
ನಟಿ ವಿಜಯಲಕ್ಷ್ಮಿ ಸುಬ್ರಮಣಿ
ಚಿತ್ರ: ಇನ್‌ಸ್ಟಾಗ್ರಾಂ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಿಂದ ಇತ್ತೀಚೆಗೆ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಆಚೆ ಬಂದಿದ್ದರು. ಅಲ್ಲದೇ ಲಕ್ಷ್ಮೀ ನಿವಾಸ ಧಾರಾವಾಹಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಬೇಸರ ಹೊರ ಹಾಕಿದ್ದರು.
ಲಕ್ಷ್ಮೀ ನಿವಾಸ ಧಾರಾವಾಹಿ ಕೊನೆಯಲ್ಲಿ ಜಯಂತ್ ತಳ್ಳಿದ್ದಕ್ಕೆ ವಿಶ್ವನ ತಾಯಿ ಲಲಿತಾ ಮೃತಪಡುತ್ತಾರೆ. ಆ ದೃಶ್ಯದ ಮೂಲಕ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಅವರ ಪಾತ್ರ ಮುಕ್ತಾಯ ಕಾಣುತ್ತದೆ. ಹೀಗಾಗಿ ಜಯಂತ್ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಅವರು ಕೇಕ್ ಕಟ್ ಮಾಡಿಸುವುದು ನಟಿ ಹಂಚಿಕೊಂಡ ವಿಡಿಯೊದಲ್ಲಿ ಕಾಣಿಸಿದೆ.
ಇದೀಗ ‘ನನ್ನ ಸಾಯಿಸಿದವನ ಕೈಯಿಂದಲೇ ಪೇಟ ತೋಡಿಸಿದ್ರು’ ಎಂದು ನಟಿ ವಿಜಯಲಕ್ಷ್ಮೀ ಸುಬ್ರಮಣಿ ಗರಂ ಆಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮಗೆ ಸನ್ಮಾನ ಮಾಡಿರುವ ಬಗ್ಗೆ ನಟಿ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮೀ ಸುಬ್ರಮಣಿ ಪೋಸ್ಟ್‌ನಲ್ಲಿ ಏನಿದೆ?
‘ಕೊನೆ ದಿನದ ಲಲಿತಾ ಸಾವಿನ ಚಿತ್ರೀಕರಣ ಮುಗಿದ ನಂತರ ಜಯಂತ್ ಕೈಯಲ್ಲೇ ಪೇಟ ತೋಡಿಸಿ ಸನ್ಮಾನ ಮಾಡಿದ್ದಾರೆ. ನಾನು ನನ್ನ ಪಾತ್ರ ಧಾರಾವಾಹಿಯ ಮುಗಿದ ಮೇಲೆ ಮಲೇಷ್ಯಾಗೆ ಹೋಗಿದ್ದೆ. ನಾನು ಬೇರೆ ಯಾವ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿರಲಿಲ್ಲ. ನನ್ನ ಪಾತ್ರಕ್ಕೆ ಅಂತ್ಯ ಹಾಡಿರೋದು ನನ್ನಿಂದಲ್ಲ, ಕಾರಣ ನನಗೆ ಇದುವರೆಗೂ ಗೊತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.