ADVERTISEMENT

ಚಳಿಗಾಲದಲ್ಲಿ ಮಕ್ಕಳಿಗೆ ರುಚಿಕರವಾದ ಪರಾಠ ಹೀಗೆ ತಯಾರಿಸಿ

ವೀಣಾಶ್ರೀ
Published 2 ಜನವರಿ 2026, 10:31 IST
Last Updated 2 ಜನವರಿ 2026, 10:31 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ಚಳಿಗಾಲದಲ್ಲಿ ಬಿಸಿ ಪರಾಠ ಮಕ್ಕಳಿಗೆ ಹೆಚ್ಚು ಇಷ್ಟದ ಪದಾರ್ಥವಾಗಿದೆ. ಆಲೂ, ಪನೀರ್, ಗೋಬಿ, ಮೂಲಿ ಪರಾಠ ಸೇರಿದಂತೆ ಸಸ್ಯಾಹಾರಿ ಹಾಗೂ ಮಾಂಸಹಾರಿ ಪರಾಠಗಳನ್ನು ಮಾಡಬಹುದು. ಇವುಗಳನ್ನು ತಯಾರಿಸುವುದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.

ಆಲೂ ಪರಾಠ

ADVERTISEMENT

ಆಲೂ ಪರಾಠ ಮಾಡಲು ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು, ಉಪ್ಪು, ನೀರು, ಎಣ್ಣೆ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಗರಂ ಮಸಾಲಾ,

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಉಪ್ಪು, ಮತ್ತು ನೀರು ಸೇರಿಸಿ ಮೃದುವಾದ ಹಿಟ್ಟನ್ನು ಕಲಸಿ 15ರಿಂದ 30 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಒಂದು ಕುಕ್ಕರ್‌ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ ಸ್ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಜೀರಿಗೆ ಪುಡಿ, ಗರಂ ಮಸಾಲಾ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಬಳಿಕ ಕಲಿಸಿಟ್ಟ ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿ, ಸ್ವಲ್ಪ ದಪ್ಪವಾಗಿ ಲಟ್ಟಿಸಿ ಮಧ್ಯದಲ್ಲಿ ಆಲೂಗಡ್ಡೆಯ ಮಿಶ್ರಣ ಇಟ್ಟು, ಹಿಟ್ಟನ್ನು ಮುಚ್ಚಿ, ಉಂಡೆ ಮಾಡಿ ಬೆರಳುಗಳ ಸಾಹಯದಿಂದ ನಿಧಾನವಾಗಿ ಒತ್ತಿ ಚಪಾತಿ ರೀತಿ ಮಾಡಿ. ಇದಾದ ನಂತರ ಬಿಸಿ ತವಾದ ಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ ನಿಧಾನವಾಗಿ ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿದರೆ ಆಲೂ ಪರಾಠ ಸವಿಯಲು ಸಿದ್ಧ.

ಪನೀರ್ ಪರಾಠ

ಪನೀರ್ ಪರಾಠ ಮಾಡುಲು ಬೇಕಾಗಿರುವ ಸಾಮಾಗ್ರಿಗಳು:

ಗೋಧಿ ಹಿಟ್ಟು, ಉಪ್ಪು, ಎಣ್ಣೆ, ಪನೀರ್‌, ಕೊತ್ತಂಬರಿ ಸೊಪ್ಪು, ಪುದೀನ, ಹಸಿ ಮೆಣಸಿನಕಾಯಿ, ಗರಂ ಮಸಾಲಾ.

ಮಾಡುವ ವಿಧಾನ:

ಮೊದಲು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ನೀರು ಸೇರಿಸಿ ಮೃದುವಾದ ಕಲಸಿ 20 ನಿಮಿಷಗಳ ಕಾಲ ಬಿಡಿ. ಬಳಿಕ ಪನೀರ್‌ಗೆ ಕೊತ್ತಂಬರಿ ಸೊಪ್ಪು, ಪುದೀನ, ಹಸಿ ಮೆಣಸಿನಕಾಯಿ, ಗರಂ ಮಸಾಲಾ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕಲಸಿ ಇಟ್ಟುಕೊಂಡ ಹಿಟ್ಟಿನ್ನು ಉಂಡೆ ಮಾಡಿ, ಅದನ್ನು ‌ಪೂರಿಯಂತೆ ಸುತ್ತಿ, ಮಧ್ಯದಲ್ಲಿ ಪನೀರ್ ಸ್ಟಫಿಂಗ್ ಇಟ್ಟು, ಅಂಚುಗಳನ್ನು ಮಧ್ಯಕ್ಕೆ ತಂದು ಮುಚ್ಚಿ. ಹಿಟ್ಟಿನಲ್ಲಿ ಅದ್ದಿಕೊಂಡು ದಪ್ಪವಾಗಿ ಸುತ್ತಿ, ಬಿಸಿಯಾದ ತವಾ ಮೇಲೆ ಹಾಕಿ. ಎರಡೂ ಕಡೆ ತುಪ್ಪ ಅಥವಾ ಎಣ್ಣೆ ಸವರಿ ಗರಿಗರಿಯಾಗುವವರೆಗೆ ಬೇಯಿಸಿ. ಈಗ ಪನೀರ್ ಪರಾಠ ಸವಿಯಲು ಸಿದ್ಧ.

ಗೋಬಿ ಪರಾಠ

ಗೋಬಿ ಪರಾಠ ಮಾಡಲು ಬೇಕಾಗಿರುವ ಸಾಮಾಗ್ರಿಗಳು:

ಗೋಧಿ ಹಿಟ್ಟು, ಉಪ್ಪು, ಎಣ್ಣೆ ಅಥವಾ ತುಪ್ಪ, ನೀರು, ಹೂಕೋಸು, ಶುಂಠಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ, ಅರಿಶಿನ ಪುಡಿ, ಉಪ್ಪು.

ಮಾಡುವ ವಿಧಾನ:

ಗೋಧಿ ಹಿಟ್ಟಿಗೆ ಉಪ್ಪು ಮತ್ತು ಸ್ವಲ್ಪ ಎಣ್ಣೆ ಸೇರಿಸಿ, ನೀರು ಹಾಕಿ ಮೃದುವಾದ ಹಿಟ್ಟನ್ನು ಕಲೆಸಿ 10ರಿಂದ 15 ನಿಮಿಷ ನಿಮಿಷಗಳ ಕಾಲ ಬಿಡಿ. ಬಳಿಕ ಹೂಕೋಸನ್ನು ಮೊದಲು ಚೆನ್ನಾಗಿ ತೊಳೆದು. ಬಳಿ ತುರಿದು ಶುಂಠಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಮಸಾಲೆಗಳನ್ನು ಸೇರಿಸಿ ಮಿಶ್ರಣ ಮಾಡಿ. ಹಿಟ್ಟಿನ ಸಣ್ಣ ಉಂಡೆ ತೆಗೆದುಕೊಂಡು ಸಣ್ಣಗೆ ಸುತ್ತಿ, ಮಧ್ಯದಲ್ಲಿ ಸ್ಟಫಿಂಗ್ ಇಟ್ಟು, ಅಂಚುಗಳನ್ನು ಮುಚ್ಚಿ ಗಟ್ಟಿಯಾಗಿ ಒತ್ತಿ. ಹಿಟ್ಟಿನಲ್ಲಿ ಅದ್ದಿ ತೆಳುವಾಗಿ ಸುತ್ತಿ, ಬಿಸಿಯಾದ ತವಾ ಮೇಲೆ ಹಾಕಿ, ಎರಡೂ ಬದಿಗಳಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ. ಈಗ ಬಿಸಿ ಬಿಸಿಯಾದ ಗೋಬಿ ಪರಾಠವನ್ನು ಮೊಸರು, ಚಟ್ನಿ ಅಥವಾ ರೈತಾದೊಂದಿಗೆ ತಿನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.