ADVERTISEMENT

ರಸಾಸ್ವಾದ | ಆಹಾ ಮಾವು! ಮಾವಿನಕಾಯಿ ಖಾದ್ಯಗಳು

ಕೆ.ವಿ.ರಾಜಲಕ್ಷ್ಮಿ
Published 26 ಏಪ್ರಿಲ್ 2025, 0:30 IST
Last Updated 26 ಏಪ್ರಿಲ್ 2025, 0:30 IST
<div class="paragraphs"><p>ಮಾವಿನಕಾಯಿ ಅವಲಕ್ಕಿ</p></div>

ಮಾವಿನಕಾಯಿ ಅವಲಕ್ಕಿ

   
ಈ ಋತುವಿನಲ್ಲಿ ಯಥೇಚ್ಛವಾಗಿ ಸಿಗುವ ಮಾವಿನಕಾಯಿ ಮತ್ತು ಹಣ್ಣಿನಲ್ಲಿಯೇ ವಿಧವಿಧವಾದ ಅಡುಗೆಗಳನ್ನು ಮಾಡಬಹುದು. ನಿತ್ಯ ಮಾಡುವ ಸಾಮಾನ್ಯ ರೆಸಿಪಿಗೆ ಒಂದಷ್ಟು ಮಾವಿನಕಾಯಿ ಹಾಕಿಯೂ ನಾಲಿಗೆಯ ರುಚಿಮೊಗ್ಗುಗಳನ್ನು ಅರಳಿಸಬಹುದು. ಮಾವಿನಕಾಯಿಯ ರೆಸಿಪಿ ನೀಡಿದ್ದಾರೆ ಕೆ.ವಿ.ರಾಜಲಕ್ಷ್ಮಿ

ಮಾವಿನಕಾಯಿ ಅವಲಕ್ಕಿ

ಬೇಕಾಗುವ ಸಾಮಗ್ರಿ:

ADVERTISEMENT

ಮಧ್ಯಮಗಾತ್ರದ ಅವಲಕ್ಕಿ 2 ಕಪ್, ಹುಳಿ ಮಾವಿನಕಾಯಿಯ ತುರಿ 1/2 ಕಪ್, ತೆಂಗಿನತುರಿ 1/2 ಕಪ್, ಸಾಸಿವೆ 1 ಚಮಚ, ಹಸಿ ಮೆಣಸಿನಕಾಯಿ 6, ಚಿಟಿಕೆ ಇಂಗು, ಅರಿಶಿನಪುಡಿ, ಶೇಂಗಾ 2 ಚಮಚ, ಕರಿಬೇವು 8-10 ಎಲೆ, ರುಚಿಗೆ ತಕ್ಕಷ್ಟು ಉಪ್ಪು,

ಮಾಡುವ ವಿಧಾನ:

ಅವಲಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಸೋಸಿ ಬದಿಗಿಟ್ಟುಕೊಳ್ಳಿ. ಮಾವಿನಕಾಯಿಯ ತುರಿ, ಸಾಸಿವೆ, ಹಸಿ ಮೆಣಸಿನಕಾಯಿ, ಇಂಗು, ಅರಿಶಿನಪುಡಿ, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ, ಸಿಡಿಸಿ ಕರಿಬೇವು, ಶೇಂಗಾ ಹುರಿದು, ರುಬ್ಬಿದ ಮಿಶ್ರಣವನ್ನು ಹಸಿವಾಸನೆ ಹೋಗುವವರೆಗೆ ಬಾಡಿಸಿ ಉರಿ ಆರಿಸಿ, ನಂತರ ಅವಲಕ್ಕಿಯೊಂದಿಗೆ ಬೆರೆಸಿ ಮಿಶ್ರಣ ಮಾಡಿ.

****

ಮಾವಿನಕಾಯಿ ಶ್ಯಾವಿಗೆ

ಮಾವಿನಕಾಯಿ ಶ್ಯಾವಿಗೆ

ಬೇಕಾಗುವ ಸಾಮಗ್ರಿ:

ಹುರಿದ ಶ್ಯಾವಿಗೆ 1 ಕಪ್, ಸಣ್ಣಗೆ ಹೆಚ್ಚಿದ ತೋತಾಪುರಿ, ಮಾವಿನಕಾಯಿ ಒಂದು ಹೋಳು, ಹಸಿ ಮೆಣಸಿನಕಾಯಿ 6, ಕೊತ್ತಂಬರಿ ಸೊಪ್ಪು 2 ಎಸಳು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕಡಲೆಬೇಳೆ ಒಗ್ಗರಿಸಿ ಹಸಿಮೆಣಸಿನಕಾಯಿ, ಮಾವಿನಕಾಯಿ ಹಾಕಿ ಎರಡು ನಿಮಿಷ ಹುರಿದು ಶ್ಯಾವಿಗೆ ಸೇರಿಸಿ ಒಂದು ಸುತ್ತು ಕೈಯಾಡಿಸಿ ಎರಡೂವರೆ ಕಪ್ ನೀರು, ಉಪ್ಪು ಸೇರಿಸಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ, ಬೇಯಲು ಬಿಡಿ. ಶ್ಯಾವಿಗೆ ಸಂಪೂರ್ಣವಾಗಿ ಬೆಂದ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಮಿಶ್ರಣ ಮಾಡಿ, ಉರಿ ಆರಿಸಿ.

****

ಮಾವಿನಕಾಯಿ ಮೊಸರನ್ನ

ಮಾವಿನಕಾಯಿ ಮೊಸರನ್ನ

ಬೇಕಾಗುವ ಸಾಮಗ್ರಿಗಳು: 

ಅನ್ನ 1 ಕಪ್, ಸಣ್ಣಗೆ ಹೆಚ್ಚಿದ ತೋತಾಪುರಿ ಮಾವಿನಕಾಯಿ ಅರ್ಧ ಹೋಳು, ಮೊಸರು 1 ಕಪ್, ಹಾಲು 1/4 ಕಪ್, ಗೋಡಂಬಿ 6-8, ಸಕ್ಕರೆ 1 ಚಮಚ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಅನ್ನವನ್ನು ಹರವಿ ಮೊಸರು, ಹಾಲು, ಸಕ್ಕರೆ ಬೆರೆಸಿ ಕಲೆಸಿಕೊಳ್ಳಿ. ನಂತರ ಒಗ್ಗರಣೆಗೆ ಸಾಸಿವೆ, ಇಂಗು, ಉದ್ದಿನಬೇಳೆ, ಗೋಡಂಬಿ, ಹುರಿದು ಮಾವಿನಕಾಯಿ, ಉಪ್ಪು ಸೇರಿಸಿ ಒಂದು ಸುತ್ತು ಬಾಡಿಸಿ ಕಲೆಸಿದ ಅನ್ನಕ್ಕೆ ಸೇರಿಸಿ ಹಾಕಿ
ಮಿಶ್ರಣ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.