ADVERTISEMENT

‘ಸರಿಗಮಪ ಲಿಟಲ್ ಚಾಂಪ್ಸ್’ ಆಡಿಷನ್ ಈಗ ಮತ್ತಷ್ಟು ಸುಲಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 10:36 IST
Last Updated 18 ಫೆಬ್ರುವರಿ 2026, 10:36 IST
<div class="paragraphs"><p>ಸರಿಗಮಪ ಲಿಟಲ್ ಚಾಂಪ್ಸ್ ಲೋಗೊ</p></div>

ಸರಿಗಮಪ ಲಿಟಲ್ ಚಾಂಪ್ಸ್ ಲೋಗೊ

   

ಚಿತ್ರ:ಇನ್‌ಸ್ಟಾಗ್ರಾಂ

ಪುಟಾಣಿಗಳ ಮಧುರ ಧ್ವನಿ ಆಲಿಸಲು ಜೀ ಕನ್ನಡ ವಾಹಿನಿಯು ‘ಸರಿಗಮಪ ಲಿಟಲ್ ಚಾಂಪ್ಸ್’ ಆರಂಭಿಸುತ್ತಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಆಡಿಷನ್ ನಡೆಸುತ್ತಿದೆ. ನಿಮ್ಮ ಜಿಲ್ಲೆಯಲ್ಲಿ ಆಡಿಷನ್ ಯಾವಾಗ ನಡೆಯುತ್ತದೆ ಎಂಬುವುದರ ಬಗ್ಗೆ ಜೀ ಕನ್ನಡ ವಾಹಿನಿ ಮಾಹಿತಿ ನೀಡುತ್ತಿದೆ.

ADVERTISEMENT

ಇದೀಗ ಮಕ್ಕಳಿಗೆ ಸಮಸ್ಯೆ ಆಗದಂತೆ ಸರಿಗಮಪ ಲಿಟಲ್ ಚಾಂಪ್ಸ್ ತಂಡ ಆಡಿಷನ್‌ ಪ್ರಕ್ರಿಯೆಯನ್ನು ಮತ್ತಷ್ಟು ಸಲಭಗೊಳಿಸಿದೆ. ಜೀ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ‘ನಿಮ್ಮ ಮಕ್ಕಳನ್ನು ಆಡಿಷನ್ ನಡೆಯುತ್ತಿರುವ ಜಾಗಕ್ಕೆ ಕರೆದುಕೊಂಡು ಹೋಗಲು ಆಗುತ್ತಿಲ್ಲವಾ? ಹಾಗಿದ್ದರೆ ಆನ್‌ಲೈನ್‌ನಲ್ಲೇ ಆಡಿಷನ್ ಕೊಡಿ’ ಎಂದು ಬರೆದುಕೊಂಡಿದೆ. ಅದರ ಜೊತೆಗೆ ಕೆಲವೊಂದು ಷರತ್ತುಗಳನ್ನು ಹಾಕಿದೆ.

ಸರಿಗಮಪ ಲಿಟಲ್ ಚಾಂಪ್’ ಆಡಿಷನ್ ನಿಯಮಗಳೇನು?

  • ವಯಸ್ಸಿನ ಮಿತಿ:  3ರಿಂದ 15 ವರ್ಷ

  • 3 ವಿಭಿನ್ನ ಶೈಲಿಯ ಹಾಡುಗಳನ್ನು ಕರೋಕೆ ಬಳಸದೆ ಹಾಡುವಂತಿರಬೇಕು.

  • ಆಡಿಷನ್‌ನಲ್ಲಿ ಭಾಗವಹಿಸುವಾಗ ಪಾಸ್‌ಪೋರ್ಟ್ ಫೋಟೋ ಹಾಗೂ ವಿಳಾಸ ಸಾಕ್ಷ್ಯದ ಜೆರಾಕ್ಸ್ ಜೊತೆ ಬರಬೇಕೆಂದು ಜೀ ಕನ್ನಡ ವಾಹಿನಿ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದೆ.

ಬಹು ಮುಖ್ಯವಾಗಿ ವಾಟ್ಸಾಪ್ ನಂಬರ್‌ಗೆ ಒಂದು ವಿಡಿಯೊದಲ್ಲಿ 3 ವಿಭಿನ್ನ ಶೈಲಿಯ ಹಾಡುಗಳನ್ನು ಕರೋಕೆ ಬಳಸದೆ ಹಾಡಬೇಕು. 1:30 ನಿಮಿಷದ ಒಳಗಿನ ವಿಡಿಯೊ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.