ADVERTISEMENT

Cheetah Back In India: ಕಾರಿಗಿಂತಲೂ ವೇಗವಾಗಿ ಓಡುವ ಚೀತಾ...ನಿಮಗಿದು ಗೊತ್ತೇ?

ಪಿಟಿಐ
Published 17 ಸೆಪ್ಟೆಂಬರ್ 2022, 6:50 IST
Last Updated 17 ಸೆಪ್ಟೆಂಬರ್ 2022, 6:50 IST
ಚೀತಾ
ಚೀತಾ   

ನವದೆಹಲಿ: ನಿಮಗಿದು ಗೊತ್ತೇ? ಚೀತಾ ಬಹುತೇಕ ಎಲ್ಲ ಕಾರಿಗಿಂತಲೂ ವೇಗವಾಗಿ ಓಡುವ ಸಾಮರ್ಥ್ಯ ಹೊಂದಿದೆ. ಆದರೆ ತನ್ನ ವೇಗವನ್ನು ಅರ್ಧ ನಿಮಿಷಕ್ಕೂ ಹೆಚ್ಚು ಹೊತ್ತು ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನ ಅತ್ಯಂತ ವೇಗದ ಓಟಗಾರ, ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಗಂಟೆಗೆ ಗರಿಷ್ಠ 44.72 ಕಿ.ಮೀ. ವೇಗ ಕಾಪಾಡಿಕೊಂಡಿದ್ದಾರೆ. ಆದರೆ ಚೀತಾ ಕೇವಲ ಮೂರು ಸೆಕೆಂಡುಗಳಲ್ಲಿ 100 ಮೀಟರ್ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ. ಇದು ಕಾರಿಗಿಂತಲೂ ಹೆಚ್ಚು ವೇಗದಿಂದ ಕೂಡಿದೆ.

ಸುಮಾರು ಏಳು ದಶಕಗಳ ಬಳಿಕ ಚೀತಾ ಪ್ರಭೇದ ಭಾರತಕ್ಕೆ ಮರು ಪ್ರವೇಶಿಸಿದೆ. ನಮೀಬಿಯಾದಿಂದ ತಂದಿರುವ ಏಳು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಬಿಡುಗಡೆ ಮಾಡಿದ್ದಾರೆ.

ದೆಹಲಿ ಮೂಲದ ಪತ್ರಕರ್ತ, ಬರಹಗಾರ ಕಬೀರ್ ಸಂಜಯ್ ಪ್ರಕಾರ, ಅಸಾಧಾರಣ ವೇಗಕ್ಕೆ ಚೀತಾ ಹೆಸರುವಾಸಿಯಾಗಿದೆ. ಆದರೆ ಅವುಗಳಲ್ಲಿ ಸ್ಟಾಮಿನಾ (ದೈಹಿಕ ಸಾಮರ್ಥ್ಯ) ಇಲ್ಲ ಎಂದು ಹೇಳುತ್ತಾರೆ.

ಚಿರತೆ ಸ್ಪ್ರಿಂಟರ್ (ಅತ್ಯಂತ ವೇಗವಾಗಿ ಓಡು) ಆಗಿದ್ದು, ಆದರೆ ಮ್ಯಾರಥಾನ್ ಓಟಗಾರ ಅಲ್ಲ. ಹೆಚ್ಚು ಹೊತ್ತು ವೇಗವಾಗಿ ದೌಡಾಯಿಸಲು ಸಾಧ್ಯವಿಲ್ಲ. ಅದು 30 ಸೆಕೆಂಡು ಅಥವಾ ಅದಕ್ಕಿಂತಲೂ ಕಡಿಮೆ ಅವಧಿಯಲ್ಲಿ ತನ್ನ ಬೇಟೆಯನ್ನು ಹಿಡಿಯಬೇಕಾಗುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ:

ಈ ತ್ವರಿತ ವೇಗದಲ್ಲಿ ಬೇಟೆಯಾಡಲು ವಿಫಲವಾದರೆ ಚೀತಾ ತನ್ನ ಬೇಟೆಯನ್ನೇ ಬಿಟ್ಟುಬಿಡುತ್ತದೆ. ಹಾಗಾಗಿ ಚೀತಾಗಳ ಬೇಟೆಯ ಯಶಸ್ಸಿನ ಪ್ರಮಾಣ ಶೇಕಡ 40ರಿಂದ 50ರಷ್ಟು ಮಾತ್ರವಿರುತ್ತದೆ ಎಂದು ತಿಳಿಸಿದ್ದಾರೆ.

ಚೀತಾಗಳು ಹಗಲು ಹೊತ್ತಿನಲ್ಲಿ ಸಕ್ರಿಯವಾಗಿರುತ್ತವೆ. ಮುಂಜಾನೆ ಹಾಗೂ ಮಧ್ಯಾಹದ ಹೊತ್ತಿನಲ್ಲಿ ಹೆಚ್ಚು ಬೇಟೆಯಾಡುತ್ತವೆ. ಬೇಟೆಯಾಡಿದ ತಕ್ಷಣ ದಣಿವಿನಿಂದಾಗಿ ವಿಶ್ರಾಂತಿಯನ್ನು ಬಯಸುತ್ತದೆ. ಹಾಗಾಗಿ ಬೇಟೆಯಾಡಿದ ಪ್ರಾಣಿ ಓಡಿ ಹೋಗುವ ಸಾಧ್ಯತೆಯೂ ಹೆಚ್ಚಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.