ADVERTISEMENT

ಪ್ರತಿನಿತ್ಯವೂ ಆತ್ಮವಿಶ್ವಾಸದಿಂದಿರಲು ಇವಿಷ್ಟು ಅಗತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2026, 1:06 IST
Last Updated 14 ಜನವರಿ 2026, 1:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನಮ್ಮನ್ನು ನಾವು ಕಾಳಜಿ ಮಾಡದೆ ಅಥವಾ ಪ್ರೀತಿಸದ ಹೊರತು ಪ್ರಪಂಚಕ್ಕೆ ತೆರೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೊದಲು ನಮ್ಮನ್ನು ಆರೈಕೆ ಮಾಡಿಕೊಳ್ಳುವುದು, ನಮ್ಮ ಬಗ್ಗೆ ಆಲೋಚಿಸುವುದು ಮುಖ್ಯವಾಗಿರುತ್ತದೆ.

ಆಹಾರ, ದೈಹಿಕ ಚಟುವಟಿಕೆ, ಸೌಂದರ್ಯದ ಕಾಳಜಿ, ಸಂತೈಸುವಿಕೆ ಇತ್ಯಾದಿ. ಇದರಿಂದ ಮಾನಸಿಕವಾಗಿಯೂ ಸದೃಢವಾಗಬಹುದು. ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಳ್ಳಬಹುದು. ಹಾಗಾದರೆ ನಮ್ಮನ್ನು ರೂಪಿಸಿಕೊಳ್ಳಲು ಯಾವೆಲ್ಲಾ ರೀತಿಯಲ್ಲಿ ಕ್ರಮ ಕೈಗೊಳ್ಳಬಹುದು ಎನ್ನುವ ಮಾಹಿತಿ ಇಲ್ಲಿದೆ.

ADVERTISEMENT

ಯೋಜನೆಗಳನ್ನು ರೂಪಿಸುವುದು

ದಿನನಿತ್ಯದ ಕೆಲಸಗಳ ಬಗ್ಗೆ ಮುಂಚಿತವಾಗಿಯೇ ಯೋಜನೆ ರೂಪಿಸಿಕೊಳ್ಳುವುದರಿಂದ ಶೇ 50ರಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ನಮ್ಮ ಗುರಿಯನ್ನು ಮುಟ್ಟಲು ಹೆಚ್ಚು ಗಮನ ನೀಡುವಂತೆ ಮಾಡುತ್ತದೆ. ಜತೆಗೆ ಮನಸ್ಸಿನ ಕೇಂದ್ರಿಕರಣಕ್ಕೂ ಸಹಕಾರಿಯಾಗಿದೆ. 

ನಿಮ್ಮ ಭಾವನೆಗಳನ್ನು ಪ್ರೀತಿಸಿ

ಪ್ರತಿದಿನ ಕನಿಷ್ಠ 10 ರಿಂದ 15 ನಿಮಿಷ ಕೋಪ, ದುಃಖ, ಸಂತೋಷ ಸೇರಿದಂತೆ ಇತರೆ ಭಾವನೆಗಳನ್ನು ವ್ಯಕ್ತಪಡಿಸಿ. ಮಾಡಿದ ತಪ್ಪನ್ನು ಒಪ್ಫಿಕೊಳ್ಳುವುದರಿಂದ ಆರಂಭಿಸಿ. ಭಾವನೆಗಳ ಮೂಲಕ ನಮ್ಮ ನೋವುಗಳನ್ನು ಹೊರ ಹಾಕಿದರೆ, ಹೊಸ ಭರವಸೆ ಮೂಡಬಲ್ಲದು.  

ವಾರದಲ್ಲಿ ಒಂದು ದಿನ ಮೊಬೈಲ್‌ನಿಂದ ದೂರವಿರಿ

ಸಾಮಾನ್ಯವಾಗಿ ಮೊಬೈಲ್‌ ಬಳಕೆ ಇಂದಿಗೆ ಅನಿವಾರ್ಯ ಎನ್ನುವಂತಾಗಿದೆ. ಅತಿಯಾದ ಮೊಬೈಲ್‌ ಬಳಕೆ ಆತಂಕದ ಭಾವನೆ ಮೂಡಲೂ ಕಾರಣವಾಗಬಹುದು. ಹೀಗಾಗಿ ವಾರಕ್ಕೆ ಒಂದು ದಿನ ಮೊಬೈಲ್‌ ಬಳಕೆಯಿಂದ ದೂರವಿರುವುದು ಉತ್ತಮ. ಆ ದಿನ ಹೊರಗಡೆ ಸುತ್ತಾಡುವುದು. ಮೈದಾನದಲ್ಲಿ ಆಟವಾಡುವುದು, ಪುಸ್ತಕಗಳನ್ನು ಓದುವುದು, ಕುಟುಂಬದೊಂದಿಗೆ‌ ಸಮಯವನ್ನು ಕಳೆಯುವುದು ಅಥವಾ ಸ್ನೇಹಿತರೊಂದಿಗೆ ಕಾಲ ಕಳೆಯಬಹುದು.

ಬೆಳಿಗ್ಗೆ ಬೇಗ ಏಳುವುದು

ಪ್ರತಿ ದಿನದ ಆರಂಭ ಇಡೀ ದಿನ ಮಾಡುವ ಕೆಲಸ ಕಾರ್ಯಗಳು, ದಿನದ ದಿನಚರಿಯನ್ನು ಆಧರಿಸುತ್ತದೆ ಎಂಬ ಮಾತಿದೆ. ಬೇಗ ಏಳುವುದರಿಂದ ಹೆಚ್ಚು ಸಮಯ ಲಭ್ಯವಾಗುತ್ತದೆ. ಇಡೀ ದಿನ ಚೈತನ್ಯದಿಂದ ಕೂಡಿರಬಹುದು. ಬೆಳಿಗ್ಗೆ ಏಳುವ ಹಾಗೂ ಮಲಗುವ ಸಮಯವನ್ನು ನಿಗದಿಪಡಿಸುವುದು ಉತ್ತಮ.

ಹಳೆಯ ಖುಷಿಯ ನೆನಪುಗಳನ್ನು ನೆನೆಯಿರಿ

ನಿಮ್ಮದೇ ಹಳೆಯ ಫೋಟೊಗಳು ಅಥವಾ ಇತರೆ ನೆನಪಿನ ವಸ್ತುಗಳನ್ನು ನೋಡಿ. ಇದರಿಂದ ನಿಮ್ಮ ಮನಸ್ಸು ಒತ್ತಡ ಮುಕ್ತವಾಗುತ್ತದೆ. ಅಜ್ಜಿಯ ಕಥೆಗಳು, ಬಾಲ್ಯದ ದಿನಗಳನ್ನು ಮೇಲುಕು ಹಾಕಿ. ಮನೆಯಲ್ಲಿ ಮಕ್ಕಳೊಂದಿಗೆ ಹಾಗೂ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಿರಿ. ಇದು ನಿಮ್ಮ ಒಂಟಿತನದ ಭಾವನೆಯನ್ನು ಕಡಿಮೆ ಮಾಡಿ ಮನಸ್ಸಿಗೆ ನಿರಾಳತೆ ನೀಡುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.