ADVERTISEMENT

ಕರ್ಣ ಧಾರಾವಾಹಿಯಿಂದ ನಟ ಟಿ.ಎಸ್ ನಾಗಾಭರಣ ಹೊರಕ್ಕೆ: ಬದಲಿಯಾಗಿ ತಾರಾ ನಟನ ಆಗಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2026, 7:10 IST
Last Updated 4 ಮಾರ್ಚ್ 2026, 7:10 IST
<div class="paragraphs"><p>ಟಿ.ಎಸ್ ನಾಗಾಭರಣ, ನಟ ಅಭಿಜಿತ್ </p></div>

ಟಿ.ಎಸ್ ನಾಗಾಭರಣ, ನಟ ಅಭಿಜಿತ್

   

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿ ಹೊಸ ತಿರುವನ್ನು ಪಡೆದುಕೊಂಡಿದೆ. ರೋಚಕ ಘಟ್ಟದಲ್ಲಿರುವಾಗಲೇ ಕರ್ಣ ಧಾರಾವಾಹಿಯ ಪಾತ್ರಧಾರಿಯಲ್ಲಿ ಬದಲಾವಣೆಯಾಗಿದೆ. ಇಷ್ಟು ದಿನ ಕರ್ಣನ ತಂದೆ ರಮೇಶ್‌ ಪಾತ್ರದಲ್ಲಿ ನಟಿಸುತ್ತಿದ್ದ ಹಿರಿಯ ನಟ ಟಿ.ಎಸ್. ನಾಗಾಭರಣ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಅವರ ಬದಲಿಗೆ ಅಭಿಜಿತ್ ಅವರ ಆಗಮನವಾಗಿದೆ.

ಈ ಕುರಿತು ಜೀ ಕನ್ನಡ ವಾಹಿನಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಬಿಡುಗಡೆ ಮಾಡಿದ್ದು, ಅಭಿಜಿತ್ ಅವರನ್ನು ತೋರಿಸಲಾಗಿದೆ. ರಮೇಶ್ ಮತ್ತು ತಾರಾ ಕುತಂತ್ರದಿಂದ ಜೈಲು ಸೇರಿದ್ದ ಕರ್ಣ ಕೊನೆಗೂ ಹೊರಗೆ ಬಂದಿದ್ದಾನೆ.

ADVERTISEMENT

ಆಸ್ಪತ್ರೆ ಮುಂದೆ ಬಂದಿರುವ ಕರ್ಣ, ನನ್ನ ಮೇಲಿನ ದ್ವೇಷಕ್ಕಾಗಿ ಎಲ್ಲರ ಕನಸನ್ನು ಛಿದ್ರ ಮಾಡಿದವರನ್ನು ಸುಮ್ಮನೆ ಬಿಡೋದಿಲ್ಲ ಎಂದಿದ್ದಾನೆ. ಪ್ರೋಮೊದಲ್ಲಿ ರಮೇಶ್, ನಿತ್ಯಾ, ನಿಧಿ ಮತ್ತು ಕರ್ಣನ ಫೋಟೋಗೆ ಪೂಜೆ ಸಲ್ಲಿಸಿ ಪಿಂಡ ಬಿಡುತ್ತಿದ್ದಾನೆ.

ಇನ್ನುಮುಂದೆ ನೀನು ಇರಿಸುವ ಪ್ರತಿಯೊಂದು ಹೆಜ್ಜೆ ಏನಾಗಿರಬೇಕು ಎಂದು ನಾನು ನಿರ್ಧರಿಸುತ್ತೇನೆ ಎಂದಿದ್ದಾನೆ. ಆದರೆ ನಟ ಟಿ.ಎಸ್. ನಾಗಾಭರಣ ಅವರು ಧಾರಾವಾಹಿಯಿಂದ ಹೊರ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.