ADVERTISEMENT

ನಾಗಿಣಿ ಧಾರಾವಾಹಿಗೆ ದಶಕದ ಸಂಭ್ರಮ: ನಟಿ ದೀಪಿಕಾ ದಾಸ್ ವಿಶೇಷ ಪೋಸ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 11:06 IST
Last Updated 9 ಫೆಬ್ರುವರಿ 2026, 11:06 IST
<div class="paragraphs"><p>ನಾಗಿಣಿ ಧಾರಾವಾಹಿ, ದೀಪಿಕಾ ದಾಸ್</p></div>

ನಾಗಿಣಿ ಧಾರಾವಾಹಿ, ದೀಪಿಕಾ ದಾಸ್

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ನಾಗಿಣಿ’ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. 2016ರ ಫೆಬ್ರುವರಿ 8ರಿಂದ ಪ್ರಸಾರ ಕಂಡಿದ್ದ ನಾಗಿಣಿ ಧಾರಾವಾಹಿಗೆ ನಿನ್ನೆಗೆ 10 ವರ್ಷಗಳು ಭರ್ತಿಯಾಗಿವೆ. ಒಂದು ದಶಕವನ್ನು ಪೂರೈಸಿದ ನಾಗಿಣಿ ಧಾರಾವಾಹಿ ಕುರಿತು ನಟಿ ದೀಪಿಕಾ ದಾಸ್ ವಿಶೇಷ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ADVERTISEMENT

ದೀಪಿಕಾ ದಾಸ್, ದೀಕ್ಷಿತ್ ಶೆಟ್ಟಿ

ವಿನೂತನವಾಗಿ ಶುರು ಮಾಡಿದ್ದ ನಾಗಿಣಿ ಧಾರಾವಾಹಿಯೂ ಎಲ್ಲರ ಗಮನ ಸೆಳೆದಿತ್ತು. ಇದೇ ಧಾರಾವಾಹಿ ಮೂಲಕ ನಟಿ ದೀಪಿಕಾ ದಾಸ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಅಮೃತಾ ಪಾತ್ರದಲ್ಲಿ ದೀಪಿಕಾ ದಾಸ್ ಮತ್ತು ಅರ್ಜುನ್ ಪಾತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಿಂದ ದೀಪಿಕಾ ದಾಸ್‌ಗೆ ಬಿಗ್‌ಬಾಸ್‍ ಮನೆಗೆ ಹೋಗುವ ಅವಕಾಶ ಕೂಡ ಸಿಕ್ಕಿತ್ತು. ಬಿಗ್‌ಬಾಸ್ ಸೀಸನ್ 7 ಮತ್ತು 9ರಲ್ಲಿ ಭಾಗವಹಿಸಿ ಎರಡೂ ಬಾರಿಯೂ ಟಾಪ್ 5 ಸ್ಪರ್ಧಿಯಾಗಿ ಹೊರಹೊಮ್ಮಿದ್ದರು. ಬಳಿಕ ನಾಗಿಣಿ 2ನಲ್ಲಿ ನಮ್ರತಾ ಗೌಡ ಮತ್ತು ನಿನಾದ್ ಹರಿತ್ಸ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಇದೀಗ ತನಗೆ ಖ್ಯಾತಿ ತಂದುಕೊಟ್ಟ ಧಾರಾವಾಹಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ, ‘ಈ ವಿಶೇಷ ದಿನವು ವಿಶೇಷವಾದ ಘೋಷಣೆಗೆ ಅರ್ಹವಾಗಿದೆ. ನಾಗಿಣಿಯ 10 ವರ್ಷಗಳು. ಅಂದಿನಿಂದ ಇಲ್ಲಿಯವರೆಗೆ.. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಎಲ್ಲಾ ಸಹ-ಕಲಾವಿದರು, ನನ್ನ ಎಲ್ಲಾ ಅಭಿಮಾನಿಗಳು, ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.