ADVERTISEMENT

ಸುಲಭ ವಿಧಾನದಲ್ಲಿ ಹೀಗೆ ಮಾಡಿ ಮೊಳಕೆ ಕಟ್ಟಿದ ಹುರುಳಿಕಾಳಿನ ಸೂಪ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 13:04 IST
Last Updated 21 ಫೆಬ್ರುವರಿ 2026, 13:04 IST
   

ಮೊಳಕೆ ಕಟ್ಟಿದ  ಹುರುಳಿಕಾಳಿನಲ್ಲಿ ಪೋಷಕಾಂಶ ಹೇರಳವಾಗಿರುತ್ತದೆ. ಈ ಕಾಳಿನ ಖಾದ್ಯಗಳು ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಮೊಳಕೆ ಕಟ್ಟಿದ  ಹುರುಳಿಕಾಳಿನ ಪಲ್ಯ, ಸಾಂಬಾರ್ ಮಾತ್ರವಲ್ಲ. ಬಹು ಬೇಗನೆ ಮಾಡಬಹುದಾದ ಹುರುಳಿಕಾಳಿನ ಸೂಪ್ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ. 

ಹುರುಳಿಕಾಳಿನ ಸೂಪ್ ಮಾಡಲು ಬೇಕಾಗುವ ಸಾಮಗ್ರಿಗಳು

  • ಮೊಳಕೆ ಕಟ್ಟಿದ ಹುರುಳಿಕಾಳು – 1 ರಿಂದ 2 ಬಟ್ಟಲು

  • ಕತ್ತರಿಸಿಕೊಂಡ ಈರುಳ್ಳಿ –1

    ADVERTISEMENT
  • ಕೆಂಪು ಮೆಣಸಿನಕಾಯಿ– 2 ರಿಂದ 3

  • ಜೀರಿಗೆ– 1 ಚಮಚ

  • ಅಡುಗೆ ಎಣ್ಣೆ

  • ತುರಿದ ತಂಗಿನಕಾಯಿ–  ಕಾಲು ಬಟ್ಟಲು

  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊಳಕೆ ಕಟ್ಟಿದ ಹುರುಳಿ ಕಾಳಿಗೆ 2–3 ಲೋಟ ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. 

ನಂತರ ಒಂದು ಬಾಣಲೆಯಲ್ಲಿ 3 ಚಮಚ ಅಡುಗೆ ಎಣ್ಣೆ ಹಾಕಿಕೊಳ್ಳಿ. ಅದಕ್ಕೆ ಜೀರಿಗೆ, ಕೆಂಪು ಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಿಸಿ ಆರಿದ ಬಳಿಕ ಬೇಯಿಸಿಕೊಂಡ ಹುರುಳಿ ಕಾಳನ್ನು ಸ್ವಲ್ಪ ಉಳಿಸಿಕೊಂಡು ಉಳಿದಿದ್ದಕ್ಕೆ ಈರುಳ್ಳಿಯ ಮಿಶ್ರಣವನ್ನು ಸಣ್ಣಗೆ ರುಬ್ಬಿಕೊಳ್ಳಿ.

ನಂತರ ಹುರುಳಿಕಾಳನ್ನು ಬೇಯಿಸಲು ಬಳಸಿದ ನೀರಿಗೆ ರುಬ್ಬಿಕೊಂಡ ಹುರುಳಿಕಾಳು ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5–10 ನಿಮಿಷ ‌ಕುದಿಸಿಕೊಳ್ಳಿ. ನಂತರ ಹೆಚ್ಚಿಕೊಂಡ ಈರುಳ್ಳಿ ಸೇರಿಸಿ ಮಿಶ್ರಣ ಮಾಡಿ.

ಸವಿಯಲು ಸಿದ್ಧ ಬಿಸಿಬಿಸಿಯಾದ ಹುರುಳಿಕಾಳಿನ ಸೂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.