
ಶಿವಣ್ಣ
ಚಿತ್ರ: ಇನ್‌ಸ್ಟಾಗ್ರಾಂ
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಪ್ರವೇಶಿಸಿ 40 ವರ್ಷಗಳು ಭರ್ತಿಯಾಗಿವೆ. ಈ ಸಂಭ್ರಮವನ್ನು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಇಡೀ ತಂಡ ದುಪ್ಪಟ್ಟುಗೊಳಿಸಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಶಿವಣ್ಣನ 40 ವರ್ಷಗಳ ಸಿನಿ ಪಯಣವನ್ನು ಸಂಭ್ರಮಿಸಲಾಗಿದೆ.
ಜೀ ಕನ್ನಡ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೊ ಒಂದನ್ನು ಹಂಚಿಕೊಂಡಿದೆ. ಶಿವಣ್ಣ 40 ವರ್ಷಗಳ ಸಿನಿ ಪಯಣ ಭರ್ತಿ ಮಾಡಿದ ಹಿನ್ನೆಲೆಯಲ್ಲಿ ಈ ವಾರ ‘ಶಿವರಾಜೋತ್ಸವ’ ಮಹಾಸಂಚಿಕೆ ಪ್ರಸಾರವಾಗಲಿದೆ. ಹೀಗಾಗಿ ಸ್ಪರ್ಧಿಗಳು ಶಿವಣ್ಣ ನಟಿಸಿರುವ ಸಿನಿಮಾದ ಹಾಡುಗಳಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ವಿಶೇಷ ಏನೆಂದರೆ ಶಿವಣ್ಣನ ಬಗ್ಗೆ ಹಿತೈಷಿಗಳು ಹಾಡಿ ಹೊಗಳಿದ್ದಾರೆ.
ಅಭಿಮಾನಿಗಳು, ಹಿತೈಷಿಗಳು ತೋರಿಸಿದ ಪ್ರೀತಿ ಕಂಡು ನಟ ಶಿವರಾಜ್ ಕುಮಾರ್ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ‘ಎಷ್ಟು ಜನ ನನ್ನನ್ನು ಪ್ರೀತಿಸುತ್ತಾರೆ. ನಿಮ್ಮೆಲ್ಲಾ ಅಭಿಮಾನಕ್ಕೆ ನಾನು ಯಾವಾಗಲೂ ಚಿರಋಣಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.