ಋತುಮಾನ ಬದಲಾದ ಹಾಗೆ ವಾತಾವರಣದಲ್ಲಿ ಉಷ್ಣತೆ, ತೇವಾಂಶ ಬದಲಾಗುತ್ತದೆ. ಉಷ್ಣಾಂಶ ಹೆಚ್ಚಾದಂತೆ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ.
ದೇಹವನ್ನು ಉಷ್ಣತೆಯಿಂದ ಕಾಪಾಡಿಕೊಳ್ಳಲು ಅನೇಕರು ರಾಸಯನಿಕಯುಕ್ತ ತಂಪು ಪಾನೀಯವನ್ನು ಸೇವಿಸುತ್ತಾರೆ. ಈ ಪಾನೀಯ ಸೇವನೆಯಿಂದ ಆ ಕ್ಷಣಕ್ಕೆ ದೇಹ ತಂಪು ಎನಿಸಿಬಹುದು. ಆದರೆ, ಧೀರ್ಘಕಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ದೇಹವನ್ನು ತಂಪಾಗಿಸರಿಸಿಕೊಳ್ಳುವುದು ಉತ್ತಮ.
ರಾಗಿಯಲ್ಲಿ ನಾರಿನಂಶ, ಪ್ರೋಟಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳಿವೆ. ಅಷ್ಟೇ ಅಲ್ಲದೆ, ವಿಟಮಿನ್ ಬಿ, ವಿಟಮಿನ್ ಡಿ, ಮೆಗ್ನೀಶಿಯಂ ಖನಿಜ ಸತ್ವಗಳನ್ನು ಹೊಂದಿದೆ.
ಬೇಸಿಗೆ ಸಮಯದಲ್ಲಿ ನಿಯಮಿತವಾಗಿ ರಾಗಿ ಮಾಲ್ಟ್, ಅಂಬಲಿ, ಮುದ್ದೆ ಸೇವನೆ ಮಾಡುವುದರಿಂದ ದೇಹವನ್ನು ಉಷ್ಣತೆಯಿಂದ ರಕ್ಷಿಸಿ ನಿರ್ಜಲೀಕರಣದಿಂದ ಪಾರು ಮಾಡಲು ಸಹಕರಿಯಾಗಲಿದೆ.
ಮೊಳಕೆ ಕಾಳುಗಳು ಎಲ್ಲಾ ಕಾಲಕ್ಕೂ ಸೂಕ್ತ ಆಹಾರವಾಗಿದೆ. ಅದರಲ್ಲೂ ಮುಖ್ಯವಾಗಿ ಬೇಸಿಗೆ ಸಮಯದಲ್ಲಿ ಪ್ರತಿದಿನ ನಿಯಮಿತವಾಗಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿಸುವ ಜತೆಗೆ ಶಕ್ತಿ ಹೆಚ್ಚಳಕ್ಕೆ ಉಪಯುಕ್ತವಾಗಲಿದೆ.
ಎಳನೀರು, ಸೌತೆಕಾಯಿ, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು ಕುಡಿಯುವುದರಿಂದ ದೇಹವನ್ನು ತಂಪಾಗಿರಿಸುತ್ತದೆ. ಅಲ್ಲದೆ ಉತ್ತಮ ಆರೋಗ್ಯಕ್ಕೂ ಸಹಕರಿಸಲಿದೆ.
ಪ್ರತಿದಿನ 3–4 ಲೀಟರ್ ನೀರು ಸೇವನೆ ಮಾಡುವುದರಿಂದ ಬಾಯಾರಿಕೆ ಹೋಗಾಲಾಡಿಸುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.