ಆಯುರ್ವೇದವು ಪುರಾತನ ಕಾಲದ ಪದ್ಧತಿಯಾಗಿದೆ. ಕೆಲವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿ ಇರುವ ಅಡುಗೆ ವಸ್ತುಗಳಿಂದ ಔಷಧಿ ತಯಾರಿಸಿ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಅಲರ್ಜಿ ಕೆಮ್ಮು ಎಲ್ಲಾ ವಯಸ್ಕರಲ್ಲಿ ಕಾಡುವ ದೊಡ್ಡ ಸಮಸ್ಯೆ ಆಗಿದೆ.
ಅಲರ್ಜಿ ಕೆಮ್ಮಿಗೆ ಮುಖ್ಯ ಕಾರಣಗಳು
ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ, ಮರುಬಳಕೆ ಅಡುಗೆ ಎಣ್ಣೆಯ ಆಹಾರ ಸೇವನೆಯಿಂದ, ಧೂಮಪಾನ ಮಾಡುವುದರಿಂದ ಹಾಗೂ ಧೂಳು, ಸಾಕುಪ್ರಾಣಿಗಳ ಕೂದಲು ಶ್ವಾಸಕೋಶಕ್ಕೆ ಪ್ರವೇಶಿಸಿದಾಗ ಅಲರ್ಜಿ ಕೆಮ್ಮು ಉಂಟಾಗುತ್ತದೆ ಎಂದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.
ಅಲರ್ಜಿ ಕೆಮ್ಮಿನ ಸಾಮಾನ್ಯ ಲಕ್ಷಣಗಳು
ವಿಪರೀತ ಒಣ ಕೆಮ್ಮು
ಗಂಟಲು ತುರಿಕೆ
ನಿರಂತರ ಸೀನುವಿಕೆ
ಕಿವಿಯ ಹಿಂಭಾಗ ತುರಿಕೆ
ಈ ಸಮಸ್ಯೆಯನ್ನು ನಿಯಂತ್ರಿಸಲು ಇಲ್ಲಿವೆ ಮನೆ ಮದ್ದು
ಅಮೃತ ಬಳ್ಳಿ ಎಲೆಯ ರಸವನ್ನು ಜೇನು ತುಪ್ಪದೊಂದಿಗೆ ದಿನಕ್ಕೆ 2 ಬಾರಿ ಸೇವಿಸುವುದರಿಂದ ಅಲರ್ಜಿ ಕೆಮ್ಮಿನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯವಾಗಿದೆ.
ಜಜ್ಜಿ ಪುಡಿಮಾಡಿಕೊಂಡ ಕಾಳು ಮೆಣಸು, ಶುಂಠಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಅಲರ್ಜಿ ಕೆಮ್ಮಿನಿಂದ ಬಳಲುತ್ತಿದ್ದರೆ ಸಾಧ್ಯವಾದಷ್ಟು ಹಾಲಿನ ಉತ್ಪನ್ನಗಳನ್ನು ಸೇವಿಸಬಾರದೆಂದು ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಸಲಹೆ ನೀಡಿದ್ದಾರೆ.
3. ತುಳಸಿ ಎಲೆ, ಜೀರಿಗೆಯನ್ನು ಬಿಸಿ ನೀರಿನಲ್ಲಿ ಕುದಿಸಿ ಜೇನು ತುಪ್ಪದೊಂದಿಗೆ ಸೇವಿಸುವುದರಿಂದ ಈ ಸಮಸ್ಯೆ ಗುಣವಾಗುತ್ತದೆ ಎಂದು ಆಯುರ್ವೇದ ವೈದ್ಯರು ಮಾಹಿತಿ ನೀಡಿದ್ದಾರೆ.
4. ಅರಿಶಿನ ಪುಡಿ ಹಾಗೂ ನೆಲ್ಲಿಕಾಯಿಯನ್ನು ಜಜ್ಜಿ ಅದನ್ನು ಬಿಸಿ ನೀರಿನಲ್ಲಿ ಕುದಿಸಿ ಜೇನು ತುಪ್ಪದೊಂದಿಗೆ ಸೇವಿಸುವುದರಿಂದ ಅಲರ್ಜಿ ಕೆಮ್ಮಿ ಗುಣಮುಖವಾಗುತ್ತದೆ ಎಂದು ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಸಲಹೆ ನೀಡಿದ್ದಾರೆ.
ಲೇಖಕರು: ಬೆಂಗಳೂರಿನ ಆಯುರ್ವೇದ ವೈದ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.