ADVERTISEMENT

ರೆಸಿಪಿ| ಸಂಜೆ ಕಾಫಿಗೆ ಗರಿಗರಿ ಈರುಳ್ಳಿ ಬಜ್ಜಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2025, 12:18 IST
Last Updated 7 ಅಕ್ಟೋಬರ್ 2025, 12:18 IST
   

ಸಂಜೆ ಕಾಫಿಗೆ ಬಹು ಬೇಗನೆ ಮಾಡಬಹುದಾದ ಸ್ಯಾಕ್ಸ್ ಅಂದರೆ ಅದು ಈರುಳ್ಳಿ ಬಜ್ಜಿ. ಮಳೆಗಾಲ ಅಥವಾ ಚಳಿಗಾಲದಲ್ಲಿ ಈ ತಿನಿಸು ಅನೇಕರ ನೆಚ್ಚಿನ ಖಾದ್ಯವೂ ಹೌದು. ಕಾಫಿ ಜತೆ ಇದನ್ನು ತಿನ್ನುತ್ತಿದ್ದರೆ ಅದರ ಮಜ ಹೇಳ ತೀರದು. ಹಾಗಿದ್ದರೆ ಹೋಟೆಲ್ ಶೈಲಿಯಲ್ಲಿ ಮನೆಯಲ್ಲೇ ಈ ಈರುಳ್ಳಿ ಬಜ್ಜಿ ತಯಾರಿಸುವುದು ಹೇಗೆ ಎಂಬುವುದನ್ನು ನೋಡೋಣ.

ಹೊಟೇಲ್‌ ಶೈಲಿಯಲ್ಲಿ ಈರುಳ್ಳಿ ಬಜ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳು

3 ಈರುಳ್ಳಿ

ADVERTISEMENT

1 ಚಮಚ ಖಾರಪುಡಿ

1/2 ಕಪ್ ಅಕ್ಕಿ ಹಿಟ್ಟು

2 ಕಪ್ ಕಡಲೆ ಹಿಟ್ಟು

ಕೊತ್ತಂಬರಿ ಸೊಪ್ಪು

2 ಹಸಿರು ಮೆಣಸಿನಕಾಯಿ

ರುಚಿಗೆ ತಕ್ಕಷ್ಟು ಉಪ್ಪು

ಅಡುಗೆ ಎಣ್ಣೆ

ಕರಿ ಬೇವು

1 ಚಮಚ ಜೀರಿಗೆ

ಮಾಡುವ ವಿಧಾನ

ಹಂತ 1: 3 ಈರುಳ್ಳಿಯ ಸಿಪ್ಪೆ ತೆಗೆದು ತೊಳೆದು ಉದ್ದವಾಗಿ ಸಣ್ಣ ಆಕಾರದಲ್ಲಿ ಕತ್ತರಿಸಿಕೊಳ್ಳಿ.

ಹಂತ 2 : ಹಸಿರು ಮೆಣಸಿನಕಾಯಿ, ಕರಿ ಬೇವು ಹಾಗೂ ಕೊತ್ತಂಬರಿ ಸೊಪ್ಪನ್ನು ತೊಳೆದು ಹೆಚ್ಚಿಕೊಳ್ಳಿ.

ಹಂತ 3: ಒಂದು ಬಾಣಲೆಯಲ್ಲಿ ಬಜ್ಜಿ ಕರಿಯಲು ಎಣ್ಣೆ ಕಾಯಲು ಇಡಿ.

ಹಂತ 4: ಒಂದು ಪಾತ್ರೆಯಲ್ಲಿ ಹೆಚ್ಚಿಕೊಂಡ ಈರುಳ್ಳಿ, ಹಸಿರು ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು, 2 ಕಪ್ ಕಡ್ಳೆಹಿಟ್ಟು, 1/2 ಕಪ್ ಅಕ್ಕಿ ಹಿಟ್ಟು, 1 ಚಮಚ ಖಾರಪುಡಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಲ್ಲಿ ಮಿಶ್ರಣ ಮಾಡಿಕೊಳ್ಳಿ. ನಂತರ ತುಂಬಾ ತೆಳುವಾಗದೇ ದಪ್ಪವೂ ಆಗದೇ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿಕೊಳ್ಳಿ.

ಹಂತ 5: ಎಣ್ಣೆ ಕಾದ ಬಳಿಕ ಕಲಸಿಟ್ಟ ಹಿಟ್ಟನ್ನು ಸಣ್ಣ ಉಂಡೆ ಗಾತ್ರದಲ್ಲಿ ಎಣ್ಣೆಗೆ ಬಿಡಿ.

ಹಂತ 6: ಕರಿದ ಈರುಳ್ಳಿ ಬಜ್ಜಿಯನ್ನು ಕಾಫಿಯೊಂದಿಗೆ ಸವಿಯಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.