ADVERTISEMENT

ಮುಕ್ತಾಯದ ಹಂತದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ: ಭಾವುಕರಾದ ಕಲಾವಿದರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2026, 10:05 IST
Last Updated 22 ಜನವರಿ 2026, 10:05 IST
<div class="paragraphs"><p>ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ</p></div>

ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೊನೆಯಾಗುತ್ತಿದೆ. ಇತ್ತೀಚೆಗೆ ಈ ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರೈಸಿದ ಖುಷಿಯನ್ನು ಹಂಚಿಕೊಂಡಿತ್ತು. ಆ ಬೆನ್ನಲ್ಲೆ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ. ಈಗಾಗಲೇ ಧಾರಾವಾಹಿಯ ಕೊನೆ ದಿನದ ಚಿತ್ರೀಕರಣ ಮುಕ್ತಾಯಗೊಂಡಿದೆ. ಈಗ ಕೊನೆಯ ಕೆಲವು ಸಂಚಿಕೆಗಳು ಪ್ರಸಾರವಾಗುತ್ತಿವೆ.

ADVERTISEMENT

ಧಾರಾವಾಹಿ ಮುಕ್ತಾಯದ ಬಗ್ಗೆ ಕಲಾವಿದರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಂಠಿ ಪಾತ್ರದಲ್ಲಿ ನಟಿಸಿರುವ ಧನುಷ್ ಎನ್.ಎಸ್. ಅವರು ಚಿತ್ರೀಕರಣದ ಕೊನೆಯ ದಿನ ಹೇಗಿತ್ತು ಎಂದು ವಿಡಿಯೊ ಮೂಲಕ ತೋರಿಸಿದ್ದಾರೆ. ಅದರ ಜೊತೆಗೆ ‘13/01/2026. ಚಿತ್ರೀಕರಣದ ಕೊನೆಯ ದಿನ. ನನ್ನ ಪಾತ್ರವನ್ನು ಪ್ರೀತಿಸಿ, ನನ್ನನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ. ನಾನು ಈ ಧಾರಾವಾಹಿಯನ್ನು ಸಿನಿಮಾದತ್ತ ಒಂದು ಹೆಜ್ಜೆಯಾಗಿ ನೋಡಿದೆ. ಆದರೆ ಜನರು ನನಗೆ ಅಪಾರ ಪ್ರೀತಿ ನೀಡುವ ಮೂಲಕ ನನ್ನ ಪಾತ್ರವನ್ನು ದೊಡ್ಡದಾಗಿ ಪರಿವರ್ತಿಸಿದರು. ತುಂಬಾ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಇದೇ ಧಾರಾವಾಹಿಯಲ್ಲಿ ಸಹನಾ ಪಾತ್ರದಲ್ಲಿ ನಟಿಸಿರುವ ಅಕ್ಷರ ಅವರು ಕೂಡ ಭಾವುಕರಾಗಿ ಬರೆದುಕೊಂಡಿದ್ದಾರೆ. ‘ಮರೆಯಲಾಗದ 4 ವರ್ಷಗಳು. ಈ ಸುಂದರ ಪ್ರಯಾಣ ಕೊನೆಗೂ ಅಂತ್ಯಗೊಂಡಿದೆ. ಈ ಅನುಭವದ ಬಗ್ಗೆ ಪದಗಳಲ್ಲಿ ಹೇಳುವುದು ಕಷ್ಟ. ಪ್ರತಿ ಕ್ಷಣ, ಪ್ರತಿ ಪಾಠ, ಪ್ರತಿ ನೆನಪು ನನ್ನ ಹೃದಯಕ್ಕೆ ಶಾಶ್ವತವಾಗಿ ಹತ್ತಿರವಾಗಿದೆ. ಸಹನಾ ಆಗಿರುವುದು ನನ್ನ ಜೀವನದ ಅತ್ಯಂತ ವಿಶೇಷ ಅಧ್ಯಾಯಗಳಲ್ಲಿ ಒಂದಾಗಿದೆ. ನೀವು ನನ್ನ ಮೇಲೆ ತೋರಿಸಿದ ಅಪಾರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ದಯವಿಟ್ಟು ನನ್ನೊಂದಿಗೆ ನಿಂತು ನನ್ನ ಮುಂದಿನ ಯೋಜನೆಗಳಲ್ಲಿಯೂ ನನ್ನನ್ನು ಬೆಂಬಲಿಸುವುದನ್ನು ಮುಂದುವರಿಸಿ’ ಎಂದು ಬರೆದುಕೊಂಡಿದ್ದಾರೆ.

ಮುಖ್ಯವಾಗಿ ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಗೆಳತಿ, ಕಂಠಿ ತಾಯಿ ಬಂಗಾರಮ್ಮ ಪಾತ್ರದಲ್ಲಿ ಮಂಜು ಭಾಷಿಣಿ ಅವರು ನಟಿಸಿದ್ದರು. ಈ ಧಾರಾವಾಹಿ ತಂಡಕ್ಕೆ ತಮ್ಮ ಮನದಾಳದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ‘ಪುಟ್ಟಕ್ಕನ ಮಕ್ಕಳು.. ಕ್ಷಣದಂತೆ ಕಳೆದ ವರುಷಗಳು ಅದ್ಭುತ ಅನುಭವ. ಪರಿಸರ.. ಸ್ನೇಹ.. ಬಾಂಧವ್ಯ.. ಬೆಲೆಕಟ್ಟಲಾರದ ಭಾವನೆಗಳು. ವಿದಾಯದ ಕ್ಷಣದ ಭಾರವಾದ ಮನಸ್ಸಿನೊಂದಿಗೆ ನಮನಗಳು. ಕಲಿಯಲು ಮತ್ತು ಬೆಳೆಯಲು ಅವಕಾಶ ಕಲ್ಪಿಸಿದ ಪ್ರತಿಯೊಬ್ಬರಿಗೂ ನನ್ನ ಮನದಾಳದ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.