ಡ್ಯಾನ್ಸ್, ಬಾಂಧವ್ಯ, ಸ್ನೇಹ, ಪ್ರೀತಿ, ನೋವು ಹೀಗೆ ಅನೇಕ ವಿಚಾರಗಳನ್ನು ಒಳಗೊಂಡಿದೆ. ಹೀಗಾಗಿ ಕರ್ಣನ ಸಂಚಿಕೆಗಳನ್ನು ನೋಡಿದ ವೀಕ್ಷಕರಿಗೆ ಸಿನಿಮಾ ನೋಡಿದ ಅನುಭವ ನೀಡುತ್ತಿದೆ ಎನ್ನುತ್ತಿದ್ದಾರೆ. ನಿಧಿಯನ್ನು ಪ್ರೀತಿಸುತ್ತಿದ್ದ ಕರ್ಣ ನಿತ್ಯಳನ್ನು ಮದುವೆ ಆಗುವ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಎಲ್ಲರ ಮುಂದೆ ನಿತ್ಯ ಹಾಗೂ ಕರ್ಣ ಗಂಡ, ಹೆಂಡತಿಯ ರೀತಿ ನಾಟಕವಾಡುತ್ತಾ ಇರುತ್ತಾರೆ. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ತಾನು ಮಾಡದ ತಪ್ಪಿಗೆ ಕರ್ಣ ತೊಂದರೆ ಅನುಭವಿಸುತ್ತಿದ್ದಾನೆ.

ತಂದೆ ರಮೇಶ್​ನ ಸಂಚಿಗೆ ಮಗ ಕರ್ಣ ಜೈಲು ಸೇರುವಂತಾಗಿದೆ. ಅವಧಿ ಮುಗಿದಿರುವ ಮಾತ್ರೆಗಳನ್ನು ಕೊಟ್ಟ ಕಾರಣ, ಬಾಣಂತಿಯರು ಹಾಗೂ ಶಿಶುಗಳು ಬಲಿಯಾಗಿರುತ್ತವೆ. ಈ ವಿಚಾರ ಕುಟುಂಬಸ್ಥರಿಗೆ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡುತ್ತಾರೆ. ಆ ಕೂಡಲೇ ಆಸ್ಪತ್ರೆಗೆ ಬಂದ ಪೊಲೀಸರು ಕರ್ಣನ ಕೈಗೆ ಬೇಡಿ ಹಾಕಿ ವಾಹನದಲ್ಲಿ ಕುರಿಸಿಕೊಂಡು ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ಆಗ ಕರ್ಣನ ಈ ಸ್ಥಿತಿ ಕಂಡ ನಿತ್ಯ ಹಾಗೂ ನಿಧಿ ಕಣ್ಣೀರು ಹಾಕುತ್ತಿದ್ದರೆ, ಅತ್ತ ತಂದೆ ರಮೇಶ್, ಸಹೋದರ ಹಾಗೂ ಅತ್ತೆ ಸಖತ್ ಖುಷಿಪಟ್ಟಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಈ ಕುತಂತ್ರವನ್ನು ಮಾಡಿದ್ದು ಯಾರು, ಕರ್ಣ ನಿಜಕ್ಕೂ ಜೈಲಿಗೆ ಹೋಗುತ್ತಾನಾ? ಅಥವಾ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಾ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.