ADVERTISEMENT

ಇವು ವ್ಯಕ್ತಿತ್ವ ವಿಕಸನದ ಪ್ರಮುಖ ಹಂತಗಳು: ಈ ಕುರಿತು ಮನೋ ವಿಜ್ಞಾನಿಗಳು ಹೇಳೋದನು?

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 9:00 IST
Last Updated 30 ಸೆಪ್ಟೆಂಬರ್ 2025, 9:00 IST
   

ಮಗುವಿನ ದೈಹಿಕ ಬೆಳವಣಿಗೆಯೊಂದಿಗೆ ವ್ಯಕ್ತಿತ್ವ ವಿಕಸನ ಕೂಡ ಸಹಜವಾಗಿಯೇ ಬೆಳೆಯುತ್ತದೆ. ಅದರಲ್ಲೂ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಅವರ ಆಲೋಚನೆಗಳು, ಭಾವನೆಗಳು ಹಾಗೂ ನಡವಳಿಕೆಗಳು ಬದಲಾಗುತ್ತವೆ. ಈ ಬದಲಾವಣೆಗಳು ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತವೆ ಎಂದು ‌ಮನಃಶಾಸ್ತ್ರ ಹೇಳುತ್ತದೆ. 

ಮನಶಾಸ್ತ್ರಜ್ಞರ ಪ್ರಕಾರ, ವ್ಯಕ್ತಿತ್ವವು ಜನ್ಮಸಿದ್ಧ ಗುಣವಾಗಿದೆ. ಇದು ಹುಟ್ಟಿನಿಂದಲೇ ರೂಪುಗೊಳ್ಳುತ್ತದೆ. ವ್ಯಕ್ತಿತ್ವ ಬೆಳವಣಿಗೆಯಲ್ಲಿ ಕುಟುಂಬದ ವಾತಾವರಣ, ಸುತ್ತ ಮುತ್ತಲಿನ ಪರಿಸರ ಹಾಗೂ ಶಿಕ್ಷಣದ ಪ್ರಭಾವವಿರುತ್ತದೆ. ಈ ಅಂಶಗಳು ಮಗುವಿನ ಯೋಚನೆ, ನಡವಳಿಕೆ ಮತ್ತು ಭಾವನೆಗಳನ್ನು ರೂಪುಗೊಳಿಸುತ್ತವೆ. 

ವ್ಯಕ್ತಿತ್ವದ ಬೆ‌ಳವಣಿಗೆ ವಿವರಿಸಲು ಹಲವು ಮನಃಶಾಸ್ತ್ರಜ್ಞರು ಬೇರೆ ಬೇರೆ ಸಿದ್ಧಾಂತಗಳನ್ನು ನೀಡಿದ್ದಾರೆ. ಕೆಲವರು ಅಜ್ಞಾತ ಮನಸ್ಸಿನ ಪ್ರಭಾವವನ್ನು ಒತ್ತಿ ಹೇಳಿದರೆ, ಕೆಲವರು ಸಮಾಜ ಮತ್ತು ಪರಿಸರದ ಪಾತ್ರವನ್ನು ವಿವರಿಸಿದ್ದಾರೆ. ಹೀಗಾಗಿ ವ್ಯಕ್ತಿತ್ವದ ಬೆಳವಣಿಗೆ ಒಂದು ಸಂಕೀರ್ಣ ಪ್ರಕ್ರಿಯೆ ಎಂದೇ ಹೇಳಬಹುದು. 

ADVERTISEMENT

ಮನಃಶಾಸ್ತ್ರದಲ್ಲಿ ಸಿಗ್ಮಂಡ್ ಫ್ರಾಯ್ಡ್ ಅವರ ಮನೋ ವಿಶ್ಲೇಷಣಾ ಸಿದ್ಧಾಂತವನ್ನು ಅತೀ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಸಿದ್ಧಾಂತದಲ್ಲಿ ಮಾನವನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.  ಈ ಸಿದ್ಧಾಂತದ ಪ್ರಕಾರ, ಮನುಷ್ಯನ ಮನಸ್ಸು ಮೂರು ಭಾಗಗಳಾಗಿ ಕೆಲಸ ಮಾಡುತ್ತದೆ. ಅವುಗಳೆಂದರೆ, ಚೇತನ, ಉಪಚೇತನ ಮತ್ತು ಅಚೇತನಗಳಾಗಿವೆ. ವಿಶೇಷವಾಗಿ ಅಚೇತನ ಎಂಬುದು ಮನಸ್ಸಿನಲ್ಲಿರುವ ಆಸೆ, ಭಯ ಮತ್ತು ಅನುಭವಗಳು ವ್ಯಕ್ತಿತ್ವದ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ ಎಂದು ಸಿದ್ದಾಂತವು ಹೇಳುತ್ತದೆ. 

ಫ್ರಾಯ್ಡ್ ಅವರು ವ್ಯಕ್ತಿತ್ವ ಬೆಳವಣಿಗೆಯಲ್ಲಿ ‘ಮನೋ ಲೈಂಗಿಕ (ಸೈಕೋ ಸೆಕ್ಷುಯಲ್) ಹಂತಗಳು‘ ಮುಖ್ಯವೆಂದು ಹೇಳಿದ್ದಾರೆ. ಈ ಹಂತದಲ್ಲಿ ಮಗು ವಿಭಿನ್ನ ಅನುಭವಗಳನ್ನು ಪಡೆಯುತ್ತದೆ ಹಾಗೂ ಪಡೆದ ಅನುಭವದ ಮೇಲೆಯೇ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ಐದು ಹಂತಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

  • ಬಾಯಿಯ ಹಂತ

  • ಗುದದ ಹಂತ

  • ಶಿಶ್ನದ ಹಂತ

  • ಸುಪ್ತ ಹಂತ

  • ಜನನಾಂಗದ ಹಂತ

ಈ ಹಂತಗಳಲ್ಲಿ ಮಗುವಿನ ವ್ಯಕ್ತಿತ್ವವು ಹೇಗೆ ಬೆಳವಣಿಗೆಯಾಗುತ್ತದೆ. ಪ್ರತಿ ಹಂತದಲ್ಲಿಯು ಮಗುವಿನಲ್ಲಿ ಯಾವ ಯಾವ ಗುಣಗಳು ಬೆಳೆಯುತ್ತವೆ ಎಂಬುದನ್ನು ಮುಂದಿನ ಲೇಖನದಲ್ಲಿ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.