ADVERTISEMENT

ಜೀರ್ಣಕ್ರಿಯೆ: ಆಯುರ್ವೇದದ ಪ್ರಕಾರ ಕಾಲಕ್ಕೆ ತಕ್ಕಂತೆ ಸೇವಿಸಬೇಕಾದ ಆಹಾರಗಳಿವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:14 IST
Last Updated 18 ನವೆಂಬರ್ 2025, 7:14 IST
<div class="paragraphs"><p>ಚಿತ್ರ; ಗೆಟ್ಟಿ</p></div>
   

ಚಿತ್ರ; ಗೆಟ್ಟಿ

ನಾವು ಸೇವಿಸಿದ ಆಹಾರವನ್ನು ಜಠರ ಜೀರ್ಣಿಸುತ್ತದೆ. ಆಯುರ್ವೇದದ ಪ್ರಕಾರ ಋತುಗಳಿಗೆ ಅನುಗುಣವಾಗಿ ಆಹಾರ ಸೇವಿಸಿದರೆ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿರುತ್ತದೆ. ಹಾಗಿದ್ದರೆ, ಯಾವ ಋತುಗಳಲ್ಲಿ ಯಾವ ಆಹಾರ ಸೇವಿಸಬೇಕು ಎಂಬುದನ್ನು ತಿಳಿಯೋಣ.

ಶಿಶಿರ ಋತು (ಚಳಿಗಾಲದ ಅಂತ್ಯ: ಜನವರಿ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ):

ADVERTISEMENT

ಆಹಾರ ಮತ್ತು ಜೀವನಶೈಲಿ ಶಿಫಾರಸ್ಸು : ತುಪ್ಪ, ಹಾಲು, ನಟ್ಸ್‌ , ಧಾನ್ಯಗಳಂತಹ ಬೆಚ್ಚಗಿನ, ಪೌಷ್ಟಿಕ ಹಾಗೂ ಎಣ್ಣೆಯುಕ್ತ ಆಹಾರಗಳನ್ನು ಸೇವಿಸಿ. ಶುಂಠಿ, ಕರಿಮೆಣಸು, ದಾಲ್ಚಿನ್ನಿ ಹಾಗೂ ಲವಂಗಗಳಂತಹ ಬಿಸಿ ಮಸಾಲೆಗಳನ್ನು ಆಹಾರದಲ್ಲಿ ಬಳಕೆ ಮಾಡಿ.

ತಪ್ಪಿಸಿ: ಶೀತ, ಒಣ ಮತ್ತು ಕಚ್ಚಾ ಆಹಾರ ಸೇವನೆ ತಪ್ಪಿಸಿ.

ವಸಂತ ಋತು (ವಸಂತ: ಮಾರ್ಚ್ ಮಧ್ಯದಿಂದ ಮೇ ಮಧ್ಯದವರೆಗೆ):

ಆಹಾರ ಮತ್ತು ಜೀವನಶೈಲಿ ಶಿಫಾರಸ್ಸು: ಹಸಿರು ತರಕಾರಿ , ಬಾರ್ಲಿ, ಜೇನುತುಪ್ಪ, ಕಹಿ ಮತ್ತು ಖಾರವುಳ್ಳ ಆಹಾರ ಸೇವಿಸಿ.

ತಪ್ಪಿಸಿ: ಕಫ ಹೆಚ್ಚಿಸುವ ಎಣ್ಣೆಯುಕ್ತ ಮತ್ತು ಹಾಲು ಉತ್ಪನ್ನಗಳನ್ನು ಸೇವಿಸಬೇಡಿ.

ಗ್ರಿಷ್ಮ ಋತು (ಬೇಸಿಗೆ: ಮೇ ಮಧ್ಯದಿಂದ ಜುಲೈ ಮಧ್ಯದವರೆಗೆ):

ಆಹಾರ ಮತ್ತು ಜೀವನಶೈಲಿ ಶಿಫಾರಸ್ಸು: ತಾಜಾ ಹಣ್ಣು, ಸೌತೆಕಾಯಿ, ಎಳನೀರು ಮತ್ತು ಮಜ್ಜಿಗೆಯಂತಹ ತಂಪಾಗಿಸುವ ಆಹಾರಗಳನ್ನು ಸೇವಿಸುವುದು ಉತ್ತಮ

ತಪ್ಪಿಸಿ: ಪಿತ್ತ ಉಲ್ಬಣಗೊಳಿಸುವ ಮಸಾಲೆಯುಕ್ತ, ಹುರಿದ ಮತ್ತು ಅತಿಯಾಗಿ ಉಪ್ಪು ಸೇರಿಸಿದ ಆಹಾರ ಸೇವನೆ ತಪ್ಪಿಸುವುದು ಉತ್ತಮ.

ವರ್ಷ ಋತು (ಮಳೆಗಾಲ: ಜುಲೈ ಮಧ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ):

ಆಹಾರ ಮತ್ತು ಜೀವನಶೈಲಿ ಶಿಫಾರಸ್ಸು: ಸೂಪ್, ಗಿಡಮೂಲಿಕೆಯ ಚಹಾಗಳಂತಹ ಬೆಚ್ಚಗಿನ ಆಹಾರ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಿ.

ಶರದ್ ಋತು (ಶರತ್ಕಾಲ: ಸೆಪ್ಟೆಂಬರ್ ಮಧ್ಯದಿಂದ ನವೆಂಬರ್ ಮಧ್ಯದವರೆಗೆ):

ಆಹಾರ ಮತ್ತು ಜೀವನಶೈಲಿ ಶಿಫಾರಸ್ಸು: ದಾಳಿಂಬೆ, ಸೊಪ್ಪು ಮತ್ತು ತುಪ್ಪ ಸೇವಿಸುವುದು ಉತ್ತಮ.

ತಪ್ಪಿಸಿ: ಮಸಾಲೆಯುಕ್ತ ಹಾಗೂ ಹುಳಿಯುಕ್ತ ಆಹಾರ ಸೇವನೆ ತಪ್ಪಿಸಿ.

ಹೇಮಂತ ಋತು (ಚಳಿಗಾಲದ ಆರಂಭ: ನವೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ):

ಆಹಾರ ಮತ್ತು ಜೀವನಶೈಲಿ ಶಿಫಾರಸ್ಸು: ನಟ್ಸ್‌, ಹಾಲಿನ ಉತ್ಪನ್ನ, ಮಾಂಸ ಮತ್ತು ಧಾನ್ಯಗಳಂತಹ ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ಅರಿಶಿನ, ದಾಲ್ಚಿನ್ನಿ ಮತ್ತು ಜಾಕಾಯಿಯಂತಹ ಬೆಚ್ಚಗಿನ ಮಸಾಲೆಗಳನ್ನು ಬಳಸಿ. ಚಯಾಪಚಯ ಕ್ರಿಯೆಗೆ ಸಹಕಾರಿಯಾಗುವ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಿ.

ತಪ್ಪಿಸಿ: ಎಣ್ಣೆಯಲ್ಲಿ ಹುರಿದ ಪಾದರ್ಥ, ಅತಿಯಾಗಿ ತಣ್ಣಗಿರುವ ಆಹಾರ ಹಾಗೂ ಮೊಸರನ್ನು ಸೇವಿಸಬೇಡಿ.

(ಡಾ. ಶಶಿಧರ ಗೋಪಾಲಕೃಷ್ಣ, ಮೆಡಿಕಲ್‌ ಸೂಪರ್ಡೆಂಟ್‌, ಅಪೋಲೊ ಆಯುರ್ವೇದ ಆಸ್ಪತ್ರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.