ಹಳ್ಳಿ ಭಾಗದಲ್ಲಿ ಮಾರುಕಟ್ಟೆಯಿಂದ ತರಕಾರಿ ತಂದು ಸಾಂಬಾರ್ ಮಾಡುವುದು ತುಂಬಾ ವಿರಳ. ವಿಶೇಷವಾಗಿ ಮಲೆನಾಡು ಭಾಗದ ಜನರು ಮನೆಯಲ್ಲೇ ತರಕಾರಿ, ಸೊಪ್ಪು ಬೆಳೆದು ಅಡುಗೆಗೆ ಬಳಸುತ್ತಾರೆ. ಇನ್ನೂ, ಮಲೆನಾಡು ಭಾಗದಲ್ಲಿ ಸುಲಭವಾಗಿ ಸಿಗುವ ಗಣಿಕೆ ಸೊಪ್ಪಿನ ಪಲ್ಯ ಮಾಡುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಗಣಿಕೆ ಸೊಪ್ಪಿನ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು
ಕತ್ತರಿಸಿ ಶುಚಿಮಾಡಕೊಂಡ ಗಣಿಕೆ ಸೊಪ್ಪು
ಹೆಚ್ಚಿಕೊಂಡ ಈರುಳ್ಳಿ–1
ಹೆಚ್ಚಿಕೊಂಡ ಟೊಮೆಟೊ–1
ಜೀರಿಗೆ ಮೆಣಸು– 10ರಿಂದ15 ಕಾಳು ಅಥವಾ
ಹಸಿರು ಮೆಣಸಿನಕಾಯಿ– 5/6
ಜಜ್ಜಿಕೊಂಡ ಬೆಳ್ಳುಳ್ಳಿ 5–6 ಎಸಳು
ಅರಿಶಿಣ ಪುಡಿ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಹೆಚ್ಚಿಕೊಂಡ ಗಣಿಕೆಸೊಪ್ಪು, ಹೆಚ್ಚಿಕೊಂಡ ಈರುಳ್ಳಿ, ಜಜ್ಜಿಕೊಂಡ ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಅಥವಾ ಜಜ್ಜಿಕೊಂಡ ಜೀರಿಗೆ ಮೆಣಸಿನಕಾಯಿ, ಅರಿಶಿಣ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 1–2 ಲೋಟ ನೀರು ಹಾಕಿ ಬೇಯಿಸಿಕೊಳ್ಳಿ. ಹಾಕಿದ ನೀರು ಸಂಪೂರ್ಣವಾಗಿ ಇಂಗಿದ ಬಳಿಕ ಇಳಿಸಿಕೊಳ್ಳಿ.
ರೊಟ್ಟಿ ಅಥವಾ ಅನ್ನದ ಸವಿಯಲು ಸಿದ್ಧ ಗಣಿಕೆ ಸೊಪ್ಪಿನ ಪಲ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.