
ಮಶ್ರೂಮ್‌ನಿಂದ ಅನೇಕ ಖಾದ್ಯಗಳನ್ನು ತಯಾರಿಸುತ್ತಾರೆ. ಇದೀಗ, ಸುಲಭವಾಗಿ ತಯಾರಿಸಬಹುದಾದ ಮಶ್ರೂಮ್ ಫ್ರೈ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ.
ಮಶ್ರೂಮ್ ಫ್ರೈ ಮಾಡಲು ಬೇಕಾಗುವ ಸಾಮಗ್ರಿಗಳು
ಮಶ್ರೂಮ್– 1ರಿಂದ 2ಕಪ್
ಖಾರದ ಪುಡಿ–2ರಿಂದ3 ಚಮಚ
ಅರಿಶಿಣ ಪುಡಿ– ಅರ್ಧ ಚಮಚ
ಧನಿಯಾ ಪುಡಿ– ಅರ್ಧ ಚಮಚ
ಕತ್ತರಿಸಿಕೊಂಡ ಹಸಿರು ಮೆಣಸಿನಕಾಯಿ–4ರಿಂದ5
ಕತ್ತರಿಸಿಕೊಂಡ ಈರುಳ್ಳಿ–1ರಿಂದ2
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ನಿಂಬೆ ರಸ– ಅರ್ಧ ಚಮಚ
ಸಾಸಿವೆ– ಅರ್ಧ ಚಮಚ
ಬೆಳ್ಳುಳ್ಳಿ ಎಸಳು–1ರಿಂದ2
ಟೊಮೊಟೊ –1ರಿಂದ2
ಶುಂಠಿ ಬೆಳ್ಳುಳ್ಳಿ ಪೇಸ್ಟ್– 1ಚಮಚ
ಕೊತ್ತಂಬರಿ ಸೊಪ್ಪು – ಅರ್ಧ ಕಪ್
ಅಡುಗೆ ಎಣ್ಣೆ
ಮಾಡುವ ವಿಧಾನ:ಉಪ್ಪು ಸೇರಿಸಿದ ಉಗುರು ಬೆಚ್ಚಗಿನ ನೀರಿನಲ್ಲಿ ಮೊದಲು ಶುಚಿಮಾಡಿಕೊಂಡ ಅಣಬೆಯನ್ನು ತೊಳೆದುಕೊಳ್ಳಿ.
ಬಳಿಕ ಒಂದು ಬಾಣಲೆಗೆ 4ರಿಂದ 5 ಚಮಚ ಅಡುಗೆ ಎಣ್ಣೆ ಹಾಕಿ. ಬಳಿಕ ಅದಕ್ಕೆ ಜಜ್ಜಿಕೊಂಡ ಬೆಳ್ಳುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿಕೊಂಡ ಈರುಳ್ಳಿ, ಟೊಮೆಟೊ, ಹಸಿರುಮೆಣಸಿನಕಾಯಿ, ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ ತೊಳೆದುಕೊಂಡ ಅಣಬೆಯನ್ನು ಹಾಕಿಕೊಳ್ಳಿ. ಅದಕ್ಕೆ ಅರಿಶಿಣ ಪುಡಿ, ಖಾರದ ಪುಡಿ, ಧನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ಹುಳ್ಳಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.