ADVERTISEMENT

Recipe | ನುಗ್ಗೆಸೊಪ್ಪಿನ ಚಟ್ನಿ ಹೀಗೆ ಮಾಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2026, 13:11 IST
Last Updated 10 ಜನವರಿ 2026, 13:11 IST
   

ನುಗ್ಗೆಕಾಯಿ ಹಾಗೂ ನುಗ್ಗೆ ಸೊಪ್ಪಿನಲ್ಲಿ ಅಗಾಧ ಪೋಷಕಾಂಶಗಳಿವೆ. ಅವುಗಳಿಂದ ಸಾಂಬಾರ್, ಪಲ್ಯ ಮಾತ್ರವಲ್ಲದೇ, ಚಟ್ನಿಯನ್ನೂ ಮಾಡಬಹುದು. ನುಗ್ಗೆಸೊಪ್ಪಿನ ಚಟ್ನಿ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ.

ನುಗ್ಗೆಸೊಪ್ಪಿನ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು

ನುಗ್ಗೆಸೊಪ್ಪು – 1 ಕಪ್

ADVERTISEMENT

ಹೆಚ್ಚಿಕೊಂಡ ಈರುಳ್ಳಿ – 1

ಬೆಳ್ಳುಳ್ಳಿ – 3 ರಿಂದ4 ಎಸಳು

ಒಣ ಮೆಣಸಿನಕಾಯಿ– 2ರಿಂದ 3

ತುರಿದ ತೆಂಗಿನಕಾಯಿ– ಅರ್ಧ ಕಪ್

ಒಗ್ಗರಣೆಗೆ– ಕರಿ ಬೇವು, ಸಾಸಿವೆ ಅರ್ಧ ಚಮಚ

ಅರಿಶಿಣ ಪುಡಿ– ಕಾಲು ಚಮಚ

ಅಡುಗೆ ಎಣ್ಣೆ

ಉಪ್ಪು– ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಒಣಮೆಣಸಿನಕಾಯಿ, ಬೆಳ್ಳುಳ್ಳಿ, ನುಗ್ಗೆಸೊಪ್ಪು ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ಫ್ರೈ ಮಾಡಿಕೊಂಡ ನುಗ್ಗೆಸೊಪ್ಪು ಬಿಸಿ ಆರಿದ ಬಳಿಕ,ಅದಕ್ಕೆ ತೆಂಗಿನ ತುರಿ, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಿ.

ಬಳಿಕ, ಬಾಣಲೆಗೆ ಒಂದು ಚಮಚ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ.

ನಂತರ ರುಬ್ಬಿಕೊಂಡ ನುಗ್ಗೆಸೊಪ್ಪಿನ ಮಿಶ್ರಣಕ್ಕೆ ಒಗ್ಗರಣೆ ಹಾಕಿ ಮಿಶ್ರಣ ಮಾಡಿ..

ಈಗ ಅನ್ನ, ರೊಟ್ಟಿ ಜೊತೆ ಸವಿಯಲು ಸಿದ್ಧ ನುಗ್ಗೆಸೊಪ್ಪಿನ ಚಟ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.