ಪ್ರಜಾವಾಣಿ ಚಿತ್ರ
ದಸರಾ, ದೀಪಾವಳಿ ಸೇರಿದಂತೆ ಸಾಕಷ್ಟು ಹಬ್ಬ ಹರಿದಿನಗಳಲ್ಲಿ ಉತ್ತರ ಕರ್ನಾಟಕದ ಜನರು ವಿಶೇಷ ಸಿಹಿ ತಿಂಡಿಯಾದ ಗೋಧಿ ಹುಗ್ಗಿ ತಯಾರಿಸುತ್ತಾರೆ. ಈ ಗೋಧಿ ಹುಗ್ಗಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅಚ್ಚುಮೆಚ್ಚು. ಹಾಗಿದ್ದರೆ ಮನೆಯಲ್ಲೇ ಗೋಧಿ ಹುಗ್ಗಿಯನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.
ಪ್ರಜಾವಾಣಿ ಚಿತ್ರ
ಗೋಧಿ ಹುಗ್ಗಿ ಮಾಡಲು ಬೇಕಾಗುವ ಸಾಮಾಗ್ರಿಗಳು:
ಗೋಧಿ: 1 ಕಪ್
ಬೆಲ್ಲ: 2 ಉಂಡೆ
ಏಲಕ್ಕಿ: 3
ಉಪ್ಪು: ರುಚಿಗೆ ತಕ್ಕಷ್ಟು
ಪ್ರಜಾವಾಣಿ ಚಿತ್ರ
ಮಾಡುವ ವಿಧಾನ:
ಗೋಧಿ ಹುಗ್ಗಿ ಮಾಡುವ ಒಂದು ದಿನದ ಮೊದಲು ಗೋಧಿಯನ್ನು ಚೆನ್ನಾಗಿ ತೊಳೆದು ಇಡೀ ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಈ ಸಿಹಿ ತಿಂಡಿ ತಯಾರಿಸುವಾಗ ಒಂದು ಕುಕ್ಕರಿಗೆ 2 ಕಪ್ ನೀರು ಹಾಕಿ. ನೀರು ಬಿಸಿಯಾದ ಬಳಿಕ ನೆನೆಸಿಟ್ಟ ಗೋಧಿಯನ್ನು ಹಾಕಿ. 10 ರಿಂದ 20 ನಿಮಿಷದವರೆಗೆ ಗೋಧಿ ಚೆನ್ನಾಗಿ ಕುದಿಯಲು ಬಿಡಿ. (ಗೋಧಿ ಕುದಿಯಲು ಸಮಯ ಹಿಡಿಯುತ್ತದೆ.)
ಬಳಿಕ ಗೋಧಿಯು ಮೃಧು ಹಂತಕ್ಕೆ ಬಂದಾಗ, ಅದಕ್ಕೆ ಬೆಲ್ಲವನ್ನು ಪುಡಿ ಮಾಡಿ ಹಾಕಿ. ಅದಾದ ನಂತರ 3 ಏಲಕ್ಕಿ ಹಾಕಿ ಕುದಿಯಲು ಬಿಡಿ. ಆಗ ಕುದಿಯುತ್ತಿದ್ದ ಗೋಧಿಯಲ್ಲಿ ಕೊಂಚವೇ ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಕುಕ್ಕರ್ ಮುಚ್ಚಿ 5 ಅಥವಾ 6 ವಿಶಲ್ ಕೂಗಿಸಿ. ಬಳಿಕ ಒಂದು ಬೌಲ್‌ಗೆ ಬಿಸಿ ಗೋಧಿ ಹುಗ್ಗಿ ಹಾಕಿ. ಅದರ ಮೇಲೆ ತುಪ್ಪ ಹಾಕಿ. ಈಗ ಉತ್ತರ ಕರ್ನಾಟಕದ ವಿಶೇಷ ಸಿಹಿ ತಿಂಡಿ ಗೋಧಿ ಹುಗ್ಗಿ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.