ADVERTISEMENT

Health Tips: ಕಾಡುವ ಉಗುರು ಸುತ್ತಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆಮದ್ದುಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2025, 13:10 IST
Last Updated 13 ಡಿಸೆಂಬರ್ 2025, 13:10 IST
   

ಹೊಲ– ಗದ್ದೆ, ಕಟ್ಟಡ, ಧೂಳಿನಲ್ಲಿ ಕೆಲಸ ಮಾಡುವವರ ಬೆರಳುಗಳು ಸ್ವಚ್ಛವಾಗಿಲ್ಲದಿದ್ದರೆ ಹಾಗೂ ಬೆರಳಿಗೆ ಏನಾದರೂ ಗಾಯ ಮಾಡಿಕೊಂಡರೆ ಅದು ಸೋಂಕಿಗೆ ತಿರುಗಿ ಉಗುರು ಸುತ್ತಿಗೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕ್ರಮಗಳ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

ಉಗುರು ಸುತ್ತಿಗೆ ಕಾರಣಗಳು

  • ನಿಯಮಿತ್ತವಾಗಿ ಉಗುರು ಕತ್ತರಿಸದೆ ಇರುವುದು

    ADVERTISEMENT
  • ಬೆರಳುಗಳಿಗೆ ಗಾಯ ಮತ್ತು ಸೋಂಕು ತಗುಲುವುದು

  • ಉಗುರು ಕಚ್ಚುವುದು

  • ಕಲುಷಿತ ನೀರು ಅಥವಾ ಮಣ್ಣಿನಲ್ಲಿ ನಿರಂತರ ಕೆಲಸ ಮಾಡುವುದು ಉಗುರು ಸುತ್ತಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ಪರಿಹಾರಗಳು

  • ನಿಯಮಿತ್ತವಾಗಿ ಉಗುರು ಕತ್ತರಿಸುವುದು

  • ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು

  • ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಉಗುರು ಸುತ್ತು ಆಗಿರುವ ಬೆರಳನ್ನು 5ರಿಂದ10 ನಿಮಿಷ ಇಡಬೇಕು. ಒಂದೆರಡು ದಿನ ಹೀಗೆ  ಮಾಡುವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ.

  • ಅರಿಶಿನ ಪುಡಿಯನ್ನು ಜತೆ ಕೊಬ್ಬರಿ ಎಣ್ಣೆಯ ಜತೆ ಸೇರಿಸಿ ಬೆಚ್ಚಗೆ ಮಾಡಿ ,ಹಚ್ಚುವುದರಿಂದ ಉಗುರು ಸುತ್ತು ನಿವಾರಣೆ ಆಗುತ್ತದೆ.

  • ಉಗುರು ಸುತ್ತು ಸಂದರ್ಭದಲ್ಲಿ ಎಣ್ಣೆ ಅಂಶ ಇರುವ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು.

  • ಸ್ನಾನ , ಕೈಕಾಲು ತೊಳೆದ ಬಳಿಕ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.

  • ರಸ ತೆಗೆದ ಲಿಂಬುವಿನಿಂದ ವಾರಕೊಮ್ಮೆಉಗುರನ್ನು ಸ್ವಚ್ಛಗೊಳಿಸುವುದರಿಂದ ಸೊಂಕುಗಳನ್ನು ತಡೆಯುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.