ADVERTISEMENT

ಗಮನಿಸಿ: ತಲೆಯಲ್ಲಿನ ವಿಪರೀತ ಹೊಟ್ಟಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಕ್ರಮಗಳಿವು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 7:27 IST
Last Updated 20 ನವೆಂಬರ್ 2025, 7:27 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ತಲೆಯಲ್ಲಿ ಹೊಟ್ಟು ಆಗುವುದು ಸಾಮಾನ್ಯ ಸಂಗತಿ. ಆದರೆ, ಇದರಿಂದ ಜನರು ವಿಪರೀತ ಕಿರಿಕಿರಿಗೆ ಒಳಗಾಗುತ್ತಾರೆ. ಆದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲದೆ, ತಲೆಯ ಆರೋಗ್ಯದ ದೃಷ್ಟಿಯಿಂದಲೂ ಗಂಭೀರ ವಿಷಯವಾಗಿದೆ. ಇದನ್ನು ಕಡಿಮೆ ಮಾಡುವುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.

ತಲೆಹೊಟ್ಟಿಗೆ ಕಾರಣಗಳು:

ADVERTISEMENT

ತಲೆಯ ಹೊಟ್ಟಿಗೆ ಹಲವಾರು ಕಾರಣಗಳಿವೆ. ಮಲಾಸೆಜಿಯಾ ಎಂಬ ಶಿಲೀಂಧ್ರದ ಅತಿಯಾದ ಬೆಳವಣಿಗೆ ಇದಕ್ಕೆ ಮುಖ್ಯ ಕಾರಣ. ಇದರಿಂದಾಗಿ ತಲೆಯ ಚರ್ಮದಲ್ಲಿನ ಸೀಬಮ್ (ಎಣ್ಣೆಯ ಅಂಶ) ಅತಿಯಾಗಿ ಸ್ರವಿಸುತ್ತದೆ. ಈ ವೇಳೆ ತಲೆಯನ್ನು ಸರಿಯಾಗಿ ತೊಳೆಯದಿರುವುದು, ಒತ್ತಡ ಮತ್ತು ಆತಂಕ, ಹವಾಮಾನ ಬದಲಾವಣೆ, ಹಾರ್ಮೋನ್‌ಗಳ ಅಸಮತೋಲನೆ, ಆಹಾರ ಪದ್ಧತಿ ಮತ್ತು ಕೆಲವು ಚರ್ಮ ರೋಗಗಳು ಹೊಟ್ಟಿಗೆ ಕಾರಣವಾಗುತ್ತವೆ.

ನೈಸರ್ಗಿಕ ಪರಿಹಾರಗಳು: 

  • ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಅತ್ಯುತ್ತಮ ಶಿಲೀಂಧ್ರ ನಿರೋಧಕವಾಗಿದೆ. ವಾರಕ್ಕೆ ಎರಡು ಬಾರಿ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ, ಒಂದು ಗಂಟೆ ಬಳಿಕ ತೊಳೆಯಬೇಕು.

  • ಮೆಂತ್ಯ ಬೀಜ: ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಪೇಸ್ಟ್ ಮಾಡಿಕೊಂಡು ತಲೆಗೆ ಲೇಪನ ಮಾಡಿ. 30 ನಿಮಿಷ ಬಿಟ್ಟು ತೊಳೆಯುವುದರಿಂದ ಹೊಟ್ಟು ನಿಯಂತ್ರಣವಾಗುತ್ತದೆ.

  • ಬೇವಿನ ಎಲೆ: ಬೇವಿನ ಎಲೆಗಳನ್ನು ಕುದಿಸಿ, ಆ ನೀರಿನಿಂದ ತಲೆಯನ್ನು ತೊಳೆಯಬಹುದು ಅಥವಾ ಬೇವಿನ ಪೇಸ್ಟ್ ತಲೆಗೆ ಹಚ್ಚುವುದು ಪರಿಣಾಮಕಾರಿಯಾಗಿದೆ.

  • ಮೊಸರು ಮತ್ತು ನಿಂಬೆ: ಮೊಸರಿಗೆ ನಿಂಬೆ ರಸ ಬೆರೆಸಿ ತಲೆಗೆ ಹಚ್ಚಿ 20 ನಿಮಿಷಗಳ ಬಳಿಕ ತೊಳೆಯುವುದರಿಂದ ತಲೆಯ ಚರ್ಮದ ಪಿಎಚ್‌ ಸಮತೋಲನವಾಗುತ್ತದೆ.

  • ಔಷಧೀಯ ಶಾಂಪೂಗಳು: ಕೀಟೋಕೋನಜೋಲ್,  ಸ್ಯಾಲಿಸಿಲಿಕ್ ಆ್ಯಸಿಡ್, ಸಲ್ಫರ್, ಜಿಂಕ್ ಪೈರಿಥಿಯೋನ್ ಅಥವಾ ಟಾರ್ ಹೊಂದಿರುವ ಔಷಧೀಯ ಶಾಂಪೂಗಳು ಪರಿಣಾಮಕಾರಿಯಾಗಿವೆ. ವೈದ್ಯರ ಸಲಹೆಯಂತೆ ವಾರಕ್ಕೆ ಎರಡರಿಂದ ಮೂರು ಬಾರಿ ಬಳಸಬಹುದು

  • ಸ್ಟೀರಾಯ್ಡ್ ಲೋಶನ್‌: ತೀವ್ರ ತುರಿಕೆಯ ಸಂದರ್ಭದಲ್ಲಿ ವೈದ್ಯರ ಸಲಹೆಯ ಮೇರೆಗೆ ಸ್ಟೀರಾಯ್ಡ್ ಲೋಶನ್‌ಗಳು ಬಳಸಬೇಕು.

ಜೀವನಶೈಲಿ ಬದಲಾವಣೆಗಳು:

  • ಪೌಷ್ಟಿಕ ಆಹಾರ: ವಿಟಮಿನ್ ಬಿ, ಜಿಂಕ್, ಒಮೆಗಾ-3 ಹಾಗೂ ಕೊಬ್ಬಿನಾಮ್ಲಗಳಿಂದ ಸಮೃದ್ಧವಾದ ಆಹಾರ ಸೇವಿಸಬೇಕು. ಹಣ್ಣು ಮತ್ತು ಹಸಿರು ತರಕಾರಿಗಳನ್ನು ಸೇವಿಸಬೇಕು. 

  • ಹೆಚ್ಚು ನೀರು ಕುಡಿಯುವುದು: ದಿನಕ್ಕೆ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯುವುದರಿಂದ ತಲೆಯ ಚರ್ಮದಲ್ಲಿ ತೇವಾಂಶ ಕಾಪಾಡಲು ಸಹಕಾರಿಯಾಗುತ್ತದೆ. 

  • ಒತ್ತಡ ನಿರ್ವಹಣೆ: ಯೋಗ, ಧ್ಯಾನ ಮತ್ತು ವ್ಯಾಯಾಮದ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು.

  • ತಪ್ಪಿಸಬೇಕಾದ ವಿಷಯಗಳು: ಹೆಚ್ಚು ಎಣ್ಣೆಯುಕ್ತ ಅಥವಾ ಮಸಾಲೆಯುಕ್ತ ಆಹಾರ, ಅತಿಯಾದ ಸಕ್ಕರೆ ಸೇವನೆ, ಹೆಚ್ಚು ರಾಸಾಯನಿಕ ಹೊಂದಿರುವ ಕೂದಲು ಉತ್ಪನ್ನಗಳ ಬಳಕೆ ಹಾಗೂ ಹೆಚ್ಚು ಬಿಸಿಯಾದ ನೀರಿನಿಂದ ತಲೆ ತೊಳೆಯುವುದನ್ನು ತಪ್ಪಿಸಿ. 

ತಡೆಗಟ್ಟುವ ಕ್ರಮಗಳು: 

  • ನಿಯಮಿತವಾಗಿ ತಲೆ ತೊಳೆಯುವುದು.

  • ಕಡಿಮೆ ರಾಸಾಯನಿಕವುಳ್ಳ ಶ್ಯಾಂಪೂ ಬಳಸುವುದು.

  • ಕೂದಲನ್ನು ಸರಿಯಾಗಿ ಒಣಗಿಸುವುದು.

  • ಬಾಚಣಿಗೆಯನ್ನು ಶುಚಿಯಾಗಿಡುವುದು.

  • ಆರೋಗ್ಯಕರ ಜೀವನಶೈಲಿಯಿಂದ ತಲೆಯ ಹೊಟ್ಟನ್ನು ತಡೆಯಬಹುದು.

(ಡಾ. ಶಿರೀನ್ ಫರ್ಟಾಡೋ, ಹಿರಿಯ ಸಲಹೆಗಾರರು, ವೈದ್ಯಕೀಯ ಮತ್ತು ಸೌಂದರ್ಯ ತ್ವಚ ತಜ್ಞರು, ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.