
ಚಿತ್ರ: ಗೆಟ್ಟಿ
ಚಳಿಗಾಲದ ವಾತಾವರಣವು ಶುಷ್ಕತೆಯಿಂದ ಕೂಡಿರುತ್ತದೆ. ಈ ವೇಳೆ ಹೆಚ್ಚಿನ ನೀರು ಕುಡಿಯುವುದು ಉತ್ತಮ. ಆದರೆ ಚಳಿಗಾಲದಲ್ಲಿ ಕೆಲವು ಹಣ್ಣುಗಳ ಸೇವನೆ ಆರೋಗ್ಯವನ್ನು ವೃದ್ಧಿಸುತ್ತದೆ. ಆ ಹಣ್ಣುಗಳು ಯಾವುವು ಎಂಬುದನ್ನು ನೋಡೋಣ.
ಕಾಲಕ್ಕೆ ತಕ್ಕಂತೆ ಸರಿಯಾಗಿ ಹಣ್ಣುಗಳನ್ನು ಆರಿಸಿಕೊಳ್ಳುವುದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು:
ಮೋಸಂಬಿ ಮತ್ತು ನಿಂಬೆ: ಈ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇವುಗಳ ಸೇವನೆ ಚಳಿಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಳಿಂದ ದೇಹವನ್ನು ರಕ್ಷಿಸುತ್ತದೆ. ಅಲ್ಲದೇ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತವೆ.
ಚಕೋತ: ಚಕೋತವು ಹೆಚ್ಚು ವಿಟಮಿನ್ ಸಿ ಅಂಶ ಹೊಂದಿರುವ ಹಣ್ಣಾಗಿದೆ. ಇದರ ಸೇವನೆಯು ಒಣ ಚರ್ಮದ ಸಮಸ್ಯೆಯನ್ನು ದೂರಗೊಳಿಸುತ್ತದೆ.
ದ್ರಾಕ್ಷಿ: ಕಪ್ಪು ಅಥವಾ ಹಸಿರು ದ್ರಾಕ್ಷಿ ಚಳಿಗಾಲದಲ್ಲಿ ಅತ್ಯುತ್ತಮವಾದ ಆಯ್ಕೆಯಾಗಿದೆ. ಇದು ಹೃದಯ ಹಾಗೂ ದೇಹವನ್ನು ಬೆಚ್ಚಗಿರಲು ಸಹಕಾರಿಯಾಗಿದೆ.
ಕ್ಯಾರೆಟ್: ತಾಂತ್ರಿಕವಾಗಿ ಕ್ಯಾರೆಟ್ ತರಕಾರಿಯಾದರೂ ಅದರ ರಸವು ಅತ್ಯಂತ ಪೌಷ್ಟಿಕವಾಗಿದೆ. ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್, ದೃಷ್ಟಿ ಹಾಗೂ ತ್ವಚೆಯ ಕಾಂತಿಗೆ ಅನುಕೂಲವಾಗಿದೆ.
ಪೇರಲೆ: ಈ ಹಣ್ಣು ಚಳಿಗಾಲದಲ್ಲಿ ಸುಲಭವಾಗಿ ದೊರೆಯುತ್ತದೆ. ಈ ಹಣ್ಣು ವಿಟಮಿನ್ ಸಿ ಹೇರಳವಾಗಿರುತ್ತದೆ. ರಕ್ತದೊತ್ತಡ ನಿಯಂತ್ರಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ದಾಳಿಂಬೆ: ರಕ್ತವನ್ನು ಶುದ್ಧಿಗೊಳಿಸುವಲ್ಲಿ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ದಾಳಿಂಬೆ ಪ್ರಮುಖ ಪಾತ್ರವಹಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.