ADVERTISEMENT

ಮಕ್ಕಳಲ್ಲಿ ರಕ್ತಹೀನತೆ: ಪರಿಹಾರ ಕ್ರಮಗಳಿವು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 12:45 IST
Last Updated 15 ಡಿಸೆಂಬರ್ 2025, 12:45 IST
<div class="paragraphs"><p>ಚಿತ್ರ:ಗೆಟ್ಟಿ</p></div>
   

ಚಿತ್ರ:ಗೆಟ್ಟಿ

ರಕ್ತಹೀನತೆ ಅಥವಾ ಅನೀಮಿಯಾ ಎನ್ನುವುದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುವ ಸ್ಥಿತಿಯಾಗಿದೆ. ಹಿಮೋಗ್ಲೋಬಿನ್ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಸಾಗಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಮಕ್ಕಳಲ್ಲಿ ರಕ್ತಹೀನತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಮಕ್ಕಳ ಬೌದ್ಧಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಮಕ್ಕಳಲ್ಲಿ ರಕ್ತಹೀನತೆಗೆ ಮುಖ್ಯ ಕಾರಣಗಳು: 

ADVERTISEMENT
  • ಪೋಷಕಾಂಶಗಳ ಕೊರತೆ: ಮಕ್ಕಳಲ್ಲಿ ರಕ್ತಹೀನತೆಗೆ ಪ್ರಮುಖ ಕಾರಣ ಕಬ್ಬಿಣಾಂಶದ ಕೊರತೆಯಾಗಿದೆ. ಆಹಾರದಲ್ಲಿ ಸಾಕಷ್ಟು ಕಬ್ಬಿಣ, ವಿಟಮಿನ್ ಬಿ12, ಫೋಲಿಕ್ ಆಮ್ಲ ಮತ್ತು ವಿಟಮಿನ್ ಸಿ ಸೇವನೆ ಇಲ್ಲದಿದ್ದಾಗ ರಕ್ತಹೀನತೆ ಉಂಟಾಗುತ್ತದೆ. ವಿಶೇಷವಾಗಿ ಸಸ್ಯಹಾರ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ.

  • ಕರುಳಿನ ಸೋಂಕು: ಹುಕ್‌ವರ್ಮ್ ಮತ್ತು ಇತರ ಕರುಳಿನ ಹುಳುಗಳು ರಕ್ತವನ್ನು ಹೀರುತ್ತವೆ. ಸ್ವಚ್ಛತೆ ಇಲ್ಲದ ಪ್ರದೇಶಗಳಲ್ಲಿ ಮಕ್ಕಳಿಗೆ ಈ ಸೋಂಕುಗಳು ಸುಲಭವಾಗಿ ಹರಡುತ್ತದೆ.

  • ದೀರ್ಘಕಾಲೀನ ರೋಗಗಳು: ಮಲೇರಿಯಾ, ಡೆಂಗ್ಯೂ ಮತ್ತು ಇತರ ಸೋಂಕುಗಳು ರಕ್ತಹೀನತೆಗೆ ಕಾರಣವಾಗಬಹುದು. ಮೂತ್ರಪಿಂಡ ರೋಗ ಮತ್ತು ಕ್ಯಾನ್ಸರ್ ಕೂಡ ರಕ್ತಹೀನತೆಗೆ ಕಾರಣವಾಗುತ್ತದೆ. 

  • ಆನುವಂಶಿಕ ಕಾರಣಗಳು: ಥಲಸ್ಸೇಮಿಯಾ ಮತ್ತು  ಸಿಕಲ್‌–ಸೆಲ್‌, ಅನೀಮಿಯಾದ ರಕ್ತ ರೋಗಗಳಾಗಿವೆ. ಇವು ವಂಶಪಾರಂಪರ್ಯವಾಗಿ ಮಕ್ಕಳಿಗೆ ಹಸ್ತಾಂತರವಾಗುತ್ತವೆ.

ಅನೀಮಿಯಾದ ಲಕ್ಷಣಗಳು: 

  • ರಕ್ತಹೀನತೆಯಿರುವ ಮಕ್ಕಳು ಹೆಚ್ಚು ದಣಿಯುತ್ತಾರೆ.

  • ಹಸಿವು ಕಡಿಮೆಯಾಗುತ್ತದೆ.

  • ತೂಕ ಹೆಚ್ಚುವುದು ನಿಲ್ಲುತ್ತದೆ.

  • ಏಕಾಗ್ರತರ ‌ಕುಂಠಿತವಾಗುತ್ತದೆ.

ಪರಿಹಾರ ಕ್ರಮಗಳು:

ಮಕ್ಕಳಿಗೆ ಕಬ್ಬಿಣಾಂಶ ಸಮೃದ್ಧವಾಗಿರುವ ಆಹಾರ ನೀಡುವುದು ಅತ್ಯಂತ ಮುಖ್ಯ. ಹಸಿರು ಎಲೆಗಳ ತರಕಾರಿ, ದಾಳಿಂಬೆ, ಖರ್ಜೂರ, ಅಂಜೂರ, ಮೊಸರು, ರಾಗಿ, ಸಾಸಿವೆ ಸೊಪ್ಪು ಹಾಗೂ ಪಾಲಕ್ ಮುಂತಾದವುಗಳನ್ನು ಆಹಾರದಲ್ಲಿ ಸೇರಿಸಬೇಕು.

ಅನೀಮಿಯಾಕ್ಕೆ ಚಿಕಿತ್ಸೆ: 

  • ವೈದ್ಯರ ಸಲಹೆಯ ಮೇರೆಗೆ ಕಬ್ಬಿಣಾಂಶವುಳ್ಳ ಮಾತ್ರೆಗಳು ಅಥವಾ ಸಿರಪ್ ಸೇವಿಸಬೇಕು. ವಿಟಮಿನ್ ಸಿ ಸೇವನೆ ಕಬ್ಬಿಣದ ಹೀರಿಕೆ ಹೆಚ್ಚಿಸುತ್ತದೆ. ಗಂಭೀರ ಪ್ರಕರಣಗಳಲ್ಲಿ ರಕ್ತ ವರ್ಗಾವಣೆ ಅಗತ್ಯವಾಗಬಹುದು.

  • ಮಕ್ಕಳಲ್ಲಿ ನಿಯಮಿತವಾಗಿ ಆರೋಗ್ಯದ ಪರೀಕ್ಷೆ ಮಾಡಿಸಬೇಕು. ಹಿಮೋಗ್ಲೋಬಿನ್ ಮಟ್ಟವನ್ನು ಪರೀಕ್ಷಿಸಿ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ.

  • ರಕ್ತಹೀನತೆಯು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ಮಾಡಬಹುದಾದ ಸ್ಥಿತಿಯಾಗಿದೆ. ಸಮತೋಲಿತ ಪೌಷ್ಟಿಕಾಂಶದ ಆಹಾರ, ಸ್ವಚ್ಛತೆ ಮತ್ತು ನಿಯಮಿತ ಆರೋಗ್ಯದ ಪರೀಕ್ಷೆಗಳ ಮೂಲಕ ಮಕ್ಕಳನ್ನು ರಕ್ತಹೀನತೆಯಿಂದ ರಕ್ಷಿಸಬಹುದಾಗಿದೆ. 

ಲೇಖಕರು: ಡಾ. ಪರಿಮಳ ವಿ. ತಿರುಮಲೆಶ್, ಹಿರಿಯ ಸಲಹೆಗಾರರು, ನವಜಾತ ಶಿಶು ಚಿಕಿತ್ಸಾಶಾಸ್ತ್ರ ಮತ್ತು ಮಕ್ಕಳ ವೈದ್ಯಕೀಯ, ಅಸ್ಟರ್ CMI ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.