ADVERTISEMENT

ಆಳ–ಅಗಲ: ಪಾಕಿಸ್ತಾನಕ್ಕೆ ಭಾರತದೊಂದಿಗೆ ಯುದ್ಧ ಮಾಡುವ ಶಕ್ತಿ ಇದೆಯೇ?

ಭಾರತ ಮತ್ತು ಪಾಕಿಸ್ತಾನದ ನಡುವೆ ಕವಿದ ಯುದ್ಧ ಕಾರ್ಮೋಡಛ ‘ಸಿಂಧೂರ’ ಕಾರ್ಯಾಚರಣೆ ನಡೆಸಿದ ನಂತರ ಪಾಕಿಸ್ತಾನವು ಭಾರತದೊಂದಿಗೆ ಸೇನಾ ಸಂಘರ್ಷಕ್ಕೆ ಇಳಿದಿದೆ

​ಪ್ರಜಾವಾಣಿ ವಾರ್ತೆ
Published 8 ಮೇ 2025, 23:57 IST
Last Updated 8 ಮೇ 2025, 23:57 IST
<div class="paragraphs"><p>ಭಾರತ, ಪಾಕಿಸ್ತಾನ</p></div>

ಭಾರತ, ಪಾಕಿಸ್ತಾನ

   

(ಐಸ್ಟೋಕ್ ಸಂಗ್ರಹ ಚಿತ್ರ)

ಪಹಲ್ಗಾಮ್‌ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಅದು ಆಕ್ರಮಿಸಿರುವ ಕಾಶ್ಮೀರದಲ್ಲಿರುವ ಉಗ್ರರ ಒಂಬತ್ತು ನೆಲೆಗಳನ್ನು ನಾಶ ಪಡಿಸಲು ‘ಸಿಂಧೂರ’ ಕಾರ್ಯಾಚರಣೆ ನಡೆಸಿದ ನಂತರ ಪಾಕಿಸ್ತಾನವು ಭಾರತದೊಂದಿಗೆ ಸೇನಾ ಸಂಘರ್ಷಕ್ಕೆ ಇಳಿದಿದೆ. ಇದು ಉಭಯ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ. ದಿವಾಳಿಯ ಅಂಚಿನಲ್ಲಿದ್ದ ಪಾಕಿಸ್ತಾನದ ಅರ್ಥವ್ಯವಸ್ಥೆ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲಿ ಭಾರತದೊಂದಿಗೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಹೊರಡುವುದು ದೇಶವನ್ನು ಮತ್ತೆ ಆರ್ಥಿಕವಾಗಿ ಪ್ರಪಾತದತ್ತ ಕೊಂಡೊಯ್ಯಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಸೇನಾ ಸಾಮರ್ಥ್ಯ ಹೊಂದಿರುವ ಭಾರತದ ವಿರುದ್ಧ ಮತ್ತೊಂದು ಯುದ್ಧ ಮಾಡುವುದು ಪಾಕ್‌ಗೆ ದುಬಾರಿಯಾದೀತು ಎಂದೂ ಹೇಳಲಾಗುತ್ತಿದೆ.

ADVERTISEMENT

––––––––––––––‌

ಭಾರತೀಯ ಸೇನೆ ಸಂಘಟಿಸಿದ್ದ ‘ಆಪರೇಷನ್‌ ಸಿಂಧೂರ’ಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಾಗರಿಕನ್ನು ಗುರಿಯಾಗಿಸಿಕೊಂಡು ಶೆಲ್‌ ದಾಳಿ ನಡೆಸುತ್ತಿದೆ. 16ಕ್ಕೂ ಹೆಚ್ಚು ನಾಗರಿಕರನ್ನು ಕೊಂದಿದೆ. ಭಾರತದ ಪ್ರಮುಖ ನಗರಗಳಲ್ಲಿರುವ ಸೇನಾ ನೆಲೆಗಳತ್ತ ಕ್ಷಿಪಣಿ ದಾಳಿಯನ್ನೂ ನಡೆಸಿದೆ. ಪಾಕ್‌ ಯತ್ನವನ್ನು ಭಾರತೀಯ ಸೇನೆಯು ತಡೆದಿದೆ. ಅಲ್ಲದೇ, ಅವರ ಸೇನಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿಯನ್ನೂ ನಡೆಸಿದೆ. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಎರಡೂ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷ ಇನ್ನೂ ಕೆಲವು ದಿನ ಮುಂದುವರಿಯಬಹುದು.  

2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತವು ಬಾಲಾಕೋಟ್‌ ಮೇಲೆ ನಿರ್ದಿಷ್ಟ ದಾಳಿ ಸಂಘಟಿಸಿದ್ದಾಗ, ಪಾಕಿಸ್ತಾನ ಈಗಿನಂತೆ ಪ್ರತಿಕ್ರಿಯಿಸಿರಲಿಲ್ಲ. ಪಾಕಿಸ್ತಾನದ ನೆಲದಲ್ಲಿ ಪತನಗೊಂಡಿದ್ದ ಭಾರತದ ಯುದ್ಧವಿಮಾನದ ಪೈಲಟ್‌ ಅಭಿನಂದನ್‌ ಅವರನ್ನು ಸೆರೆ ಹಿಡಿದಿದ್ದರೂ, ನಂತರ ಭಾರತಕ್ಕೆ ಹಸ್ತಾಂತರಿಸಿತ್ತು. ಅಲ್ಲದೇ, ಭಾರತದ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರತಿದಾಳಿ ನಡೆಸುವ ದುಸ್ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ, ಈ ಬಾರಿ ಭಾರತವು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳು ಮಾತ್ರವಲ್ಲದೇ, ಪಾಕಿಸ್ತಾನದ ನೆಲದಲ್ಲಿರುವ ಭಯೋತ್ಪಾದಕರ ನಾಲ್ಕು ನೆಲೆಗಳನ್ನೂ ಧ್ವಂಸಗೊಳಿಸಿದೆ. ಇದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗರ ಉಂಟು ಮಾಡಿದೆ. ಪಹಲ್ಗಾಮ್‌ ದಾಳಿಯ ನಂತರ ಭಾರತ ತೆಗೆದುಕೊಂಡಿದ್ದ ಸಿಂಧೂ ಜಲ ಒಪ್ಪಂದ ಅಮಾನತು, ಅಟ್ಟಾರಿ ಗಡಿ ಬಂದ್‌ ಸೇರಿದಂತೆ ಇತರ ರಾಜತಾಂತ್ರಿಕ ಕ್ರಮಗಳು ಕೂಡ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಭಾರತಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳುತ್ತಲೇ ಬಂದಿದ್ದ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಲೇ ಇತ್ತು. ಬುಧವಾರ ನಸುಕಿನಲ್ಲಿ ಭಾರತೀಯ ಸೇನೆ ಕೈಗೊಂಡ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಂತರ ಭಾರತದ ಮೇಲೆ ಪ್ರತಿದಾಳಿ ನಡೆಸಲೇ ಬೇಕಾದ ಒತ್ತಡ ಪಾಕಿಸ್ತಾನ ಸರ್ಕಾರದ ಮೇಲೆ ಬಿದ್ದಿದೆ. ಹೀಗಾಗಿ ಅದೀಗ ಸೇನಾ ಸಂಘರ್ಷಕ್ಕೆ ಇಳಿದಿದೆ.

ಎರಡೂ ರಾಷ್ಟ್ರಗಳ ಸೇನೆಗಳು ದಾಳಿ–ಪ್ರತಿದಾಳಿಗೆ ಇಳಿದಿರುವುದರಿಂದ ಭಾರತ–ಪಾಕಿಸ್ತಾನ ಮಧ್ಯೆ ಮತ್ತೊಂದು ಯುದ್ಧದ ಕಾರ್ಮೋಡ ಕವಿದಿದೆ. ಈಗಿನ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧವಾಗಿ ಪರಿವರ್ತನೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಉಗ್ರರು ಮತ್ತು ಭಯೋತ್ಪಾದನೆಯನ್ನು ಪೋಷಿಸುತ್ತಾ ಬಂದಿರುವ ಪಾಕಿಸ್ತಾನವು ಈಗ ಜಾಗತಿಕವಾಗಿ ಏಕಾಂಗಿಯಾಗಿದೆ. ಚೀನಾ, ಟರ್ಕಿ ಬಹಿರಂಗವಾಗಿ ಬೆಂಬಲ ಸೂಚಿಸಿರುವುದು ಬಿಟ್ಟರೆ ಬೇರೆ ರಾಷ್ಟ್ರಗಳು ಅದರ ಪರವಾಗಿ ಮಾತನಾಡಿಲ್ಲ. ಇದು ಒಂದು ಕಾರಣವಾದರೆ, ಅದರ ಆರ್ಥಿಕ ಪರಿಸ್ಥಿತಿ ಮತ್ತೊಂದು ಕಾರಣ. ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿರುವ ಪಾಕಿಸ್ತಾನಕ್ಕೆ ಈಗ ಪೂರ್ಣ ಪ್ರಮಾಣದ ಯುದ್ಧ ಮಾಡುವ ಸಾಮರ್ಥ್ಯ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಪೂರ್ಣ ಪ್ರಮಾಣದ ಯುದ್ಧಕ್ಕೆ ದೊಡ್ಡ ಮಟ್ಟಿನ ವೆಚ್ಚ, ಶಸ್ತ್ರಾಸ್ತ್ರ ಖರೀದಿ ಮಾಡಬೇಕಾಗುತ್ತದೆ. ಆದರೆ, ಈಗಿನ ಪಾಕಿಸ್ತಾನಕ್ಕೆ ಆ ಸಾಮರ್ಥ್ಯವಿಲ್ಲ. ಒಂದು ವೇಳೆ ಸೇನಾ ಸಂಘರ್ಷ ದೀರ್ಘ ಅವಧಿಗೆ ಮುಂದುವರಿದಿದ್ದೇ ಆದರೆ, ಪಾಕಿಸ್ತಾನದ ಅರ್ಥವ್ಯವಸ್ಥೆ ಇನ್ನಷ್ಟು ಕುಸಿಯಲಿದ್ದು, ಅದರ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಜಾಗತಿಕ ರೇಟಿಂಗ್‌ ಏಜೆನ್ಸಿ ಮೂಡೀಸ್‌ ಹೇಳಿದೆ. 

ಪಾಕ್‌ ಆರ್ಥಿಕ ಪರಿಸ್ಥಿತಿ ಹೇಗಿದೆ? 

ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ರಾಷ್ಟ್ರವಾದಾಗಿನಿಂದಲೂ ಪಾಕಿಸ್ತಾನವು ರಾಜಕೀಯ ಅಸ್ಥಿರತೆಗೆ ಸಾಕ್ಷಿಯಾಗಿದೆ. ಹಲವು ದಶಕಗಳಿಂದ ಅಲ್ಲಿನ ಆಡಳಿತ ಹದಗೆಡುತ್ತಾ ಬಂದಿದೆ. ಆರ್ಥಿಕ ಶಿಸ್ತಿನ ಕೊರತೆಯೂ ದೇಶವನ್ನು ಬಾಧಿಸುತ್ತಿದ್ದು ಸರ್ಕಾರಗಳು ಮಿತಿಮೀರಿದ ಸಾಲ ಮಾಡುತ್ತಾ ಬಂದಿದ್ದವು. ಇವೆಲ್ಲದರ ಪರಿಣಾಮವಾಗಿ ಪಾಕಿಸ್ತಾನದ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. 2023ರಲ್ಲಿ ಅದು ಆರ್ಥಿಕವಾಗಿ ದಿವಾಳಿಯಾಗುವ ಹಂತಕ್ಕೂ ಬಂದಿತ್ತು. 2022–23ರಲ್ಲಿ ಅದರ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ –0.2ಕ್ಕೆ ಕುಸಿದಿತ್ತು. ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮತ್ತು ವಿಶ್ವ ಬ್ಯಾಂಕ್‌ ಮಧ್ಯಪ್ರವೇಶಿಸಿ ವಿಶೇಷ ಸಾಲ ಪ್ಯಾಕೇಜ್‌ ಘೋಷಿಸಿದ್ದರಿಂದ ಪಾಕಿಸ್ತಾನ ದಿವಾಳಿಯಾಗುವುದರಿಂದ ಬಚಾವಾಗಿತ್ತು. ಅದರ ವಿದೇಶಿ ವಿನಿಯಮ ಮೀಸಲು ಮೊತ್ತ 307 ಕೋಟಿ ಡಾಲರ್‌ಗೆ (ಭಾರತದ ಕರೆನ್ಸಿಯಲ್ಲಿ ₹26,209 ಕೋಟಿ) ಕುಸಿದಿತ್ತು. ಅಂದರೆ, ಒಂದು ತಿಂಗಳಲ್ಲಿ ಅದು ಮಾಡುವ ಆಮದಿನ ವೆಚ್ಚವನ್ನು ಭರಿಸುವಷ್ಟೂ ಮೀಸಲು  ಅದರ ಬಳಿ ಇರಲಿಲ್ಲ.

ಆ ವರ್ಷ ಐಎಂಎಫ್‌ ಪಾಕಿಸ್ತಾನಕ್ಕೆ 300 ಕೋಟಿ ಡಾಲರ್‌ (₹25,611 ಕೋಟಿ) ಸಾಲ ನೀಡಿತ್ತು. 2024ರಲ್ಲಿ ಮತ್ತೆ 700 ಕೋಟಿ ಡಾಲರ್‌ (₹59,759 ಕೋಟಿ) ಮಂಜೂರು ಮಾಡಿದೆ. ಆ ನಂತರ ಪಾಕಿಸ್ತಾನದ ಆರ್ಥಿಕತೆ ಕೊಂಚ ಚೇತರಿಕೆ ಕಂಡಿದೆ. ಹಣದುಬ್ಬರ ಇಳಿಕೆಯಾಗಿದೆ. ವಿದೇಶಿ ವಿನಿಮಯ ಮೀಸಲು ಹೆಚ್ಚಾಗಿದೆ. ಸದ್ಯ ಅದು 1,500 ಡಾಲರ್‌ಗೆ (₹1.28 ಲಕ್ಷ ಕೋಟಿ) ಏರಿಕೆಯಾಗಿದೆ. ಹಾಗಿದ್ದರೂ, ಸಾಲವನ್ನು ಮರುಪಾವತಿ ಮಾಡಲು ಮತ್ತು ಆಮದು ವೆಚ್ಚವನ್ನು ಭರಿಸಲು ಇದು ಸಾಕಾಗದು ಎಂದು ಐಎಂಎಫ್‌ ಹೇಳಿದೆ. 

ಇಂತಹ ಹೊತ್ತಿನಲ್ಲಿ ಭಾರತದೊಂದಿಗೆ ಸೇನಾ ಸಂಘರ್ಷಕ್ಕೆ ಇಳಿದರೆ ಪಾಕಿಸ್ತಾನದ ಆರ್ಥಿಕತೆಗೆ ಇನ್ನಷ್ಟು ಹೊಡೆತ ಬೀಳಲಿದೆ. ಆರ್ಥಿಕವಾಗಿ ಸದೃಢವಾಗಿರುವ ಭಾರತದ ಮೇಲೆ ಯುದ್ಧವು ಹೆಚ್ಚು ಪರಿಣಾಮ ಬೀರದು, ಹೊಡೆತ ನೀಡದು ಎಂದು ಮೂಡೀಸ್‌ ರೇಟಿಂಗ್‌ ಏಜೆನ್ಸಿ ಅಭಿಪ್ರಾಯಪಟ್ಟಿದೆ. 

ಇದರ ನಡುವೆಯೇ, ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ಗೆ ಭಾರತ ಮನವಿ ಮಾಡಿದೆ. ಈ ವರ್ಷ, ಹವಾಮಾನ ಬದಲಾವಣೆ ನಿಯಂತ್ರಣಕ್ಕಾಗಿ ಪಾಕಿಸ್ತಾನಕ್ಕೆ 130 ಕೋಟಿ ಡಾಲರ್‌ ಸಾಲವನ್ನು ನೀಡಲು ಐಎಂಎಫ್‌ ಮುಂದಾಗಿದ್ದು, ಈ ಬಗ್ಗೆ ಚರ್ಚಿಸಲು ಐಎಂಎಫ್‌ ಆಡಳಿತ ಮಂಡಳಿ ಶುಕ್ರವಾರ (ಮೇ 9) ಸಭೆ ಕರೆದಿದೆ. ಕಳೆದ ವರ್ಷ ಮಂಜೂರು ಮಾಡಿದ್ದ 700 ಕೋಟಿ ಸಾಲದಲ್ಲಿ ಇನ್ನೂ 100 ಕೋಟಿ ಡಾಲರ್‌ ಬರಬೇಕಿದೆ. ಭಾರತದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಸಾಲ ವಿಸ್ತರಿಸುವ ಬಗ್ಗೆ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಸಾಲ ನೀಡಲು ನಿರಾಕರಿಸಿದರೆ ಪಾಕಿಸ್ತಾನಕ್ಕೆ ಆರ್ಥಿಕವಾಗಿ ಮತ್ತಷ್ಟು ಸವಾಲುಗಳು ಎದುರಾಗಲಿವೆ.

ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ರಾಷ್ಟ್ರವಾದಾಗಿನಿಂದಲೂ ಪಾಕಿಸ್ತಾನವು ರಾಜಕೀಯ ಅಸ್ಥಿರತೆಗೆ ಸಾಕ್ಷಿಯಾಗಿದೆ. ಹಲವು ದಶಕಗಳಿಂದ ಅಲ್ಲಿನ ಆಡಳಿತ ಹದಗೆಡುತ್ತಾ ಬಂದಿದೆ. ಆರ್ಥಿಕ ಶಿಸ್ತಿನ ಕೊರತೆಯೂ ದೇಶವನ್ನು ಬಾಧಿಸುತ್ತಿದ್ದು ಸರ್ಕಾರಗಳು ಮಿತಿಮೀರಿದ ಸಾಲ ಮಾಡುತ್ತಾ ಬಂದಿದ್ದವು. ಇವೆಲ್ಲದರ ಪರಿಣಾಮವಾಗಿ ಪಾಕಿಸ್ತಾನದ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. 2023ರಲ್ಲಿ ಅದು ಆರ್ಥಿಕವಾಗಿ ದಿವಾಳಿಯಾಗುವ ಹಂತಕ್ಕೂ ಬಂದಿತ್ತು. 2022–23ರಲ್ಲಿ ಅದರ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ –0.2ಕ್ಕೆ ಕುಸಿದಿತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮತ್ತು ವಿಶ್ವ ಬ್ಯಾಂಕ್‌ ಮಧ್ಯಪ್ರವೇಶಿಸಿ ವಿಶೇಷ ಸಾಲ ಪ್ಯಾಕೇಜ್‌ ಘೋಷಿಸಿದ್ದರಿಂದ ಪಾಕಿಸ್ತಾನ ದಿವಾಳಿಯಾಗುವುದರಿಂದ ಬಚಾವಾಗಿತ್ತು. ಅದರ ವಿದೇಶಿ ವಿನಿಯಮ ಮೀಸಲು ಮೊತ್ತ 307 ಕೋಟಿ ಡಾಲರ್‌ಗೆ (ಭಾರತದ ಕರೆನ್ಸಿಯಲ್ಲಿ ₹26,209 ಕೋಟಿ) ಕುಸಿದಿತ್ತು. ಅಂದರೆ, ಒಂದು ತಿಂಗಳಲ್ಲಿ ಅದು ಮಾಡುವ ಆಮದಿನ ವೆಚ್ಚವನ್ನು ಭರಿಸುವಷ್ಟೂ ಮೀಸಲು  ಅದರ ಬಳಿ ಇರಲಿಲ್ಲ.

ಆ ವರ್ಷ ಐಎಂಎಫ್‌ ಪಾಕಿಸ್ತಾನಕ್ಕೆ 300 ಕೋಟಿ ಡಾಲರ್‌ (₹25,611 ಕೋಟಿ) ಸಾಲ ನೀಡಿತ್ತು. 2024ರಲ್ಲಿ ಮತ್ತೆ 700 ಕೋಟಿ ಡಾಲರ್‌ (₹59,759 ಕೋಟಿ) ಮಂಜೂರು ಮಾಡಿದೆ. ಆ ನಂತರ ಪಾಕಿಸ್ತಾನದ ಆರ್ಥಿಕತೆ ಕೊಂಚ ಚೇತರಿಕೆ ಕಂಡಿದೆ. ಹಣದುಬ್ಬರ ಇಳಿಕೆಯಾಗಿದೆ. ವಿದೇಶಿ ವಿನಿಮಯ ಮೀಸಲು ಹೆಚ್ಚಾಗಿದೆ. ಸದ್ಯ ಅದು 1,500 ಡಾಲರ್‌ಗೆ (₹1.28 ಲಕ್ಷ ಕೋಟಿ) ಏರಿಕೆಯಾಗಿದೆ. ಹಾಗಿದ್ದರೂ, ಸಾಲವನ್ನು ಮರುಪಾವತಿ ಮಾಡಲು ಮತ್ತು ಆಮದು ವೆಚ್ಚವನ್ನು ಭರಿಸಲು ಇದು ಸಾಕಾಗದು ಎಂದು ಐಎಂಎಫ್‌ ಹೇಳಿದೆ. 

ಇಂತಹ ಹೊತ್ತಿನಲ್ಲಿ ಭಾರತದೊಂದಿಗೆ ಸೇನಾ ಸಂಘರ್ಷಕ್ಕೆ ಇಳಿದರೆ ಪಾಕಿಸ್ತಾನದ ಆರ್ಥಿಕತೆಗೆ ಇನ್ನಷ್ಟು ಹೊಡೆತ ಬೀಳಲಿದೆ. ಆರ್ಥಿಕವಾಗಿ ಸದೃಢವಾಗಿರುವ ಭಾರತದ ಮೇಲೆ ಯುದ್ಧವು ಹೆಚ್ಚು ಪರಿಣಾಮ ಬೀರದು ಎಂದು ಮೂಡೀಸ್‌ ರೇಟಿಂಗ್‌ ಏಜೆನ್ಸಿ ಅಭಿಪ್ರಾಯಪಟ್ಟಿದೆ. 

ಇದರ ನಡುವೆಯೇ, ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ಗೆ ಭಾರತ ಮನವಿ ಮಾಡಿದೆ. ಈ ವರ್ಷ, ಹವಾಮಾನ ಬದಲಾವಣೆ ನಿಯಂತ್ರಣಕ್ಕಾಗಿ ಪಾಕಿಸ್ತಾನಕ್ಕೆ 130 ಕೋಟಿ ಡಾಲರ್‌ ಸಾಲವನ್ನು ನೀಡಲು ಐಎಂಎಫ್‌ ಮುಂದಾಗಿದ್ದು, ಈ ಬಗ್ಗೆ ಚರ್ಚಿಸಲು ಐಎಂಎಫ್‌ ಆಡಳಿತ ಮಂಡಳಿ ಶುಕ್ರವಾರ (ಮೇ 9) ಸಭೆ ಕರೆದಿದೆ. ಕಳೆದ ವರ್ಷ ಮಂಜೂರು ಮಾಡಿದ್ದ 700 ಕೋಟಿ ಸಾಲದಲ್ಲಿ ಇನ್ನೂ 100 ಕೋಟಿ ಡಾಲರ್‌ ಬರಬೇಕಿದೆ. ಭಾರತದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಸಾಲ ವಿಸ್ತರಿಸುವ ಬಗ್ಗೆ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಸಾಲ ನೀಡಲು ನಿರಾಕರಿಸಿದರೆ ಪಾಕಿಸ್ತಾನಕ್ಕೆ ಆರ್ಥಿಕವಾಗಿ ಮತ್ತಷ್ಟು ಸವಾಲುಗಳು ಎದುರಾಗಲಿವೆ.

ಸೇನಾಬಲ: ಭಾರತ ಮುಂದು

ಪಾಕಿಸ್ತಾನವು ಈವರೆಗೆ ಭಾರತದೊಂದಿಗೆ ಮೂರು ಬಾರಿ (1965, 1971, 1999) ಪೂರ್ಣ ಪ್ರಮಾಣದ ಯುದ್ಧ ನಡೆಸಿದೆ. ಮೂರರಲ್ಲೂ ಸೋಲು ಕಂಡಿದೆ. ಬಲಿಷ್ಠ ಸೇನೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಭಾರತಕ್ಕೆ ಸೇನಾ ಸಾಮರ್ಥ್ಯದಲ್ಲಿ ಪಾಕಿಸ್ತಾನವು ಯಾವತ್ತಿಗೂ ಸರಿಸಮಾನವಿಲ್ಲ. ಅಂಕಿ ಅಂಶಗಳೇ ಅದನ್ನು ಹೇಳುತ್ತವೆ.

ಗ್ಲೋಬಲ್‌ಫೈರ್‌ಪವರ್‌.ಕಾಂ ಇತ್ತೀಚೆಗೆ ಪ್ರಕಟಿಸಿರುವ ವರದಿಯ ಪ್ರಕಾರ, ಸೇನಾಬಲದಲ್ಲಿ ಭಾರತವು ನಾಲ್ಕನೇ ರ‍್ಯಾಂಕ್‌ ಗಳಿಸಿದೆ. ಪಾಕಿಸ್ತಾನದ್ದು 12ನೇ ರ‍್ಯಾಂಕ್‌. 145 ರಾಷ್ಟ್ರಗಳ ಸೇನಾ ಬಲವನ್ನು ಈ ವರದಿಯಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಮೊದಲ ಮೂರು ಸ್ಥಾನಗಳಲ್ಲಿ ಅಮೆರಿಕ, ಚೀನಾ ಮತ್ತು ರಷ್ಯಾಗಳಿವೆ. 

‘ಆಪರೇಷನ್‌ ಸಿಂಧೂರ’ವನ್ನು ಯಶಸ್ವಿಯಾಗಿ ಸಂಘಟಿಸಿರುವ ಭಾರತವು ಪಾಕಿಸ್ತಾನದ ಪ್ರತಿದಾಳಿಯನ್ನು ಎದುರಿಸಲು ಎಲ್ಲ ರೀತಿಯಿಂದಲೂ ಸನ್ನದ್ಧವಾಗಿದೆ. ಆರ್ಥಿಕವಾಗಿ ಕುಸಿದಿರುವ ಮತ್ತು ಸೇನಾ ಬಲದಲ್ಲೂ ದುರ್ಬಲವಾಗಿರುವ ಪಾಕಿಸ್ತಾನವು ಈ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಹೊರಡುವುದು ಅದಕ್ಕೆ ದುಬಾರಿಯಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ಆಧಾರ: ಪಿಟಿಐ, ಐಎಂಎಫ್‌, ಗ್ಲೋಬಲ್‌ಫೈರ್‌ಪವರ್‌.ಕಾಂ, ಮಿಲಿಟರಿವಾಚ್‌ ಮ್ಯಾಗಜೀನ್‌, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.